ಅಮೆಜಾನ್ 2024ರ ವೇಳೆಗೆ ಸುಮಾರು 2.8 ಮಿಲಿಯನ್ ನೇರ, ಪರೋಕ್ಷ, ಪ್ರೇರಿತ ಮತ್ತು ಋತು ಆಧರಿತ ಉದ್ಯೋಗಗಳಿಗೆ ಬೆಂಬಲಿಸಿದ್ದು ಇದರಲ್ಲಿ ತಂತ್ರಜ್ಞಾನ, ಲಾಜಿಸ್ಟಿಕ್ಸ್, ರೀಟೇಲ್ ಮತ್ತು ಸೃಜನಶೀಲ ಸೇವೆಗಳನ್ನು ಒಳಗೊಂಡಿದೆ. 2030ರ ವೇಳೆಗೆ ಕಂಪನಿಯು 3.8 ಮಿಲಿಯನ್ ನೇರ, ಪರೋಕ್ಷ, ಪ್ರೇರಿತ ಮತ್ತು ಋತು ಆಧರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆ ಹೊಂದಿದೆ. ಇವುಗಳು ಅಮೆಜಾನ್ ನ ಉದ್ಯಮ ವಿಸ್ತರಣೆ ಹಾಗೂ ವೃದ್ಧಿಸುತ್ತಿರುವ ಫುಲ್ ಫಿಲ್ ಮೆಂಟ್ ಹಾಗೂ ಡೆಲಿವರಿ ಜಾಲವೂ ಒಳಗೊಂಡಿದ್ದು ಅದೇ ಸಮಯಕ್ಕೆ ಪ್ಯಾಕೇಜಿಂಗ್, ಉತ್ಪಾದನೆ ಮತ್ತು ಸಾರಿಗೆ ಸೇವೆಗಳನ್ನೂ ಬೆಂಬಲಿಸುತ್ತದೆ.