ಮಸೂದೆ ಸೋಲಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೊಸ್ಟ್ ಹಂಚಿಕೊಂಡಿರುವ ಅಮಿತ್ ಷಾ, ಇಂದು ಲೋಕಸಭೆಯಲ್ಲಿ ಅತ್ಯಂತ ವಿಚಿತ್ರವಾದ ದೃಶ್ಯವೊಂದು ಕಂಡುಬಂದಿದೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ತಡೆಯೊಡ್ಡಿವೆ. ಮಹಿಳೆಯರಿಗೆ ಸಿಗಬೇಕಿದ್ದ 33% ಮೀಸಲಾತಿಯನ್ನು ತಡೆದಿದ್ದಲ್ಲದೆ, ಅದನ್ನು ವಿಜಯೋತ್ಸವದಂತೆ ಆಚರಿಸುತ್ತಿರುವುದು ನಿಜಕ್ಕೂ ಖಂಡನೀಯ ಮತ್ತು ಕಲ್ಪನೆಗೂ ಮೀರಿದ ಸಂಗತಿ ಎಂದು ಕಿಡಿಕಾರಿದ್ದಾರೆ.