_1765822679606.webp?w=480&auto=format%2Ccompress&fit=max)
_1765822679606.webp?w=480&auto=format%2Ccompress&fit=max)
ಸ್ವಾತಂತ್ರ್ಯ್ರಾಪ್ತಿಗಾಗಿ ಬಾಂಗ್ಲಾದೇಶ ನಡೆಸಿದ ಹೋರಾಟ ಧೀರೋದಾತ್ತ ಹಾಗೂ ರೋಮಾಂಚಕ. ಪೂರ್ವ ಪಾಕಿಸ್ತಾನದ ಲಕ್ಷಾಂತರ ಜನರು ಇದಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಕಡೆಗೂ, ಭಾರತದ ಸಹಾಯ ಹಾಗೂ ಸಕ್ರಿಯ ಸಹಭಾಗಿತ್ವದೊಂದಿಗೆ ಈ ಯುದ್ಧವನ್ನು ಗೆದ್ದ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿ ಉದಯವಾಯಿತು. ಆ ಗೆಲುವಿನ ಕ್ಷಣಗಳಿಗೀಗ 55 ವರ್ಷ. ತನ್ನಿಮಿತ್ತ ಇಲ್ಲಿದೆ ಬಾಂಗ್ಲಾದ ಸ್ವಾತಂತ್ರ್ಯಾಥೆ.
ಸ್ವತಂತ್ರ ಭಾರತ ಗಳಿಸಿದ ನಿರ್ಣಾಯಕ ಗೆಲುವು ಇದು. ಬೇರೆ ಯುದ್ಧಗಳಲ್ಲಿ ಇಂಥ ಗೆಲುವು ದಾಖಲಿಸಲು ಸಾಧ್ಯವಾಗಿರಲಿಲ್ಲ ಮತ್ತು ಶತ್ರುಗಳಿಂದ ಶರಣಾಗತಿಯ ಪತ್ರ ಪಡೆದಿರಲಿಲ್ಲ. 1947-48ರಲ್ಲಿನ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತಕ್ಕೆ ಹಿನ್ನಡೆ, 1965ರಲ್ಲಿ ಚೀನಾದೊಂದಿಗೆ ನಡೆದ ಯುದ್ಧದಲ್ಲಿ ಸೋಲು ಉಂಟಾದ ಬಳಿಕ 1971ರಲ್ಲಿ ಭಾರತದ ಅದ್ಭುತ ಗೆಲುವಿನ ಮೂಲಕ ಬಾಂಗ್ಲಾದೇಶ ಉದಯವಾಯಿತು. ಬಾಂಗ್ಲಾದೇಶ ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ 30 ಲಕ್ಷಕ್ಕೂ ಅಧಿಕ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿಗೀಡಾದರು. ಪೂರ್ವ ಪಾಕಿಸ್ತಾನದ ಸುಮಾರು 2 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಆದರೆ ಎನ್ಜಿಓಗಳ ಪ್ರಕಾರ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಂಖ್ಯೆ 3 ಲಕ್ಷಕ್ಕೂ ಅಧಿಕ. ಯುದ್ಧದ ಕೊನೆಗೆ ಪಾಕಿಸ್ತಾನದ 90 ಸಾವಿರ ಸೈನಿಕರು ಶರಣಾದರು. ಇವರನ್ನು ಭಾರತೀಯ ಸೈನ್ಯವು ಸೆರೆಹಿಡಿದಿತ್ತು. ಬಳಿಕ 1974ರಲ್ಲಿ ಭಾರತ-ಪಾಕಿಸ್ತಾನ ಒಪ್ಪಂದದ ಪ್ರಕಾರ ಅವರನ್ನು ಬಿಡುಗಡೆಗೊಳಿಸಲಾಯಿತು.
