ರೆಕ್ಕೆಗಳಿಗೆ ದಣಿವಿಲ್ಲ, ಗುರಿ ಮರೆತಿಲ್ಲ.. ಕೇವಲ ಐದಾರು ದಿನಗಳಲ್ಲಿ 6,100 ಕಿಲೋಮೀಟರ್ ಹಾರಿ ದಾಖಲೆ ಬರೆದ ವಲಸೆ ಹಕ್ಕಿಗಳು Falco amurensis
ಕೃಪೆ ಎಕ್ಸ್ (X)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಶ್ವದ ಅತ್ಯಂತ ಚಿಕ್ಕದಾದ ಆದರೆ, ಅತಿ ಧೈರ್ಯಶಾಲಿ ವಲಸೆ ಹಕ್ಕಿ ಅಮುರ್ ಫಾಲ್ಕನ್
ಅಪಪಾಂಗ್, ಅಲಂಗ್ ಮತ್ತು ಅಹು ಭಾರತದ ದಕ್ಷಿಣ ಆಫ್ರಿಕಾಕ್ಕೆ ಸಾವಿರಾರು ಕಿಲೋಮೀಟರ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ
ಕೇವಲ ಐದರಿಂದ ಆರು ದಿನಗಳಲ್ಲಿ ಸುಮಾರು 5 ಸಾವಿರದಿಂದ 6,100 ಕಿಲೋ ಮೀಟರ್ ಹಾರಿವೆ
ಈ ಹಾರಾಟದಲ್ಲಿ ಕಿತ್ತಳೆ ಬಣ್ಣ ಹೊಂದಿರುವ ಅಪಪಾಂಗ್ ಅದ್ಭುತ ಸಾಧನೆ ಮಾಡಿದೆ
ನವದೆಹಲಿ: ವಿಶ್ವದ ಅತ್ಯಂತ ಚಿಕ್ಕದಾದ ಆದರೆ, ಅತಿ ಧೈರ್ಯಶಾಲಿ ವಲಸೆ ಹಕ್ಕಿ ಅಮುರ್ ಫಾಲ್ಕನ್ (Falco amurensis) ಮತ್ತೊಮ್ಮೆ ಜಗತ್ತನ್ನು ಅಚ್ಚರಿಗೊಳಿಸಿದೆ. ಉಪಗ್ರಹ ಟ್ಯಾಗ್ ಹಾಕಲಾದ ಮೂರು ಹಕ್ಕಿಗಳಾದ ಅಪಪಾಂಗ್, ಅಲಂಗ್ ಮತ್ತು ಅಹು ಭಾರತದ ದಕ್ಷಿಣ ಆಫ್ರಿಕಾಕ್ಕೆ ಸಾವಿರಾರು ಕಿಲೋಮೀಟರ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.
ಈ ಪಕ್ಷಿಗಳು ಕೇವಲ ಐದರಿಂದ ಆರು ದಿನಗಳಲ್ಲಿ ಸುಮಾರು 5 ಸಾವಿರದಿಂದ 6,100 ಕಿಲೋ ಮೀಟರ್ ಹಾರಿ ಜಿಂಬಾಬ್ವೆ, ಕೀನ್ಯಾ ಮತ್ತು ಸೊಮಾಲಿಯಾವನ್ನು ತಲುಪಿದ್ದಾವೆ ಎಂದು ವರದಿಯಾಗಿದೆ.
ಅಪಪಾಂಗ್‌ನ ಅದ್ಭುತ ಜಿಗಿತ
ಈ ಹಾರಾಟದಲ್ಲಿ ಕಿತ್ತಳೆ ಬಣ್ಣ ಹೊಂದಿರುವ ಅಪಪಾಂಗ್ ಅದ್ಭುತ ಸಾಧನೆ ಮಾಡಿದ್ದು, ಕೇವಲ ಆರು ದಿನಗಳಲ್ಲಿ, ಮರಿ ಹಕ್ಕಿ 6,100 ಕಿಲೋಮೀಟರ್ಗಳ ವರೆಗೆ ನಿರಂತರವಾಗಿ ಹಾರಾಟ ನಡೆಸಿದೆ. ನಂತರ ಇದು ಕೀನ್ಯಾ ಮತ್ತು ನಂತರ ಜಿಂಬಾಬ್ವೆಯ ಹರಾರೆ ಸಮೀಪ ತಲುಪಿದೆ ಎಂದು ವರದಿಯಾಗಿದೆ.
ಕ್ರಿಸ್‌ಮಸ್ ಸಮಯದಲ್ಲಿ ಜಿಂಬಾಬ್ವೆಯ ಹರಾರೆ ನಗರದ ಮೇಲೆ ಅಪಪಾಂಗ್ ಹಾರುತ್ತಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. ಆದಾಗ್ಯೂ, ಇದನ್ನು ಬೇಟೆಯಾಡುವ ಸಣ್ಣ ಹಕ್ಕಿಯ ಇತಿಹಾಸದಲ್ಲಿ ಅತಿ ದೀರ್ಘ ಹಾಗೂ ನಿರಂತರ ಪ್ರಯಾಣ ಸಾಧನೆ ಮಾಡಿರುವುದಲ್ಲಿ ಇದನ್ನು ಒಂದು ಎಂದು ಪರಿಗಣಿಸಲಾಗಿದೆ.
