ಅವರೆಲ್ಲ ನಮ್ಮ ದೇಶದ... ಕಾಕ್ರೋಚ್​ ಪ್ರತಿಭಟನೆ ನಡುವೆಯೇ ಜೆನ್ ಜಿಗಳ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಸಂಸದ ರವಿಕಿಶನ್​! Gen Z

ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಶಕ್ತಿ ಇರುವುದು ಯುವ ಪೀಳಿಗೆಯಲ್ಲೇ ಎಂದು ಪ್ರತಿಪಾದಿಸಿರುವ ರವಿ ಕಿಶನ್, ಪಾರ್ಲಿಮೆಂಟ್‌ನಿಂದ ಹಿಡಿದು ಬೀದಿಗಳವರೆಗೆ ಎಲ್ಲೆಡೆಯೂ ಮುಂದಿನ ಆಡಳಿತವನ್ನು ಜೆನ್ ಜಿ ಯುವಕರೇ ನಡೆಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Gen Z
ಗೋಖರಪುರದ ಬಿಜೆಪಿ ಸಂಸದ ರವಿ ಕಿಶನ್
Published on: 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಚುನಾವಣಾ ಅಕ್ರಮಗಳು ಹಾಗೂ ಎಸ್‌ಐಆರ್ (SIR) ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ನಟ-ರಾಜಕಾರಣಿ ಹಾಗೂ ಗೋಖರಪುರದ ಬಿಜೆಪಿ ಸಂಸದ ರವಿ ಕಿಶನ್ ಅವರು ಇಂದಿನ ಯುವ ಪೀಳಿಗೆಯನ್ನು ( Gen Z ) ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಮುಂಬೈನಲ್ಲಿ ನಡೆದ 'ಖಿಡ್ಕಿಯಾನ್ ಥಿಯೇಟರ್ ಫಿಲ್ಮ್ ಫೆಸ್ಟಿವಲ್ 2026'ರಲ್ಲಿ ಬಾಲಿವುಡ್ ನಟ ನಾವಜುದ್ದೀನ್ ಸಿದ್ದಿಕಿ ಜತೆ ಭಾಗವಹಿಸಿದ್ದ ಅವರು, ಜೆನ್ ಜಿ ಯುವಕರು ದೇಶದ ಆತ್ಮವಿದ್ದಂತೆ ಎಂದು ಬಣ್ಣಿಸಿದ್ದಾರೆ.

ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಶಕ್ತಿ ಇರುವುದು ಯುವ ಪೀಳಿಗೆಯಲ್ಲೇ ಎಂದು ಪ್ರತಿಪಾದಿಸಿರುವ ರವಿ ಕಿಶನ್, ಪಾರ್ಲಿಮೆಂಟ್‌ನಿಂದ ಹಿಡಿದು ಬೀದಿಗಳವರೆಗೆ ಎಲ್ಲೆಡೆಯೂ ಮುಂದಿನ ಆಡಳಿತವನ್ನು ಜೆನ್ ಜಿ ಯುವಕರೇ ನಡೆಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುವ ಜನತೆಯಲ್ಲಿ ತಮಗೆ ತಮ್ಮದೇ ಆದ ಪ್ರತಿಬಿಂಬ ಕಾಣಿಸುತ್ತದೆ ಎಂದು ತಿಳಿಸಿರುವ ಅವರು, ಇಂದಿನ ಯುವಕರು ದೇಶದ ನಿಜವಾದ ಭವಿಷ್ಯ ಎಂದು ಬಲವಾಗಿ ನಂಬಿದ್ದಾರೆ.

