ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮದ್ಯ ಸೇವನೆ ತೀವ್ರವಾಗಿ ಹೆಚ್ಚಾಗಿದೆ. ಒಂದು ಕಾಲದಲ್ಲಿ ಸಾಮಾನ್ಯವಾಗಿ 30-40 ವರ್ಷ ವಯಸ್ಸಿನವರು ಮಾತ್ರ ಮದ್ಯ ಸೇವಿಸುತ್ತಿದ್ದರು. ಆದರೆ, ಇದೀಗ ಶಾಲಾ ಮಕ್ಕಳು ಸಹ ಇದಕ್ಕೆ ದಿನದಿನಕ್ಕೆ ವ್ಯಸನಿಯಾಗುತ್ತಿದ್ದಾರೆ. ಹೀಗಾಗಿ, ಮದ್ಯದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಕೆಲವರು ನಾವು ಕಡಿಮೆ ಮಾತ್ರ ಕುಡಿಯುತ್ತೇವೆ ಮತ್ತು ನಮಗೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನಗಳು ಆಘಾತಕಾರಿ ವಿಷಯಗಳನ್ನು ಬಹಿರಂಗೊಳಿಸುವ ಮೂಲಕ ಅಂತಹ ಜನರನ್ನು ಬೆಚ್ಚಿಬೀಳಿಸಿವೆ.