ಹದಿಮೂರು ದಿನಗಳ ಯುದ್ಧದ ನಂತರ 1971 ಡಿಸೆಂಬರ್ 16ರ ಸಂಜೆ 4.31ಕ್ಕೆ ಪಾಕಿಸ್ತಾನದ ಸೇನಾಧಿಕಾರಿ ಜನರಲ್ ಎ.ಎ.ಕೆ. ನಿಯಾಜಿ ‘ಶರಣಾಗತಿಯ ಪತ್ರ’ಕ್ಕೆ ಸಹಿ ಹಾಕಿದರು. ಪಾಕಿ ಸ್ತಾನದ ಸಂಪೂರ್ಣ ಸೋಲು ಮತ್ತದರ ವಿಭಜನೆ ಸ್ವತಂತ್ರ ಭಾರತದ ಮೊದಲ ಹಾಗೂ ಇದುವರೆಗಿನ ಏಕೈಕ ನಿರ್ಣಾ ಯಕ ಗೆಲುವು, ಶರಣಾಗತಿ ಪತ್ರ ಭಾರತ ತನ್ನ ಇದುವರೆಗಿನ ಇತಿಹಾಸದಲ್ಲಿ ಪಡೆದುಕೊಂಡ ಏಕೈಕ ಲಿಖಿತ ವಿಜಯ ದಾಖಲೆ!
ಭಾರತದ ವೀರೋಚಿತ ಹೋರಾಟದ ನೆರವಿನಿಂದ ಸ್ವಾತಂತ್ರ್ಯ ಪಡೆದುಕೊಂಡ ಬಾಂಗ್ಲಾದೇಶ, ಭಾರತದೊಂದಿಗೆ ಉತ್ತಮ ಸಂಬಂಧಗಳನ್ನೇ ಕಾಯ್ದುಕೊಂಡಿತ್ತು. 2015ರಲ್ಲಿ ಗಡಿಯಲ್ಲಿ ಹಳ್ಳಿಗಳ ಕೊಡುಕೊಳ್ಳುವಿಕೆ ಮುಖಾಂತರ ಭಾರತ-ಬಾಂಗ್ಲಾದೇಶ ಗಡಿವಿವಾದವೂ ಬಹುತೇಕ ತಣ್ಣಗಾಯಿತು. ಆದರೆ, ಶೇಖ್ ಹಸೀನಾ ರಾಜೀನಾಮೆಯ ನಂತರ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ಈ ಸರ್ಕಾರ ಚೀನಾಗೆ ಹತ್ತಿರವಾಗಿ ನಿರಂತರವಾಗಿ ಭಾರತ ವಿರೋಧಿ ನಿರ್ಧಾರಗಳನ್ನು ತಳೆಯುತ್ತಿದೆ. ಮಾತ್ರವಲ್ಲ, ಬಾಂಗ್ಲಾದ ಜನರಲ್ಲೂ ಭಾರತವಿರೋಧಿ ಭಾವನೆಗಳನ್ನು ಬಿತ್ತಲಾಗುತ್ತಿದೆ. ಇತಿಹಾಸವನ್ನು ಮರೆಯುತ್ತಿರುವ ಬಾಂಗ್ಲಾದ ನಾಯಕರು, ಸಾಮಾನ್ಯ ಜನರ ವರ್ತಮಾನವನ್ನು ಹಾಳುಗೆಡವುತ್ತ, ಭವಿಷ್ಯವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಈ ಮೂಲಕ ಕೃತಘ್ನ ರಾಷ್ಟ್ರವಾಗುತ್ತಿರುವ ಬಾಂಗ್ಲಾದೇಶ ಮಹಾಪ್ರಮಾದ ಮಾಡುತ್ತಿದೆ. 2026ರ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದರೂ, ಅದು ನಿಷ್ಪಕ್ಷಪಾತ, ಪಾರದ ರ್ಶಕವಾಗಿ ನಡೆಯಲಿದೆಯೇ ಎಂಬ ಸವಾಲೂ ಕಾಡುತ್ತಿದೆ.
