ವಿದೇಶಿ ನಿಧಿ ಪಡೆದ ಆರೋಪ: ಕೇರಳ ವಿಧಾನಸಭೆ ಎಲ್ಓಪಿ ಸತೀಶನ್ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು | V D Sathishan
ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್
Published on:
Copied
Follow Us
ತಿರುವನಂತಪುರಂ: ಪುನರ್ಜನಿ ಯೋಜನೆಯಲ್ಲಿ ವಿದೇಶಿ ನಿಧಿ ಪಡೆದ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ವಿರುದ್ಧ ಸಿಬಿಐ ತನಿಖೆಗೆ ಕೇರಳ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹದಳ ಶಿಫಾರಸು ಮಾಡಿದೆ ಎಂದು ಭಾನುವಾರ(ಜ. 04) ವರದಿ ಮಾಡಿದೆ.
2018ರ ಪರವೂರು ಕ್ಷೇತ್ರದಲ್ಲಿ ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಲು 'ಪುನರ್ಜನಿ' ಯೋಜನೆಯನ್ನು ವಿ.ಡಿ.ಸತೀಶನ್ ಆರಂಭಿಸಿ, ಅದನ್ನು ಕೇಂದ್ರದ ಎಫ್‌ಸಿಆರ್‌ಎ ಕಾನೂನಿನಡಿ ಮನಪ್ಪಟ್ಟು ಫೌಂಡೇಶನ್ ಎಂದು ಚಾರಿಟೇಬಲ್ ಟ್ರಸ್ಟ್ ಮಾಡಿ ಅದಕ್ಕೆ ವಿದೇಶಿ ನಿಧಿ ಪಡೆದಿದ್ದಾರೆ ಎಂದು ವಿಜಿಲೆನ್ಸ್ ಆರೋಫಿಸಿದೆ.
ಯುಕೆ ಮೂಲದ ಮಿಡ್‌ಲ್ಯಾಂಡ್ ಇಂಟರ್ನ್ಯಾಷನಲ್ ಏಡ್ ಟ್ರಸ್ಟ್ (MIAT) ಎಂಬ ಎನ್‌ಜಿಒ ಮೂಲಕ 22,500 ಪೌಂಡ್‌ಗಳು (ರೂ. 19,95,880.44) ಚಾರಿಟೇಬಲ್ ಟ್ರಸ್ಟ್ ಖಾತೆಗೆ ವರ್ಗಯಿಸಲಾಗಿದೆ ಎಂದು ವಿಜಿಲೆನ್ಸ್ ಕಂಡು ಹಿಡಿದಿದೆ.
ಇನ್ನೂ ಸಂಗ್ರಹಿಸಿದ ನಿಧಿಯಲ್ಲಿ ವ್ಯತ್ಯಾಸಗಳಿದ್ದು, ಇದು ಎಫ್‌ಸಿಆರ್‌ಎ ಕಾನೂನಿನ ಅಡಿಯಲ್ಲಿ ನಿಬಂಧನೆಗಳ ಉಲ್ಲಂಘನೆಯಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ವರದಿ ನೀಡಿದೆ ಎನ್ನಲಾಗದೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಮುಂಚಿನ ಈ ಆರೋಪ ಕೇರಳ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ತಲೆನೋವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿ.ಡಿ.ಸತೀಶನ್, ಇದನ್ನು ವೈಯಕ್ತಿಕವಾಗಿ ಮತ್ತು ರಾಜಕೀಯುವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).