ಮೈ ಉರಿ ತಾಳಲಾರದೆ ನೀರಿನ ಹೊಂಡದಲ್ಲೇ 5 ವರ್ಷ ಕಳೆದ ಬಾಲಕನಿಗೆ ನೆರವಿನ ಹಸ್ತ ಚಾಚಿದ ಅನಂತ್ ಅಂಬಾನಿ! Bengal Teen Iqbal

ಮೈ ಉರಿ ತಾಳಲಾರದೆ ನೀರಿನ ಹೊಂಡದಲ್ಲೇ 5 ವರ್ಷ ಕಳೆದ ಬಾಲಕನಿಗೆ ನೆರವಿನ ಹಸ್ತ ಚಾಚಿದ ಅನಂತ್ ಅಂಬಾನಿ! Bengal Teen Iqbal
ಮೈ ಉರಿ ತಾಳಲಾರದೆ ನೀರಿನ ಹೊಂಡದಲ್ಲೇ 5 ವರ್ಷ ಕಳೆದ ಬಾಲಕನಿಗೆ ನೆರವಿನ ಹಸ್ತ ಚಾಚಿದ ಅನಂತ್ ಅಂಬಾನಿ! Bengal Teen Iqbal
Published on

ಪ್ರಮುಖ ಮುಖ್ಯಾಂಶಗಳು

  • ಮೈ ಉರಿ ತಾಳಲಾರದೆ ದಿನವಿಡೀ ನೀರಿನಲ್ಲೇ ಕಾಲ ಕಳೆಯುತ್ತಿದ್ದ ಮುರ್ಷಿದಾಬಾದ್ ಬಾಲಕ
  • ಕೊನೆಗೂ ಬಾಲಕನ ನೋವಿಗೆ ಮುಕ್ತಿ ಸಿಗುವ ಆ ಸಮಯ ಬಂದೇ ಬಿಟ್ಟಿತು
  • ಮುಂಬೈನ ಪ್ರತಿಷ್ಠಿತ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ
  • ಅನಂತ್​ ಅಂಬಾನಿ ಸೂಚನೆಯ ಮೇರೆಗೆ ಮುಂಬೈ ಆಸ್ಪತ್ರೆಗೆ ಕರೆತಂದ ವೈದ್ಯಕೀಯ ತಂಡ
ನವದೆಹಲಿ: ತನ್ನ ಗಂಭೀರ ಆರೋಗ್ಯ ಸಮಸ್ಯೆಯಿಂದ ಉಂಟಾಗುತ್ತಿದ್ದ ಮೈ ಉರಿಯನ್ನು ತಡೆಯಲು ಬರೋಬ್ಬರಿ ಐದು ವರ್ಷಗಳ ಕಾಲ ನೀರಿನ ಹೊಂಡದಲ್ಲೇ ಜೀವನ ಕಳೆದ ಬಾಲಕ ಇಕ್ಬಾಲ್​ಗೆ ( Bengal Teen Iqbal ) ಮುಂಬೈನ ಪ್ರತಿಷ್ಠಿತ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಹೊಸ ಜೀವನವನ್ನು ನೀಡಿದೆ. 
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾ ನಿವಾಸಿಯಾದ ಇಕ್ಬಾಲ್ (16), ಮೈ ಉರಿ ತಾಳಲಾರದೇ ದಿನವಿಡೀ ನೀರಿನ ಹೊಂಡದಲ್ಲೇ ಕಾಲಳೆಯುತ್ತಿದ್ದ. ಬಾಲಕನ ಈ ವಿಚಿತ್ರ ಮತ್ತು ಅಸಾಮಾನ್ಯ ವರ್ತನೆಯು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಆತ ನೀರಿನಿಂದ ಹೊರಬಂದಾಗಲೆಲ್ಲ ಮೈಯೆಲ್ಲಾ ಉರಿಯುತ್ತದೆ ಎಂದು ದೂರುತ್ತಿದ್ದ. ಇದಿಷ್ಟೇ ಅಲ್ಲದೆ, ನನ್ನನ್ನು ಅತಿಮಾನುಷ ಶಕ್ತಿಯೊಂದು ನಿಯಂತ್ರಿಸುತ್ತಿದೆ ಎಂದು ನಂಬಿದ್ದ. ಬಡತನದ ಕಾರಣದಿಂದಾಗಿ ಕುಟುಂಬವು ಆತನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿತ್ತು. ಇತ್ತ ಸ್ಥಳೀಯರೇ ಆ ಬಾಲಕನಿಗೆ ಊಟ ತಂದುಕೊಡುತ್ತಿದ್ದರು. ಅದನ್ನೂ ನೀರಿನಲ್ಲಿದ್ದುಕೊಂಡೇ ಸವಿಯುತ್ತಿದ್ದ. ಬಾಲಕನ ಕತೆ ಕೇಳಿದವರೆಲ್ಲ ಆತನ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದರು.
ಇಕ್ಬಾಲ್​ನ ನೋವಿನ ಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಅದು  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ವಿಶ್ವದ ಬೃಹತ್ ವನ್ಯಜೀವಿ ಸಂರಕ್ಷಣಾ ಕೇಂದ್ರಗಳಲ್ಲಿ ಒಂದಾದ 'ವಂತಾರಾ' ( Vantara ) ಸಂಸ್ಥೆಯ ಸಂಸ್ಥಾಪಕ ಅನಂತ್ ಅಂಬಾನಿ ಅವರ ಗಮನಕ್ಕೂ ಬಂದಿತು. ಬಾಲಕನ ಸ್ಥಿತಿಯನ್ನು ನೋಡಿ ಭಾವುಕರಾದ ಅನಂತ್​ ಅಂಬಾನಿ ತಕ್ಷಣವೇ ತಮ್ಮ ಆಸ್ಪತ್ರೆಯ ವೈದ್ಯರಿಗೆ ಬಾಲಕನ ಯೋಗಕ್ಷೇಮ ನೋಡುವಂತೆ ಸೂಚನೆ ನೀಡಿದರು. ಕೂಡಲೇ ವೈದ್ಯಕೀಯ ತಜ್ಞರ ತಂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿತು. 
ಅನಂತ್ ಅಂಬಾನಿ ಅವರ ನಿರ್ದೇಶನದ ಮೇರೆಗೆ, ತಕ್ಷಣವೇ ಇಕ್ಬಾಲ್‌ನನ್ನು ಏರ್‌ಲಿಫ್ಟ್ ಮೂಲಕ ಮುಂಬೈಗೆ ಕರೆತರಲಾಗಿದ್ದು, ಪ್ರಸ್ತುತ ಆತನಿಗೆ ವಿಶೇಷ ಚಿಕಿತ್ಸೆ ಹಾಗೂ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಮುಂಬೈನ ಪ್ರತಿಷ್ಠಿತ 'ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ'ಗೆ (Sir H. N. Reliance Foundation Hospital) ದಾಖಲಿಸಲಾಗಿದೆ. ಹೊಂಡದಲ್ಲೇ ಐದು ವರ್ಷಗಳನ್ನು ಕಳೆದಿದ್ದ ಇಕ್ಬಾಲ್ ಈಗ ದೇಶದ ಪ್ರಮುಖ ವೈದ್ಯಕೀಯ ತಜ್ಞರ ನಿಗಾದಲ್ಲಿ ಆರೈಕೆ ಪಡೆಯುತ್ತಿದ್ದು, ಇದು ಆತನ ಬದುಕಿನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಆತನಿಗೆ ಈಗ ಉತ್ತಮ ಆರೈಕೆ, ಗೌರವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹೊಸ ಭರವಸೆ ಲಭಿಸಿದೆ.
ಒಂದೆಡೆ ಬಡತನದ ಬೇಗೆ, ಮತ್ತೊಂದೆಡೆ ಆರೋಗ್ಯ ಸಮಸ್ಯೆಯಿಂದ ಸಹಿಸಲಾರದಷ್ಟು ಉರಿ ಅನುಭವಿಸಿ, ಮೋಜಿನ ಕ್ಷಣಗಳನ್ನು ಮಿಸ್​ ಮಾಡಿಕೊಳ್ಳುತ್ತಿದ್ದ ಬಾಲಕ ಇಕ್ಬಾಲ್​ ಪಾಲಿಗೆ ಅನಂತ್​ ಅಂಬಾನಿ ಅವರು ಹೊಸ ಆಶಾಕಿರಣವಾಗಿದ್ದಾರೆ. ಇದೀಗ ಬಾಲಕ ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಸಹಜ ಸ್ಥಿತಿಗೆ ಬಂದು ಎಂದಿನಂತೆ ಮಕ್ಕಳೊಂದಿಗೆ ಮೋಜಿನ ದಿನಗಳನ್ನು ಆನಂದಿಸಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net