Also Read
ದೇಶದಲ್ಲಿರುವ ಶಿಕ್ಷಣ ವ್ಯವಸ್ಥೆ ಹಣ, ಅಧಿಕಾರ, ಇಂಗ್ಲಿಷ್ ಇಲ್ಲದವರನ್ನು ಹೊರಗಿಡುವ ವ್ಯವಸ್ಥೆಯಾಗಿದೆ: ರಾಹುಲ್ ಗಾಂಧಿ | Rahul Gandhi
Gen Z

ಮತ್ತೊಂದೆಡೆ, ನೀಟ್-ಯುಜಿ ಪೇಪರ್ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೋರಿ ಸಿಜೆಪಿ (CJP) ಸಂಘಟನೆಯು ಕಳೆದ ಜೂನ್ 6 ರಂದು ಜಂತರ್ ಮಂತರ್‌ನಿಂದ ದೆಹಲಿ ಬೀದಿಗಳಲ್ಲಿ ಪ್ರತಿಭಟನೆ ಆರಂಭಿಸಿತ್ತು. ನಂತರ ಜುಲೈ 20 ರಂದು ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದ ದಿನದಂದು ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪೊಲೀಸರ ಬ್ಯಾರಿಕೇಡ್‌ಗಳು, ಅಶ್ರುವಾಯು ಹಾಗೂ ಲಾಠಿ ಪ್ರಹಾರಗಳನ್ನು ಪ್ರತಿಭಟನಾಕಾರರು ಎದುರಿಸಬೇಕಾಯಿತು.

ಪ್ರತಿಭಟನೆಯ ತೀವ್ರತೆಯ ಒತ್ತಡಕ್ಕೆ ಮಣಿದು ಜುಲೈ 25 ರಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತದನಂತರ ಕೆಲವು ತಿಂಗಳುಗಳ ಬಳಿಕ, ಸಿಜೆಪಿ ಸಂಘಟನೆಯು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಆಗ್ರಹಿಸಿ ಮತ್ತೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ಮುಂದುವರಿಸಿದೆ.

ಈ ಪ್ರತಿಭಟನೆಗಳ ನಡುವೆ ಹೇಳಿಕೆ ನೀಡಿರುವ ರವಿಕಿಶನ್​, ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ಮತ್ತು ಸಾಮಾನ್ಯ ಜೆನ್ ಜಿ ಯುವಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವುದು ಬೇರೆಯೇ ಆದ ಜಗತ್ತು ಎಂದಿರುವ ಅವರು, ದೇಶದ ಯುವ ಪೀಳಿಗೆಯು ಅತ್ಯಂತ ದೇಶಪ್ರೇಮಿ ಹಾಗೂ ದೇಶದ ಪರವಾಗಿ ಗಟ್ಟಿಯಾಗಿ ನಿಲ್ಲುವವರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Also Read
ನಟ ಇಮ್ರಾನ್ ಖಾನ್ ಭಾರತೀಯ ಪ್ರಜೆ ಅಲ್ಲ, ಎಸ್ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಬಾರದಿತ್ತು: ಚಿರಾಗ್ ಪಾಸ್ವಾನ್ | Chirag Paswan
Gen Z

ಯುವಜನರು ಈಗಾಗಲೇ ಎಲ್ಲ ವಿಷಯಗಳ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿರುವ ಜ್ಞಾನಿಗಳಾಗಿದ್ದು, ಯಾರೂ ಕೂಡ ಅವರಿಗೆ ಹೊಸದಾಗಿ ಪಾಠ ಮಾಡಲು ಅಥವಾ ತಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಲು ಹೋಗಬಾರದು ಎಂದು ರವಿ ಕಿಶನ್ ಎಚ್ಚರಿಸಿದ್ದಾರೆ. ಯುವ ಸಮುದಾಯಕ್ಕೆ ಸ್ವಂತ ಆಲೋಚನಾ ಶಕ್ತಿ ಇದೆ ಎಂದು ಬಣ್ಣಿಸಿರುವ ಅವರು, ಜೆನ್ ಜಿ ಪೀಳಿಗೆಯು ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುವ ಭವಿಷ್ಯದ ನಾಯಕರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net