ಅಮಿತ್ ಶಾ ಜೀ ನನ್ನೊಂದಿಗೆ ಚರ್ಚೆ ನಡೆಸಲು ಪ್ರಧಾನಿ ಮೋದಿಯವರನ್ನು ಒಪ್ಪಿಸಿ, ಗೊಂದಲಕ್ಕೀಡು ಮಾಡಬೇಡಿ: ರಾಹುಲ್ ಗಾಂಧಿ | Rahul Gandhi

ಅಮಿತ್ ಶಾ ಜೀ ಸಂಸತ್​ ಆಗಲಿ, ಯಾವದೇ ವೇದಿಕೆಯಾಗಲಿ ನನ್ನೊಂದಿಗೆ ಚರ್ಚೆ ನಡೆಸಲು ಪ್ರಧಾನಿ ಮೋದಿಯವರನ್ನು ಒಪ್ಪಿಸಿ, ಗೊಂದಲಕ್ಕೀಡು ಮಾಡಬೇಡಿ ಎಂದು ಶುಕ್ರವಾರ(ನ. 06) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಅಮಿತ್ ಶಾ ಜೀ ನನ್ನೊಂದಿಗೆ ಚರ್ಚೆ ನಡೆಸಲು ಪ್ರಧಾನಿ ಮೋದಿಯವರನ್ನು ಒಪ್ಪಿಸಿ, ಗೊಂದಲಕ್ಕೀಡು ಮಾಡಬೇಡಿ: ರಾಹುಲ್ ಗಾಂಧಿ | Rahul Gandhi
Published on: 

ನವದೆಹಲಿ: ಅಮಿತ್ ಶಾ ಜೀ ಸಂಸತ್​ ಆಗಲಿ, ಯಾವದೇ ವೇದಿಕೆಯಾಗಲಿ ನನ್ನೊಂದಿಗೆ ಚರ್ಚೆ ನಡೆಸಲು ಪ್ರಧಾನಿ ಮೋದಿಯವರನ್ನು ಒಪ್ಪಿಸಿ, ಗೊಂದಲಕ್ಕೀಡು ಮಾಡಬೇಡಿ ಎಂದು ಶುಕ್ರವಾರ(ನ. 06) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಎಕ್ಸ್​​ನಲ್ಲಿ ಅಮಿತ್ ಶಾ ಅವರು ಸದನದ ಒಳಗೆ 'ಎಸ್‌ಐಆರ್' ಕುರಿತ ಚರ್ಚೆಯ ವಿಷಯದ ಬಗ್ಗೆ ಪರಸ್ಪರ ವಿರುದ್ಧವಾದ ಹೇಳಿಕೆ ನೀಡಿರುವುದನ್ನು ಎತ್ತಿ ತೋರಿಸಿರುವ ರಾಹುಲ್ ಗಾಂಧಿ, ಇಂತಹ ಹೇಳಿಕೆಗಳ ಮೂಲಕ ಪ್ರಧಾನಿಯವರನ್ನು ಗೊಂದಲಕ್ಕೀಡು ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Also Read
ಎಸ್​ಐಆರ್ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ; ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ | Amit Shah
ಅಮಿತ್ ಶಾ ಜೀ ನನ್ನೊಂದಿಗೆ ಚರ್ಚೆ ನಡೆಸಲು ಪ್ರಧಾನಿ ಮೋದಿಯವರನ್ನು ಒಪ್ಪಿಸಿ, ಗೊಂದಲಕ್ಕೀಡು ಮಾಡಬೇಡಿ: ರಾಹುಲ್ ಗಾಂಧಿ | Rahul Gandhi

ಮುಂದುವರೆದು, ಯಾವುದೇ ವೇದಿಕೆಯಲ್ಲಾಗಲಿ ಎಸ್​ಐಆರ್ ಕುರಿತು ತಮ್ಮೊಂದಿಗೆ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಪ್ಪಿಸಿ ಎಂದು ಸವಾಲು ಹಾಕಿದ್ದಾರೆ.

ವೀಡಿಯೊದಲ್ಲಿ, 2025 ಡಿಸೆಂಬರ್ 10ರಂದು ಅಮಿತ್ ಶಾ ಅವರು, ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ವೋಟ್ ಚೋರಿ ಆರೋಪಗಳಿಗೆ ಉತ್ತರಿಸುತ್ತಾ, ಎಸ್​ಐಆರ್ ಕುರಿತು ಚರ್ಚೆ ಸದನದ ಒಳಗೆ ನಡೆಯಲು ಸಾಧ್ಯವಿಲ್ಲ ಎಂದಿದ್ದರು. ಮತ್ತು ಈ ವಿಷಯವು ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದಿದ್ದರು. ಆದರೆ ನ. 05ರಂದು ಎಸ್​ಐಆರ್ ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಲು ಸಿದ್ದ ಎಂದು ಹೇಳಿದ್ದರು (ಏಜೆನ್ಸೀಸ್).