ಅಲಂಗ್ ಮತ್ತು ಅಹು ಪ್ರಯಾಣಿಸಿದ ಮಾರ್ಗಗಳು
ಈ ಗುಂಪಿನಲ್ಲಿರುವ ಅತ್ಯಂತ ಚಿಕ್ಕ ಹಕ್ಕಿಯಾದ ಅಲಂಗ್ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು 5,600 ಕಿ.ಮೀ ದೂರ ಕ್ರಮಿಸಿ ಆಫ್ರಿಕಾ ತಲುಪಿದೆ. ಅಹು ಕೂಡ ಯಶಸ್ವಿಯಾಗಿ 5100 ಕಿಮೀ ದಾಟಿ ಅರಬೀಯನ್ ಸಮುದ್ರ ದಾಟಿ ಆಫ್ರಿಕಾಕ್ಕೆ ತಲುಪಿದೆ ಎಂದು ವರದಿಯಾಗಿದೆ.
ಆವಿಷ್ಕಾರ ಹೇಗಿದೆ?
ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಡಾ. ಸುರೇಶ್ ಕುಮಾರ್ ಅವರು ಈ ಪಕ್ಷಿಗಳಿಗೆ ಉಪಗ್ರಹ ಟ್ಯಾಗ್‌ಗಳನ್ನು ಅಳವಡಿಕೆ ಮಾಡಿದ್ದಾರೆ. ಇದು ತಮಿಳುನಾಡಿನ ಕೇಡರ್‌ನ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಪ್ರಯಾಣದ ವಿವರಗಳನ್ನು ತಮ್ಮ ಎಕ್ಸ್ ಖಾತೆಯ ಮೂಲಕ ಹಂಚಿಕೊಂಡ ನಂತರ ಘಟನೆಯು ಜಾಗತಿಕವಾಗಿ ಗಮನ ಸೆಳೆದಿದೆ. ಈ ಟ್ಯಾಗ್ಗಳು ಸಂಶೋಧಕರಿಗೆ ಪಕ್ಷಿಗಳು ಯಾವ ಪ್ರದೇಶದಲ್ಲಿ ಇದೆ ಎಂದು ತಿಳಿಯಲು ಸಹಾಯ ಮಾಡಿದೆ.
ಸಂರಕ್ಷಣೆಗೆ ಇದು ಏಕೆ ಮುಖ್ಯ?
ಅಮುರ್ ಫಾಲ್ಕನ್‌ಗಳನ್ನು ವಿಶ್ವದ ಅತಿ ಹೆಚ್ಚು ಕಾಲ ಪ್ರಯಾಣಿಸುವ ಸಣ್ಣ ಪಕ್ಷಿಗಳೆಂದು ಕರೆಯಲಾಗುತ್ತದೆ. ಅವುಗಳ ಪ್ರಯಾಣವು ವಿಶ್ವದ ಪರಿಸರ ವ್ಯವಸ್ಥೆಗಳು ಎಷ್ಟರ ಮಟ್ಟಿಗೆ ಸಂಬಂಧವನ್ನು ಹೊಂದಿದೆ ಎಂಬುದನ್ನು ತೋರಿಸಿದೆ. ಇವು ಭಾರತದಿಂದ ಆಫ್ರಿಕಾಕ್ಕೆ ಹಲವು ದೇಶಗಳ ಮೂಲಕ ಹಾದುಹೋಗುತ್ತವೆ.
ಆದರಿಂದ ಈ ಪಕ್ಷಿಗಳ ರಕ್ಷಣೆಗಾಗಿ ಎಲ್ಲಾ ದೇಶಗಳು ಒಟ್ಟಿಗೆ ಕೆಲಸ ಮಾಡುವುದು ಬಹಳ ಅಗತ್ಯವಾಗಿರುತ್ತದೆ. ಈ ಮೊದಲು ಪಕ್ಷಿಗಳನ್ನು ನಾಗಾಲ್ಯಾಂಡ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಬೇಟೆಯಾಡಲಾಗುತ್ತಿತ್ತು. ಜಾಗೃತಿ ಹಾಗೂ ಸಂರಕ್ಷಣಾ ವಿಧಾನದಿಂದ ಪರಿಸ್ಥಿತಿಗಳು ಸುಧಾರಿಸಿದ್ದು, ಇವುಗಳು ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ವಿಶ್ರಾಂತಿಯನ್ನು ಪಡೆಯುತ್ತವೆ.
ನಿರಂತರ ಪ್ರಯಾಣ
ಪಕ್ಷಿ ವೀಕ್ಷಕರು ಮತ್ತು ವಿಜ್ಞಾನಿಗಳು ಇವುಗಳ ಚಲನೆಯನ್ನು ಬಹಳ ಆಸಕ್ತಿಯಿಂದ ಗಮನಿಸಿದ್ದಾರೆ. ಈ ಪಕ್ಷಿಗಳು ಪ್ರತಿ ವರ್ಷ ಲಕ್ಷಾಂತರ ಕಿಲೋ ಮೀಟರ್ಗಳಷ್ಟು ಪ್ರಯಾಣವನ್ನು ಬೆಳೆಸುತ್ತವೆ. ನಾವು ಪ್ರಕೃತಿಯನ್ನು ಎಷ್ಟರ ಮಟ್ಟಿಗೆ ರಕ್ಷಿಸುತ್ತೀವೋ ಪುಟ್ಟ ಜೀವಿಗಳನ್ನು ರಕ್ಷಿಸುವುದು ಅಷ್ಟೇ ಮುಖ್ಯವಾಗಿರುತ್ತದೆ (ಏಜೆನ್ಸೀಸ್).