ಪೈಲಟ್ ಸ್ಮಿತ್ ಮಚ್ಚಾರ್ ಮೇಲಿನ ಅಟ್ಯಾಕ್​ ಕೇಸ್​ನಲ್ಲಿ ಇದೊಂದು ಮಾತ್ರ ಇನ್ನೂ ರಿವೀಲ್​ ಆಗಿಲ್ಲ! Smit Machchhar

ಕ್ಯಾಪ್ಟನ್ ಸ್ಮಿತ್​ ಮೇಲೆ ಚಾಕುವಿನಿಂದ ಇರಿದು, ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಭೀಕರ ಘಟನೆಯು ಜಾಗತಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಈ ಘಟನೆಗೆ ಸಂಬಂಧಿಸಿದ ಒಂದೊಂದೆ ಆಘಾತಕಾರಿ ಮಾಹಿತಿಗಳು ಮಾಧ್ಯಮಗಳು ಹೊರಬೀಳುತ್ತಿವೆ.
Smit Machchhar
ಪೈಲಟ್ ಸ್ಮಿತ್ ಮಚ್ಚಾರ್ ಮೇಲಿನ ಅಟ್ಯಾಕ್​ ಕೇಸ್​ನಲ್ಲಿ ಇದೊಂದು ಮಾತ್ರ ಇನ್ನೂ ರಿವೀಲ್​ ಆಗಿಲ್ಲ! Smit Machchhar
Published on: 

Smit Machchhar: 'ಫ್ಲೈದುಬೈ'ನ FZ1073 ವಿಮಾನ ಘಟನೆಯಲ್ಲಿ ಕೋ-ಪೈಲಟ್​ನ ಪಿತೂರಿಯ ಭೀಕರ ದಾಳಿಗೆ ಎದೆಗುಂದದೆ, 180 ಮಂದಿಯ ಜೀವ ಉಳಿಸುವ ಮೂಲಕ ಸಾಹಸ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿರುವ ಮಧ್ಯೆ ಒಂದು ವಿಷಯ ಮಾತ್ರ ಇನ್ನೂ ರಿವೀಲ್​ ಆಗದಿರುವುದು ಸದ್ಯ ಜನರಲ್ಲಿ ತೀವ್ರ ಕಾಡತೊಡಗಿದೆ.

ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ 'ಫ್ಲೈದುಬೈ' (Flydubai flight incident ) ವಿಮಾನದಲ್ಲಿ ಸಹ ಪೈಲಟ್ ಒಬ್ಬ ಕ್ಯಾಪ್ಟನ್ ಸ್ಮಿತ್​ ಮೇಲೆ ಚಾಕುವಿನಿಂದ ಇರಿದು, ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಭೀಕರ ಘಟನೆಯು ಜಾಗತಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಈ ಘಟನೆಗೆ ಸಂಬಂಧಿಸಿದ ಒಂದೊಂದೆ ಆಘಾತಕಾರಿ ಮಾಹಿತಿಗಳು ಮಾಧ್ಯಮಗಳು ಹೊರಬೀಳುತ್ತಿವೆ.

ಘಟನೆ ಹೇಗಾಯಿತು?

ಸ್ಮಿತ್ ಅವರ ಮೇಲೆ ಏಕಾಏಕಿ ಕೊಡಲಿ ಮತ್ತು ಚಾಕುವಿನಿಂದ ಭೀಕರ ದಾಳಿ ಮಾಡಿದ ಒಮಾನ್ ಮೂಲದ ಸಹ ಪೈಲಟ್‌ನ ಸದ್ಯ ಪೊಲೀಸರ ಅತಿಥಿಯಾಗಿದ್ದು, ಆತನನ್ನು ಸದ್ಯ ತೀವ್ರ ತನಿಖೆಗೆ ಒಳಪಡಿಸಲಾಗಿದೆ. ಈ ಮಧ್ಯೆ, ವಿಮಾನ ಯಾವ ಸಮಯಕ್ಕೆ ಹೊರಟಿತು? ಘಟನೆ ಹೇಗಾಯಿತು? ಯಾವ ವಸ್ತುಗಳಿಂದ ಆತ ಹಲ್ಲೆಗೈದ ಎಂಬುದರ ಕುರಿತು ಸಾಕಷ್ಟು ಮಾಹಿತಿಗಳು ಲಭ್ಯವಾಗಿದ್ದೇ ಆದರೂ ಆತನ ದಿಢೀರ್ ಅಟ್ಯಾಕ್​ನ ಹಿಂದಿರುವ ನಿಖರವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂಬುದೇ ಗೊಂದಲ ಸೃಷ್ಟಿಸಿದೆ.

