ಅಮಿತ್ ಶಾ ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ಸಿಲಿಗುರಿ ಸಮೀಪದ ಸುಕ್ನಾಗೆ ತೆರಳಿ ಅಲ್ಲೇ ರಾತ್ರಿ ತಂಗಲಿದ್ದಾರೆ. ಅವರ ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಸಿಲಿಗುರಿ ಕಾರಿಡಾರ್ ಅನ್ನು ‘ಚಿಕನ್ ನೆಕ್’ ಎಂದು ಕರೆಯಲಾಗುತ್ತದೆ. ಇದು ಈಶಾನ್ಯ ರಾಜ್ಯಗಳನ್ನು ದೇಶದ ಉಳಿದ ಭಾಗದೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಅಲ್ಲದೆ, ಈ ಪ್ರದೇಶ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದ ಗಡಿಗಳಿಗೆ ಹತ್ತಿರದಲ್ಲಿದೆ.