_1786521027583.webp?w=480&auto=format%2Ccompress&fit=max)
_1786521027583.webp?w=480&auto=format%2Ccompress&fit=max)
ದೆಹಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಬಲಪ್ರಯೋಗ ನಂತರ ವಿರೋಧ ಪಕ್ಷಗಳ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಂಸತ್ತಿನಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಆದರೆ, ಅಮಿತ್ ಷಾರ ಈ ಚರ್ಚೆಯ ಪ್ರಸ್ತಾವನೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತಕ್ಷಣವೇ ತಿರಸ್ಕರಿಸಿದ್ದು, ಗೃಹ ಸಚಿವರು ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಷಾ ಅವರೇ ಈ ಆದೇಶ ನೀಡಿದ್ದರೆ ಅಪರಾಧಿಯಾಗುತ್ತಾರೆ, ಅವರಿಗೆ ತಿಳಿಯದೇ ಈ ಘಟನೆ ನಡೆದಿದ್ದರೆ ಅವರು ತಮ್ಮ ಇಲಾಖೆಯನ್ನು ನಡೆಸಲು ಸಂಪೂರ್ಣ ಅಸಮರ್ಥರು ಎಂದರ್ಥ. ಈ ಎರಡೂ ಕಾರಣಗಳಿಂದಾಗಿ ಅವರು ತಕ್ಷಣವೇ ತಮ್ಮ ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಇದರೊಂದಿಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಸ್ಪಷ್ಟ ಉತ್ತರವಿಲ್ಲದೆ ಭಯಬಿದ್ದಿದೆ ಎಂದು ಅವರು ಕಿಡಿಕಾರಿದರು.
ಅಮಿತ್ ಷಾ ಆಹ್ವಾನ!..
(ಏಜೆನ್ಸೀಸ್).