"ಸಂಭಾಷಣೆಯ ಮಧ್ಯೆ ಆ ಅಪರಿಚಿತ ವ್ಯಕ್ತಿ, 'ನೀನು ಹುಡುಗನೋ ಅಥವಾ ಹುಡುಗಿಯೋ?' ಎಂದು ಕೇಳಿದ್ದಾನೆ. ಅವಳು 'ಹುಡುಗಿ' ಎಂದು ಉತ್ತರಿಸಿದ ತಕ್ಷಣ, ಆತ ಅಸಭ್ಯ ವರ್ತನೆ ತೋರಿದ್ದಾನೆ. 'ನಿನ್ನ ನಗ್ನ ಚಿತ್ರವನ್ನು (Nude picture) ಕಳುಹಿಸುವೆಯಾ?' ಎಂದು ಸಂದೇಶ ಕಳುಹಿಸಿದ್ದಾನೆ. ಇದರಿಂದ ಗಾಬರಿಗೊಂಡ ನನ್ನ ಮಗಳು ತಕ್ಷಣ ಗೇಮ್ ಆಫ್ ಮಾಡಿ, ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಅವಳು ವಿಷಯವನ್ನು ಮುಚ್ಚಿಡದೆ ಮನೆಯಲ್ಲಿ ಹೇಳಿದ್ದು ಒಳ್ಳೆಯದಾಯಿತು," ಎಂದು ಅಕ್ಷಯ್ ಕುಮಾರ್ ಹೇಳಿದ್ದರು.