ಸಮಾವೇಶದಲ್ಲಿ ಘರ್ಜಿಸಿದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಇದು ಶಿವಸೇನೆಯನ್ನು ಮುಗಿಸಲು ಮಾಡಿದ ಆಪರೇಷನ್ ಟೈಗರ್ ಅಲ್ಲ, ಬದಲಿಗೆ ಫಡ್ನವೀಸ್ರನ್ನು ಮಟ್ಟಹಾಕಲು ನಡೆಸಿದ ಆಪರೇಷನ್ ದೇವೇಂದ್ರ ಎಂದಿದ್ದಾರೆ. ಭವಿಷ್ಯದಲ್ಲಿ ಫಡ್ನವೀಸ್ ರಾಷ್ಟ್ರ ರಾಜಕಾರಣಕ್ಕೆ ಬರದಂತೆ ಮತ್ತು ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಅಮಿತ್ ಷಾ ಅವರಿಗೆ ಪೈಪೋಟಿ ನೀಡದಂತೆ ತಡೆಯಲು ಅವರನ್ನು ಒಂದು ನಿರ್ದಿಷ್ಟ ಮಟ್ಟದಲ್ಲೇ ಕಟ್ಟಿಹಾಕುವ ತಂತ್ರ ಇದಾಗಿದೆ. ನಾಳೆ ದಿನ ದೇಶದಲ್ಲಿ ಅಂತಹ ಪರಿಸ್ಥಿತಿ ಬಂದರೆ, ನಮ್ಮಿಂದ ಪಕ್ಷಾಂತರ ಮಾಡಿದ ಸಂಸದರು ದೇವೇಂದ್ರ ಫಡ್ನವೀಸ್ ಬದಲಿಗೆ ಅಮಿತ್ ಷಾ ಅವರನ್ನೇ ಪ್ರಧಾನಿ ಮಾಡಲು ವೋಟ್ ಹಾಕುತ್ತಾರೆ. ಇದಕ್ಕಾಗಿಯೇ ಷಾ ಈ ಇಡೀ ಆಟ ಆಡಿದ್ದಾರೆ ಎಂದು ಆರೋಪಿಸಿದ್ದಾರೆ.