ಪ್ರಸ್ತುತ, ಸೌದಿ ಅರೇಬಿಯಾದಲ್ಲಿ ಪೊಲೀಸರ ವಶದಲ್ಲಿರುವ ಆತನ ಹಿನ್ನೆಲೆ ಹಾಗೂ ವಿಮಾನಯಾನದ ಭದ್ರತಾ ಲೋಪಗಳ ಕುರಿತು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಇದು ಕೇವಲ ವೈಯಕ್ತಿಕ ದ್ವೇಷದ ಕೃತ್ಯವೇ ಅಥವಾ ಅಂತಾರಾಷ್ಟ್ರೀಯ ಸಂಚಿನ ಭಾಗವಾಗಿ ನಡೆದ ಭಯೋತ್ಪಾದನಾ ದಾಳಿಯೇ ಎಂಬ ಆಯಾಮದಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.

ಮಹಿಳಾ ಸಹೋದ್ಯೋಗಿಗಳ ಮುಖ...

ಒಮಾನ್ ಮೂಲದ ಕೋ-ಪೈಲಟ್‌ನ ನಡವಳಿಕೆ ಹಾಗೂ ಆತನ ವ್ಯಕ್ತಿತ್ವದ ಕುರಿತು ಫ್ಲೈದುಬೈ ವಿಮಾನಯಾನ ಸಂಸ್ಥೆಯ ಸಹೋದ್ಯೋಗಿ ಪೈಲಟ್‌ಗಳು ಕೆಲವೊಂದು ಆತಂಕಕಾರಿ ಮತ್ತು ಅಚ್ಚರಿಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಕೇವಲ ಎಂಟು ತಿಂಗಳ ಹಿಂದಷ್ಟೇ ಫ್ಲೈದುಬೈ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದ ಈತ, ಯಾವಾಗಲೂ ವಿಪರೀತ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದನು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

ದಿನವಿಡೀ ಪ್ರಾರ್ಥನೆ ಮಾಡುವುದು, ಯಾವುದೇ ಕಾರಣಕ್ಕೂ ಮಹಿಳೆಯರೊಂದಿಗೆ ಹಸ್ತಲಾಘವ (ಶೇಕ್ ಹ್ಯಾಂಡ್) ಮಾಡದಿರುವುದು ಹಾಗೂ ಮಹಿಳಾ ಸಹೋದ್ಯೋಗಿಗಳ ಮುಖವನ್ನೂ ನೋಡದೆ ಅಂತರ ಕಾಯ್ದುಕೊಳ್ಳುತ್ತಿದ್ದ ಈತನ ವರ್ತನೆಯನ್ನು ಕಂಡು ಇತರ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು. ಇಸ್ರೇಲಿ ಮಾಧ್ಯಮಗಳ ವರದಿ ಪ್ರಕಾರ, ಈತನ ಅತಿರೇಕದ ನಡವಳಿಕೆಯನ್ನು ಗಮನಿಸಿದ್ದ ಸಹೋದ್ಯೋಗಿಗಳು ಈತನನ್ನು ಧಾರ್ಮಿಕ ಉಗ್ರವಾದಿ (Religious Extremist) ಎಂದೇ ಕರೆಯುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಸಹ ಪೈಲಟ್‌ನ ಈ ವಿಪರೀತ ಧಾರ್ಮಿಕ ನಂಬಿಕೆಗಳೇ ಕೃತ್ಯಕ್ಕೆ ಪ್ರೇರಣೆಯಾಗಿದೆಯೇ ಎಂಬ ಬಗ್ಗೆ ಇದುವರೆಗೆ ಯಾವುದೇ ನಿರ್ದಿಷ್ಟ ಅಥವಾ ಅಧಿಕೃತ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ, ಒಮಾನ್ ಮತ್ತು ಇಸ್ರೇಲ್ ದೇಶಗಳ ನಡುವೆ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ಒಮಾನ್ ರಾಷ್ಟ್ರೀಯತೆಯುಳ್ಳ ಈ ಪೈಲಟ್‌ಗೆ ಇಸ್ರೇಲ್‌ಗೆ ತೆರಳುವ ವಿಮಾನದ ಕಾರ್ಯಾಚರಣೆಗೆ ಹೇಗೆ ಅವಕಾಶ ಸಿಕ್ಕಿತು ಎಂಬ ಗಂಭೀರ ಪ್ರಶ್ನೆಯೂ ಈಗ ಭುಗಿಲೆದ್ದಿದೆ.

