ಪೌರತ್ವ ಮುಂಚೆಯೇ ಮತಪಟ್ಟಿಯಲ್ಲಿ ಹೆಸರು ಆರೋಪ; ಸೋನಿಯಾ ಗಾಂಧಿಗೆ ಕೋರ್ಟ್​ ನೋಟಿಸ್; ಪ್ರಿಯಾಂಕಾ ಹೇಳಿದ್ದೇನು? | Sonia Gandhi

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ
Published on
ನವದೆಹಲಿ: ದೇಶದ ಪೌರತ್ವ ಪಡೆಯುವ ಮುಂಚೆಯೇ ಮತಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ(ಡಿ. 09) ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಕಾಂಗ್ರೆಸ್ ಅಧಿನಾಯಕಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿಗೆ(Sonia Gandhi) ನೋಟಿಸ್ ಜಾರಿ ಮಾಡಿದೆ.
1980–81ರ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿಯವರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ ಎಂದು ವಿಕಾಸ್ ತ್ರಿಪಾಠಿ ಎಂಬುವರು ಸಲ್ಲಿಸಿದ್ದ ದೂರು ಮ್ಯಾಜಿಸ್ಟ್ರೇಟ್ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ಕೋರ್ಟ್ ಸೋನಿಯಾ ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ರಾಜ್ಯ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿ ಟಿಸಿಆರ್‌ಗೆ ಆದೇಶಿಸಿದೆ. ಜ. 6ಕ್ಕೆ ಪ್ರಕರಣವನ್ನು ಮುಂದೂಡಿದೆ.

ಆರೋಪವನ್ನು ತಳ್ಳಿಹಾಕಿದ ಪ್ರಿಯಾಂಕಾ ಗಾಂಧಿ

ಸೋನಿಯಾ ಗಾಂಧಿಯರಿಗೆ ಕೋರ್ಟ್​ ನೋಟಿಸ್ ನೀಡಿದ್ದರ ಬಗ್ಗೆ ಸಂಸತ್ ಬಳಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದೆ ಪ್ರಿಯಾಂಕಾ ಗಾಂಧಿ, ಪೌರತ್ವ ಪಡೆಯುವ ಮೊದಲು ಮತದಾರರ ಪಟ್ಟಿಯಲ್ಲಿ ತಾಯಿ ಸೋನಿಯಾ ಗಾಂಧಿಯವರ ಹೆಸರಿತ್ತು, ಆರೋಪ ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿದ್ದಾರೆ.
ಸೋನಿಯಾ ಗಾಂಧಿ ಅವರು ನಾಗರಿಕರಾದ ನಂತರವೇ ಮತ ಚಲಾಯಿಸಿದರು. ಅವರ ಬಳಿ ಏನಾದರೂ ಪುರಾವೆಗಳಿವೆಯೇ? ಇದು ಸಂಪೂರ್ಣ ಸುಳ್ಳು. ಅವರು ಭಾರತದ ನಾಗರಿಕರಾದ ನಂತರವೇ ಮತ ಚಲಾಯಿಸಿದರು. ಅವರಿಗೆ ಈಗ 80 ವರ್ಷ ತುಂಬಿದ್ದರು ಅವರಿಂದ ಯಾಕೆ ಬಿದ್ದಿದ್ದಾರೋ ಎಂದು ನನಗೆ ತಿಳಿದಿಲ್ಲ. ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net