‘ಭೋಲಾ’ ಎಂಬ ಭೀಕರ ಚಂಡಮಾರುತ ಪೂರ್ವ ಪಾಕಿಸ್ತಾನಕ್ಕೆ 1970ರಲ್ಲಿ ಅಪ್ಪಳಿಸಿತು. ಜನ ಚಂಡಮಾರುತದ ತೀವ್ರತೆಗೆ ನಲುಗಿಹೋದರು. 5 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯೂ ಘೋಷಣೆ ಆಗಿದ್ದವು. ಆದರೆ, ಚಂಡಮಾರುತದಿಂದ ತೀವ್ರ ಹಾನಿಯಾದಾಗ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಪರಿಹಾರ ಸಾಮಗ್ರಿ ಕಳುಹಿಸುವ ಮೊದಲೇ ಭಾರತದ ನೆರವು ತಲುಪಿತ್ತು. ‘ಇಂಥ ಹೊತ್ತಲ್ಲಿ ನಾವು ಚುನಾವಣೆ ಎದುರಿಸುವುದು ಸಾಧ್ಯವಿಲ್ಲ, ಅದನ್ನು ಮುಂದೂಡಿ’ ಎಂದು ಪೂರ್ವ ಪಾಕಿಸ್ತಾನಿಯರು, ಮುಖ್ಯವಾಗಿ ಅವಾಮಿ ಲೀಗ್ ಕೇಳಿಕೊಂಡಾಗ ಆ ಬೇಡಿಕೆಯನ್ನು ಮಿಲಿಟರಿ ಸರ್ಕಾರ ತಳ್ಳಿಹಾಕಿತು. ಭೀಕರ ಪ್ರವಾಹ ಜನಜೀವನವನ್ನು ತತ್ತರಗೊಳಿಸಿತು. ಪರಿಹಾರ ಕಾರ್ಯ ಆರಂಭಿಸಲು ಮುಜಿಬುರ್ ರೆಹಮಾನ್ ಸರ್ಕಾರಕ್ಕೆ ವಿನಂತಿಸಿದರು.
ಆದರೆ ಅಂದಿನ ಯಾಹ್ಯಾ ಖಾನ್ ಸರ್ಕಾರ ಸೂಕ್ತ ಪರಿಹಾರ ಒದಗಿಸದೆ ಚುನಾವಣೆ ಘೊಷಿಸಿತು. ಜನರು ಮತ್ತೊಮ್ಮೆ ಅವಾಮಿ ಲೀಗ್ನ್ನು ಬೆಂಬಲಿಸಿದರೂ ಸರ್ಕಾರ ಮುಜಿಬುರ್ ರೆಹಮಾನ್ರ ಗೆಲುವನ್ನು ನಿರಾಕರಿಸಿತು. ಇದು ಬಾಂಗ್ಲಾದೇಶದ ಸ್ವಾತಂತ್ರ್ಯ ಆಂದೋಲನಕ್ಕೆ ನಾಂದಿ ಹಾಡಿತು. ಬಾಂಗ್ಲಾದೇಶದ ಧ್ವಜವನ್ನು ಢಾಕಾದಲ್ಲಿ ಹಾರಿಸಲಾಯಿತು. ಹೋರಾಟವನ್ನು ಹತ್ತಿಕ್ಕಲು ‘ಆಪರೇಶನ್ ಸರ್ಚ್ಲೈಟ್’ನ್ನು ಆರಂಭಿಸಲಾಯಿತು. ಮುಜಿಬುರ್ ರೆಹಮಾನ್ ಸೇರಿದಂತೆ ಹಲವು ಹೋರಾಟಗಾರರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು. ಅಪಾರ ಹಿಂಸಾಚಾರಗಳು ಪೂರ್ವ ಪಾಕಿಸ್ತಾನದಲ್ಲಿ ನಡೆದುಹೋದವು. ಅದು ಜನರ ಸಾವುನೋವುಗಳಿಗೆ ಕಾರಣವಾಯಿತು. ಬಾಂಗ್ಲಾದೇಶದ ಸ್ಥಾಪನೆಗಾಗಿ ಮುಜಿಬುರ್ ರೆಹಮಾನ್ ಭಾರತದ ಸಹಾಯ ಕೇಳಿದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಮಾನವೀಯ ನೆಲೆಯಲ್ಲಿ ಬಾಂಗ್ಲಾ ವಿಮೋಚನೆಗೆ ಬೆಂಬಲ ನೀಡಿದರು.