ಗುಜರಾತ್ ಸರ್ಕಾರದಿಂದ ಗೌರವ

ಕೋ-ಪೈಲಟ್​ನ ದಾಳಿಯಿಂದ ತೀ​ವ್ರ ರಕ್ತಸ್ರಾವವಾಗುತ್ತಿದ್ದರೂ ಪ್ರಯಾಣಿಕರ ಜೀವವನ್ನು ಉಳಿಸಲು ಕಿಂಚಿತ್ತು ಸೀಟಿನಿಂದ ಅಲುಗಾಡದೆ, ಅವರು ತೋರಿದ ಧೈರ್ಯ ಸ್ಫೂರ್ತಿದಾಯಕ. ಈ ನಿಟ್ಟಿನಲ್ಲಿ, ಸ್ಮಿತ್​ ನಮ್ಮ ಗುಜರಾತ್ ಹಾಗೂ ದೇಶದ ಹೆಮ್ಮೆಯ ಸಂಕೇತ ಎಂದು ಗುಣಗಾನ ಮಾಡಿರುವ ಸಿಎಂ ಭೂಪೇಂದ್ರ​ ಪಟೇಲ್​, ಅವರಿಗೆ ತಮ್ಮ ರಾಜ್ಯದ ಅತ್ಯುನ್ನತ ಗೌರವ 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ'ಯನ್ನು ಘೋಷಿಸಿದ್ದಾರೆ.

ಏನಿದು ಘಟನೆ?

ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ವಿಮಾನದ ಸಹ-ಪೈಲಟ್ (ಕೋ-ಪೈಲಟ್) ಕ್ಯಾಪ್ಟನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದನು. ವಿಮಾನವು ಇಸ್ರೇಲ್ ಸಮೀಪಿಸುತ್ತಿದ್ದಂತೆ ಕಾಕ್‌ಪಿಟ್ ಒಳಗೆ ಈ ಘಟನೆ ನಡೆದಿದ್ದು, ಇದರಿಂದ ವಿಮಾನವು ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಡಿಗಳಷ್ಟು ಕೆಳಗೆ ಧುಮುಕಿತ್ತು.

ಕೂಡಲೇ ಎಚ್ಚೆತ್ತ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಧೈರ್ಯಪ್ರದರ್ಶಿಸಿ ಕಾಕ್‌ಪಿಟ್ ಪ್ರವೇಶಿಸಿ ಹಲ್ಲೆಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತದನಂತರ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ಗಾಯಗೊಂಡ ಮುಖ್ಯ ಪೈಲಟ್ (ಭಾರತೀಯ ಮೂಲದ ಸ್ಮಿತ್ ಮಚ್ಛಾರ್) ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net