ಪಾಕಿಸ್ತಾನ ಸರ್ಕಾರದ ತಾರತಮ್ಯ, ಭೇದಭಾವ ನೀತಿ ಯಿಂದ ನಲುಗಿಹೋದ ಪೂರ್ವ ಪಾಕಿಸ್ತಾನಿಯರು ಸ್ವಾತಂತ್ರ್ಯ್ಕಾಗಿ ತುಳಿದ ಹಾದಿ ದುರ್ಗಮವಾಗಿತ್ತು. ‘ಮಾಡು ಇಲ್ಲವೆ ಮಡಿ’ ಎಂಬ ರೀತಿಯಲ್ಲಿ ಅವರು ಪಾಕ್ ಸರ್ಕಾರದ ವಿರುದ್ಧ ಯುದ್ಧ ಸಾರಿದರು. ಇದನ್ನು ಸದೆಬಡಿಯಲು ಪಾಕ್ ಸರ್ಕಾರ ಶತ ಪ್ರಯತ್ನ ಮಾಡಿತಾದರೂ ಸ್ವಾತಂತ್ರ್ಯ ಕನಸು, ಹೋರಾಟದ ರೋಷದ ಮುಂದೆಲ್ಲ ಅವು ನಿಷ್ಪಲವಾದವು. ಹಾಗಂತ, ತೀರಾ ನಿರ್ಣಾಯಕ ಹಂತದಲ್ಲಿ ಭಾರತ ಬಾಂಗ್ಲಾದ ನೆರವಿಗೆ ಬಂದಿರದಿದ್ದರೆ ಪೂರ್ವ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿ ಉದಯಿಸುವ ನಿರೀಕ್ಷೆ ಅಷ್ಟು ಬೇಗ ಈಡೇರುತ್ತಿರಲಿಲ್ಲ.
ಬಾಂಗ್ಲಾದೇಶದ (ಪೂರ್ವ ಪಾಕಿಸ್ತಾನ) ಸ್ವಾತಂತ್ರ್ಯ ಹೋರಾಟ ಭಾರತದಷ್ಟು ದೀರ್ಘವಲ್ಲ. ಆದರೆ ಅಲ್ಪಾವಧಿಯಲ್ಲಿ ಪೂರ್ವ ಪಾಕಿಸ್ತಾನಿಯರು ಕಳೆದುಕೊಂಡಿದ್ದು, ಪಡೆದುಕೊಂಡಿದ್ದು-ಎರಡೂ ಹೆಚ್ಚು. ಪೂರ್ವ ಪಾಕಿಸ್ತಾನದ ಸನ್ನಿವೇಶವಂತೂ ಭೀಕರವಾಗಿತ್ತು. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಧರ್ವಂಧತೆಯ ಎಲ್ಲ ಸ್ವರೂಪವನ್ನು ಪಾಕಿಸ್ತಾನದ ಸೈನಿಕರು ಮತ್ತು ಅವರಿಗೆ ಸಹಕರಿಸಿದ ಜನರು ಪೂರ್ವ ಪಾಕಿಸ್ತಾನದ ಜನತೆಯ ಮೇಲೆ ತೋರ್ಪಡಿಸಿದರು. ಈ ಶೋಷಣೆಯ ಕರಾಳ ಅಧ್ಯಾಯಕ್ಕೆ, ದೌರ್ಜನ್ಯದ ಅತಿರೇಕಕ್ಕೆ ಸುಮಾರು 30 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದರೆ, ಲೆಕ್ಕವಿಲ್ಲದಷ್ಟು ಜನರು ಅನಾಥರಾದರು. ಈ ಆಕ್ರೋಶದ ಸ್ಫೋಟ ಭೀಕರ ಪರಿಣಾಮ ಉಂಟುಮಾಡುವುದರಲ್ಲಿ ಸಂಶಯವಿರಲಿಲ್ಲ. ಕಡೆಗೂ ಆದದ್ದು ಹಾಗೆಯೇ. ಪಾಕ್ ಸೈನಿಕರ ಶೋಷಣೆ, ದೌರ್ಜನ್ಯ, ದುರಹಂಕಾರ, ಇದೆಲ್ಲದ್ದಕ್ಕೂ ಬೆಂಬಲವಾಗಿ ನಿಂತಿದ್ದ ಪಾಕ್ ಸರ್ಕಾರದ ವಿರುದ್ಧ ಸಮರ ಸಾರಿದ ಪೂರ್ವ ಪಾಕಿಸ್ತಾನಿಯರು ಇದಕ್ಕಾಗಿ ಭಾರತದ ನೆರವು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಸದಾ ಮಾನವೀಯ ಹೋರಾಟಗಳ ಪರವಾಗಿ ನಿಂತಿರುವ ಭಾರತ, ಪಾಕ್ ಸೊಕ್ಕಡಗಿಸಲು ಪೂರ್ವ ಪಾಕಿಸ್ತಾನಿಯರ ನೆರವಿಗೆ ನಿಂತಿತು. ಈ ಬೆಳವಣಿಗೆ ನಿರೀಕ್ಷಿಸಿರದಿದ್ದ ಪಾಕ್ ಸರ್ಕಾರ ಬೆಚ್ಚಿಬಿತ್ತು. ಪಾಕಿಸ್ತಾನ ಮತ್ತು ಅದರ ಮಿತ್ರಪಡೆಗಳನ್ನು ಮಣಿಸಿದಾಗ ಪೂರ್ವ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಗಿ ಬಾಂಗ್ಲಾದೇಶ ಎಂಬ ಹೆಸರಲ್ಲಿ ಉದಯವಾಯಿತು (1971ರ ಡಿಸೆಂಬರ್ 16). ಇದಾದ ಬಳಿಕ ಸೆರೆಸಿಕ್ಕ ಮತ್ತು ಶರಣಾದ ಯುದ್ಧಕೈದಿಗಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತಾದರೂ, ಪಾಕ್ ಸೇನೆಗೆ ಸಹಕರಿಸಿ, ತಮ್ಮದೇ ಪ್ರತ್ಯೇಕ ಪಡೆಗಳ ಮೂಲಕ ಜನರ ಮೇಲೆ ದಾಳಿ ಮಾಡಿದ್ದ, ಅದಕ್ಕೆ ಪ್ರಚೋದಿಸಿದ್ದ ಸಂಘಟನೆಗಳ ನಾಯಕರನ್ನು ಬಂಧಿಸಿ, ಸೆರೆಗೆ ತಳ್ಳಲಾಯಿತು.
ಪಾಕಿಸ್ತಾನದ ಸಹಕಾರದಿಂದ ಚೀನಾ ನಮ್ಮ ಪೂರ್ವೇತ್ತರ ರಾಜ್ಯಗಳನ್ನು ದೇಶದ ಮುಖ್ಯ ಭೂಭಾಗದಿಂದ ಕತ್ತರಿಸಲು ಪ್ರಯತ್ನಿಸುವ ಸಾಧ್ಯತೆಯಿತ್ತು. ಬಾಂಗ್ಲಾದೇಶದ ವಿಮೋಚನೆಯಿಂದಾಗಿ ಈಶಾನ್ಯ ಭಾರತಕ್ಕಿದ್ದ ದೊಡ್ಡ ಗಂಡಾಂತರ ದೂರವಾಯಿತು.
ಭಾರತದಂತೆ ಬಾಂಗ್ಲಾದೇಶ ಕೂಡ ರವೀಂದ್ರನಾಥ್ ಟ್ಯಾಗೋರರ ರಚನೆಯನ್ನು ರಾಷ್ಟ್ರಗೀತೆಯಾಗಿಸಿಕೊಂಡಿದೆ. ‘ಆಮಾರ್ ಸೋನಾರ್ ಬಾಂಗ್ಲಾ’ ಬಾಂಗ್ಲಾದೇಶದ ರಾಷ್ಟ್ರಗೀತೆ.
1971ರ ಡಿಸೆಂಬರ್ 16ರಂದು ಭಾರತದ ಲೆಫ್ಟಿನಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಸಮ್ಮುಖದಲ್ಲಿ ಪಾಕ್ ಲೆಫ್ಟಿನಂಟ್ ಜನರಲ್ ಎ.ಎ.ಕೆ. ನಿಯಾಜಿ ಅವರು ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭ.
ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅದಕ್ಕೆ ಸಹಕರಿಸಿ, ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿತು. ಭಾರತದ ಪ್ರದೇಶಗಳ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದಾಗ, ಭಾರತದ ಸೈನ್ಯವು ಪ್ರತಿದಾಳಿ ನಡೆಸುವ ಮೂಲಕ ಅಧಿಕೃತವಾಗಿ ಯುದ್ಧದಲ್ಲಿ ಪಾಲ್ಗೊಂಡಿತು. ಬಾಂಗ್ಲಾದೇಶದ ರಾಷ್ಟ್ರೀಯ ಪಡೆಗಳೊಂದಿಗೆ ಭಾರತೀಯ ಸೇನಾಪಡೆಗಳು ಪಾಕ್ ಸೈನ್ಯದ ವಿರುದ್ಧ ಹೋರಾಡಿದವು. 1971ರ ಡಿಸೆಂಬರ್ 3ರಂದು ಈ ನಿರ್ಣಾಯಕ ಯುದ್ಧ ಆರಂಭವಾಯಿತು. 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಕಡೆಗೆ ಪಾಕ್ ಪಡೆಗಳಿಗೆ ಸೋಲಿನ ರುಚಿ ಉಣಿಸಲಾಯಿತು. 1971ರ ಡಿ.16ರಂದು ಯುದ್ಧ ಕೊನೆಗೊಂಡು ಬಾಂಗ್ಲಾ ನ್ಯಾಷನಲ್ ರೈಫಲ್ಸ್ಗೆ ಗೆಲುವು ಒಲಿಯಿತು. ಪಾಕ್ ಅದೆಷ್ಟು ದಾರುಣ ಪರಾಭವ ಅನುಭವಿಸಿತು ಎಂದರೆ ಅದರ 90 ಸಾವಿರಕ್ಕೂ ಅಧಿಕ ಸೈನಿಕರು ಶರಣಾದರು. ಎರಡನೇ ಮಹಾಯುದ್ಧದ ಬಳಿಕ ಅತಿದೊಡ್ಡ ಸಂಖ್ಯೆಯಲ್ಲಿ ಯುದ್ಧ ಕೈದಿಗಳು ಸೆರೆಸಿಕ್ಕಿದ್ದು ಇದೇ ಮೊದಲಾಗಿತ್ತು. ಈ ಯುದ್ಧದ ಸಂದರ್ಭದಲ್ಲಿ 10 ಲಕ್ಷಕ್ಕೂ ಅಧಿಕ ಬಾಂಗ್ಲಾ ನಿರಾಶ್ರಿತರು ಭಾರತಕ್ಕೆ ವಲಸೆ ಬಂದರು.
1973ರ ಅಂತಾರಾಷ್ಟ್ರೀಯ ಕ್ರಿಮಿನಲ್ ಆಯೋಗದ ಕಾಯ್ದೆ ಅಡಿಯಲ್ಲಿ ಎರಡು ನಾಗರಿಕ ನ್ಯಾಯಪೀಠಗಳು ಸ್ಥಾಪನೆ ಗೊಂಡವು. 22 ಜನ ತಪ್ಪಿತಸ್ಥರನ್ನು ಸೆರೆ ಹಿಡಿದು ನ್ಯಾಯಪೀಠದ ಮುಂದೆ ಹಾಜರು ಪಡಿಸಲಾಯಿತು. ವಿವಿಧ ಅಪರಾಧಗಳಲ್ಲಿ ಭಾಗಿಯಾಗಿ ಆರೋಪ ಎದುರಿಸುತ್ತಿದ್ದ ಕ್ರಿಮಿನಲ್ಗಳು ಮತ್ತು ಅವರ ಬೆಂಬಲಿ ಗರನ್ನು ಅಪರಾಧಿಗಳೆಂದು ಪರಿ ಗಣಿಸಲಾಯಿತು. ಇವರಲ್ಲಿ ಹೆಚ್ಚಿನ ವರು ಜಮಾತ್-ಇ-ಇಸ್ಲಾಮಿಗೆ ಸೇರಿದವರು. ಇನ್ನು ಕೆಲವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯವರು