ಫಲಿಸಿದ ಅಜ್ಜಯ್ಯನ ಆಶೀರ್ವಾದ; ಹುಸಿಯಾಗದ ಡಿಕೆ ನಂಬಿಕೆ

ಫಲಿಸಿದ ಅಜ್ಜಯ್ಯನ ಆಶೀರ್ವಾದ; ಹುಸಿಯಾಗದ ಡಿಕೆ ನಂಬಿಕೆ
ಫಲಿಸಿದ ಅಜ್ಜಯ್ಯನ ಆಶೀರ್ವಾದ; ಹುಸಿಯಾಗದ ಡಿಕೆ ನಂಬಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಫಲಿಸಿದ ಅಜ್ಜಯ್ಯನ ಆಶೀರ್ವಾದ; ಹುಸಿಯಾಗದ ಡಿಕೆ ನಂಬಿಕೆ
  • ಮುಕ್ತಿಮಂದಿರದ ಮಹಾಗುರು ಶ್ರೀವೀರಗಂಗಾಧರ ಅಜ್ಜಯ್ಯನ ಕೃಪೆ
  • ನೊಣವಿನಕೆರೆ ಮಠದ ಶಿಷ್ಯನಿಗೆ ಒಲಿದು ಬಂದ ಮುಖ್ಯಮಂತ್ರಿ ಪಟ್ಟ

ಪ್ರಶಾಂತ್ರಿಪ್ಪನ್‌ಪೇಟೆ ಬೆಂಗಳೂರು :ರಾಜ್ಯದಲ್ಲಿಸದ್ಯ ಅಧಿಕಾರ ಹಸ್ತಾಂತರದ ಚರ್ಚೆತಾರ್ಕಿಕ ಅಂತ್ಯ ಕಂಡಿದೆ.ಮಾತ್ರವಲ್ಲಕಳೆದ 6 ತಿಂಗಳಿನಿಂದನಡೆಯುತ್ತಿದ್ದ ಚರ್ಚೆಗೆ ತೆರೆಬಿದ್ದಿದೆ. ಸ್ಥಾನಬಿಟ್ಟುಕೊಡಲು ಒಪ್ಪಿ ಸಿದ್ದರಾಮಯ್ಯರಾಜೀನಾಮೆ ನೀಡಿದ ಬೆನ್ನಲ್ಲೆಅವರಿಂದ ತೆರವಾದ ಸಿಎಂ ಸ್ಥಾನಕ್ಕೆಡಿ.ಕೆ.ಶಿವಕುಮಾರ್ಹೆಸರು ಘೋಷಣೆಯಾಗಿದೆ.ರಾಜಕೀಯ ಹಲವುಸ್ಥಿತ್ಯಂತರಗಳ ನಡುವೆ ಡಿಕೆಶಿಗೆಅವರು ನಂಬಿದ ‘ಅಜ್ಜಯ್ಯ’ನ ಆಶೀರ್ವಾದಕೊನೆಗೂ ಫಲಿಸಿದೆ.

ಅಧಿಕಾರಹಸ್ತಾಂತರ,ಮುಖ್ಯಮಂತ್ರಿಬದಲಾವಣೆ ಚರ್ಚೆ ಮುನ್ನೆಲೆಗೆಬಂದಾಗಲೆಲ್ಲಾ ಸಾಮಾನ್ಯವಾಗಿಸಿದ್ದರಾಮಯ್ಯನವರ ಬೆಂಬಲಿಗರಪಡಸಾಲೆಯಲ್ಲಿ ಕೇಳುತ್ತಿದ್ದಒಂದೇ ಒಂದು ಒಕ್ಕೊರಲಿನ ವಕ್ಕಣಿಕೆಎಂದರೆ; ‘ರಾಜ್ಯದಲ್ಲಿಮುಖ್ಯಮಂತ್ರಿ ಕುರ್ಚಿ ಖಾಲಿಇಲ್ಲ. ಸಿಎಂಸ್ಥಾನ ಖಾಲಿ ಇಲ್ಲದೇ ಇರುವಾಗಅಧಿಕಾರ ಹಸ್ತಾಂತರ,ಮುಖ್ಯಮಂತ್ರಿಬದಲಾವಣೆ ಎಂಬ ಚರ್ಚೆ ಅನಗತ್ಯ’ಎಂದು ಬಾಯಿ ಮುಚ್ಚಿಸುತ್ತಿದ್ದರು.ಆದರೆ ಅಂತಿಮವಾಗಿಸಿದ್ದರಾಮಯ್ಯ ರಾಜೀನಾಮೆ ನೀಡುವುದುಖಾತರಿಯಾದಾಗ,ಎದುರಾದ ಮಿಲಿಯನ್ಡಾಲರ್ ಪ್ರಶ್ನೆ ಮುಂದಿನ ಸಿಎಂಯಾರು ? ಈಪ್ರಶ್ನೆಗೆ ಕೇವಲ ರಾಜಕೀಯ ನಾಯಕರುಮಾತ್ರವಲ್ಲ,ರಾಜ್ಯದ ಸಾಮಾನ್ಯಮತದಾರರು ನೀಡಿದ ಉತ್ತರಡಿ.ಕೆ.ಶಿವಕುಮಾರ್!

ಹೌದುರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನುಅಧಿಕಾರಕ್ಕೆ ತರುವಲ್ಲಿ ನಿರ್ಗಮಿತಮುಖ್ಯಮಂತ್ರಿ ಸಿದ್ದರಾಮಯ್ಯನವರಷ್ಟೇಶ್ರಮ ವಹಿಸಿದ ಮತ್ತೋರ್ವ ನಾಯಕಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.2023ರಲ್ಲಿ ಕಾಂಗ್ರೆಸ್ಪಕ್ಷ ಸ್ಪಷ್ಟ ಬಹುಮತ ಗಳಿಸಿದಸಂದರ್ಭದಲ್ಲಿ ಯಾರು ಮುಂದಿನಸಿಎಂ ಎಂಬ ಪ್ರಶ್ನೆ ಸಹಜವಾಗಿಮುನ್ನೆಲೆಗೆ ಬಂದಿತ್ತು.ಆದರೆ ಜನನಾಯಕರಾಗಿಗುರುತಿಸಿಕೊಂಡಿದ್ದ ಸಿದ್ದರಾಮಯ್ಯನವರಿಗೆಹೈಕಮಾಂಡ್ ಮನ್ನಣೆ ನೀಡಿತ್ತು.ಈ ಹಂತದಲ್ಲಿಡಿ.ಕೆ.ಶಿವಕುಮಾರ್ಆಕಾಂಕ್ಷೆಯ ಪಟ್ಟು ಸಡಿಲಿಸಿದ್ದರಹಿಂದೆ ಗೌಪ್ಯ ಒಪ್ಪಂದವಾಗಿತ್ತುಎಂಬ ಮಾತು ಸಹ ಕೇಳಿ ಬಂದಿತ್ತು. ಈ ಬಗ್ಗೆ ಹಲವುಬಾರಿ ಹಲವು ನಾಯಕರು ಬಹಿರಂಗವಾಗಿಯೇಹೇಳಿದ್ದುಂಟು,ಇತರರ ಹೇಳಿಕೆಒಂದೆಡೆ ಇರಲಿ ಸ್ವತಃ ಡಿ.ಕೆ.ಶಿವಕುಮಾರ್ಕೂಡ ಒಮ್ಮೆ ‘ಯಾರು ಯಾರಿಗೆ ಏನುಮಾತು ಕೊಟ್ಟಿದ್ದಾರೆ ಎಂಬುದುಕೊಟ್ಟವರಿಗೆ ಗೊತ್ತಿದೆ’ ಎಂದುಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದರು.ಎರಡೂವರೆ ವರ್ಷದನಂತರ ಅಧಿಕಾರ ಹಸ್ತಾಂತರದ ಚರ್ಚೆಗೆವೇಗವೇನೋ ದೊರೆತಿತ್ತು.ಆದರೆ ಬಜೆಟ್ಮಂಡನೆ, ಉಪಚುನಾವಣೆ, ಪಂಚರಾಜ್ಯಚುನಾವಣೆ, ಇತರೆರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಇತ್ಯಾದಿ ರಾಜಕೀಯ ಬೆಳವಣಿಗೆಗಳಿಂದಾಗಿಅಧಿಕಾರ ಹಸ್ತಾಂತರ ಪ್ರಕ್ರಿಯೆಮುಂದೂಡುತ್ತಲೇ ಬಂದಿತ್ತು.ಈ ಎಲ್ಲ ಬೆಳವಣಿಗೆಗಳನಂತರ ಅಂತಿಮವಾಗಿ ಹೈಕಮಾಂಡ್ರಂಗಸಜ್ಜಿಗೆ ಸಿದ್ದಪಡಿಸಿ ಇಬ್ಬರೂನಾಯಕರನ್ನು ದಿಲ್ಲಿಗೆ ಕರೆಯಿಸಿಕೊಂಡುಪ್ರತ್ಯೇಕವಾಗಿ ಚರ್ಚೆ ನಡೆಸಿಸಿದ್ದರಾಮಯ್ಯನವರಿಗೆ ಅಧಿಕಾರಬಿಟ್ಟುಕೊಡುವಂತೆ ಸೂಚನೆ ನೀಡುವಮೂಲಕ ಡಿಕೆ ಶಿವಕುಮಾರ್ ಅವರಬಹುದಿನಗಳ ಕನಸು ನನಸಾಗುವ ಕಾಲಸನ್ನಿಹಿತವಾಯಿತು.

ಅಜ್ಜಯ್ಯನಶಿಷ್ಯನಿಗೆ ಕೊನೆಗೂ ಸಿಕ್ಕ ಕೂಲಿ!

ಡಿ.ಕೆ.ಶಿವಕುಮಾರ್ಓರ್ವ ದೈವಭಕ್ತ.ಕಾಂಗ್ರೆಸ್ಪಕ್ಷದ ತತ್ವ-ಸಿದ್ಧಾಂತಗಳನ್ನುಮೀರಿ ವೈಯಕ್ತಿಕವಾಗಿ ದೇವರು,ಧರ್ಮ,ಮಠ,ಮಂದಿರ,ಮಹಾತ್ಮರ ಬಗ್ಗೆಅಪಾರ ಭಕ್ತಿ ಇರಿಸಿಕೊಂಡಿದ್ದಾರೆ.ಅದರಲ್ಲೂ ವಿಶೇಷವಾಗಿಸದಾ ತಾನು ಅಜ್ಜಯ್ಯನ ಶಿಷ್ಯ ಎಂದುಹೇಳಿಕೊಳ್ಳುವ ಡಿಕೆಶಿಗೆ ಇಂದುದೊರೆತ ಸಿಎಂ ಪಟ್ಟ ಕೂಡಾ ಅಜ್ಜಯ್ಯನಆಶೀರ್ವಾದದ ಫಲ ಎಂಬುದು ಜನರಅಭಿಪ್ರಾಯ ಮಾತ್ರವಲ್ಲ ಸ್ವತಃಡಿಕೆ ಶಿವಕುಮಾರ್ ಕೂಡಾ ಆ ಮಾತನ್ನುಒಪ್ಪುತ್ತಾರೆ.ಅಜ್ಜಯ್ಯ ಎಂದರೆವೀರಗಂಗಾಧರ ಜಗದ್ಗುರುಗಳು.ಬಹು ಪ್ರಾಚೀನಪರಂಪರೆ ಹೊಂದಿರುವ ಶ್ರೀಮದ್ರಂಭಾಪುರಿ ಪೀಠದ 119ನೇಜಗದ್ಗುರುಗಳಾಗಿದ್ದವರು.ಮಹಾನ್ ತಪಸ್ವಿಗಳು,ಸಿದ್ಧಿಪುರುಷರು,ಅನುಷ್ಟಾನಮೂರ್ತಿಗಳಾಗಿದ್ದ ಪೂಜ್ಯರು‘ಮಾನವ ಧರ್ಮಕ್ಕೆ ಜಯವಾಗಲಿ,ಧರ್ಮದಿಂದಲೇವಿಶ್ವಕ್ಕೆ ಶಾಂತಿ’ ಎಂಬ ಸಾರ್ವತ್ರಿಕಸಂದೇಶವನ್ನು ಸಾರಿದ ವಿಶ್ವವಂದ್ಯರು.ಅಜ್ಜಯ್ಯನವರಗದ್ಗುಗೆಯು ಗದಗ ಜಿಲ್ಲೆ ಶಿರಹಟ್ಟಿತಾಲೂಕಿನ ಲಕ್ಷ್ಮೇಶ್ವರ ಸಮೀಪದಮುಕ್ತಿಮಂದಿರದಲ್ಲಿದೆ.ಹಿಂದೊಮ್ಮೆ ವೀರಗಂಗಾಧರ ಜಗದ್ಗುರುಗಳು 108ತೇರು,1008 ಅಡ್ಡಪಲ್ಲಕ್ಕಿಮಹೋತ್ಸವದ ಮೂಲಕ ಧಾರ್ಮಿಕ ದಾಖಲೆನಿರ್ಮಿಸಿದ್ದು ಇದೇ ಮುಕ್ತಿಮಂದಿರದಪುಣ್ಯಭೂಮಿಯಲ್ಲಿ. ಅಂತಹ ಅಜ್ಜಯ್ಯನವರಪರಮ ಆರಾಧಕರಾಗಿರುವ ತುಮಕೂರುಜಿಲ್ಲೆ ತಿಪಟೂರು ತಾಲೂಕಿನನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರಮಠದ ಡಾ.ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರಸ್ವಾಮೀಜಿಯವರ ಪರಮ ಶಿಷ್ಯರಾದಡಿ.ಕೆ.ಶಿವಕುಮಾರ್,ಪೂಜ್ಯರ ಸೂಚನೆಯಂತೆಯೇಅಜ್ಜಯ್ಯನ ಆರಾಧನೆಗೆ ತೊಡಗಿದವರು.ತಮ್ಮ ಜೀವನದಎಲ್ಲ ಹಂತದಲ್ಲೂ,ಎದುರಾದ ಪ್ರತಿಯೊಂದುಒಳಿತು, ಕೆಡುಕುಗಳಸಂದರ್ಭದಲ್ಲಿ ಮೊದಲು ನೆನೆಯುವುದುಅಜ್ಜಯ್ಯನನ್ನು.ಕಳೆದ ಸಾರ್ವತ್ರಿಕಚುನಾವಣೆಯಲ್ಲಿ ಪಕ್ಷ 135ಸ್ಥಾನಗಳನ್ನುಪಡೆದು ಬಹುಮತ ಗಳಿಸಿದ ಕೂಡಲೇಮೊದಲು ಹೋಗಿದ್ದು ನೊಣವಿನಕೆರೆಕ್ಷೇತ್ರಕ್ಕೆ.ಅಂದು ಬಹಿರಂಗವಾಗಿಡಿ.ಕೆ.ಶಿವಕುಮಾರ್,‘ಅಜ್ಜಯ್ಯನಶಕ್ತಿಶಾಲಿ ಪೀಠವು 150ಸ್ಥಾನಗಳಲ್ಲಿಯಾರಿಗೆ ಟಿಕೆಟ್ ಕೊಡಬೇಕೆಂದುನಿಗದಿತವಾಗಿ ಸೂಚನೆ ನೀಡಿತ್ತು.ಆದರೆ ನಾನೇತಲೆಹರಟೆ ಮಾಡಿ 136ಸೀಟುಗಳನ್ನುಅಜ್ಜಯ್ಯ ಹೇಳಿದವರಿಗೆ ನೀಡಿ,ಅಜ್ಜಯ್ಯನ ಮಾತಿಗೆವಿರುದ್ಧವಾಗಿ 15ಜನರಿಗೆ ಟಿಕೆಟ್ನೀಡಿದ್ದೆ. ಇಂದು135 ಸೀಟುಗಳಲ್ಲಿಗೆಲುವು ಸಾಧಿಸಿ,15 ಸೀಟುಗಳಲ್ಲಿಸೋಲು ಅನುಭವಿಸಬೇಕಾಯಿತು’ ಎಂದುಹೇಳಿಕೊಂಡಿದ್ದರು.ಮಾತ್ರವಲ್ಲ ಮುಂದೆ 2023ರಮೇ 20ರಂದುಸರ್ಕಾರ ರಚನೆಯಾಗಿ ತಾವು ಡಿಸಿಎಂಆಗುವ ವೇಳೆ ಅಜ್ಜಯ್ಯನ ಹೆಸರಿನಲ್ಲೇಪ್ರಮಾಣ ವಚನ ಸ್ವೀಕರಿಸಿದ್ದರು.ತಮ್ಮ ಮನೆ,ವಿಧಾನಸೌಧದಕಚೇರಿ, ಪಕ್ಷದಕಚೇರಿ, ವಾಹನಎಲ್ಲ ಕಡೆಗಳಲ್ಲಿ ವೀರ ಗಂಗಾಧರಜ್ಜನಭಾವಚಿತ್ರವನ್ನು ಅಳವಡಿಸಿಭಕ್ತಿಯಿಂದ ಪೂಜಿಸುತ್ತಿದ್ದಾರೆ.ಡಿಕೆಶಿಯವರರಾಜಕೀಯ ಪುಸ್ತಕದಲ್ಲಿ ಮಹತ್ವದಅಧ್ಯಾಯವಾಗಿರುವ ಮೇಕೆದಾಟುಪಾದಯಾತ್ರೆಯ ಸಮಾರೋಪ ಸಮಾರಂಭದಬೃಹತ್ ವೇದಿಕೆಯಲ್ಲಿ ಶ್ರೀವೀರಗಂಗಾಧರಅಜ್ಜಯ್ಯನ ಭಾವಚಿತ್ರವನ್ನುಇಟ್ಟು ಎಲ್ಲರ ಗಮನ ಸೆಳೆದಿದ್ದರು.

ಡಿ.ಕೆ.ಶಿವಕುಮಾರ್ರಾಜಕೀಯ ಇತಿಹಾಸದಲ್ಲಿ ಜೈಲಿಗೆಹೋದ ಸಂದರ್ಭ ಒಂದು ಕರಾಳ ಅಧ್ಯಾಯ.ಡಿಕೆಶಿ ಜೈಲಿಗೆಹೋಗುವ ಮೊದಲೇ ಅಜ್ಜಯ್ಯನ ಗದ್ದುಗೆಯಲ್ಲಿಅಂತಹದ್ದೊಂದು ಸೂಚನೆ ಸಿಕ್ಕಿತ್ತು.ದರ್ಶನಕ್ಕಾಗಿಮುಕ್ತಿಮಂದಿರಕ್ಕೆ ಹೋದಾಗಡಿಕೆಶಿಯವರು ಹೊದ್ದುಕೊಂಡಿದ್ದರೇಷ್ಮೆ ಶಾಲಿಗೆ ಬೆಂಕಿ ತಗುಲಿಮುಂದಿನ ಅಪಶಕುನವನ್ನು ಅಜ್ಜಯ್ಯತೋರಿಸಿದ್ದು ಅಚ್ಚರಿ.ಡಿಕೆಶಿ ಜೈಲಿಗೆಹೋದ ನಂತರ ಇನ್ನೇನು ಡಿಕೆಶಿರಾಜಕೀಯ ಭವಿಷ್ಯವೇ ಮುಗಿಯಿತುಎಂದು ಅಂದುಕೊಂಡವರು ಬಹಳ ಮಂದಿ.ಆದರೆ ಆ ಬಹುದೊಡ್ಡಎಡರನ್ನು ನಿಭಾಯಿಸಿ ಮರಳಿ ರಾಜಕೀಯದಉತ್ತುಂಗಕ್ಕೆ ಏರಿದ್ದರ ಹಿಂದೆಅಜ್ಜಯ್ಯನ ಆಶೀರ್ವಾದವಿದೆಎಂಬುದನ್ನು ಡಿ.ಕೆ.ಶಿವಕುಮಾರ್ಸ್ವತಃ ಹಲವು ಬಾರಿ ಹೇಳಿಕೊಂಡಿದ್ದಾರೆ.ಇದಕ್ಕೆ ಸಾಕ್ಷಿಎಂಬಂತೆ 2019ರಅ.23 ರಂದು48 ದಿನಗಳಕಾರಾಗೃಹ ವಾಸ ಅನುಭವಿಸಿ ತಿಹಾರ್ಜೈಲಿನಿಂದ ಬಿಡುಗಡೆಯಾಗಿ ಮರಳಿಬಂದ ಕೂಡಲೇ ಮೊದಲು ಭೇಟಿ ನೀಡಿದ್ದುನೊಣವಿನಕೆರೆ ಮಠಕ್ಕೆ.ಅಂದು ಮಠದ ಮುಂದೆನಿಂತ ಶಿವಕುಮಾರ್,‘ನಾನು ಇಂದುಜೀವಂತವಾಗಿ ನಿಂತಿರುವುದಕ್ಕೆಕಾರಣ ಅಜ್ಜಯ್ಯನ ಆಶೀರ್ವಾದ’ಎಂದು ಹೇಳಿಕೊಂಡಿದ್ದರು.ಈ ನಡುವೆ ತಮ್ಮರಾಜಕೀಯದಲ್ಲಿ ಎಷ್ಟೇ ಒತ್ತಡಇದ್ದರೂ ಮಠದ ಯಾವುದೇ ಕಾರ್ಯಕ್ರಮಕ್ಕೂಅವರು ತಪ್ಪಿಸಿಕೊಳ್ಳುವುದಿಲ್ಲ.ನೊಣವಿನಕೆರೆಮಠ ಮತ್ತು ಅಜ್ಜಯ್ಯನ ಗದ್ದುಗೆಇರುವ ಮುಕ್ತಿಮಂದಿರಕ್ಕೆ ಕೂಡಾಮೇಲಿಂದ ಮೇಲೆ ಹೋಗಿ ಬರುತ್ತಿರುತ್ತಾರೆ.ಇತ್ತೀಚೆಗೆಕೂಡಾ ಪುತ್ರನ ಜೊತೆಗೆ ಗುಪ್ತವಾಗಿಮುಕ್ತಿಮಂದಿರಕ್ಕೆ ಹೋಗಿ ಪ್ರಾರ್ಥನೆಸಲ್ಲಿಸಿ ಬಂದಿದ್ದರು.ಅದಾಗಿ ಕೇವಲತಿಂಗಳೊಪ್ಪತ್ತಿನಲ್ಲಿ ಮುಖ್ಯಮಂತ್ರಿಸ್ಥಾನ ಒಲಿದು ಬಂದಿದೆ. ಕನಕಪುರದಲ್ಲಿನಡೆದ ಕಾರ್ಯಕ್ರಮವೊಂದರಲ್ಲಿ ಅಜ್ಜಯ್ಯನ ಪೀಠದ ಪ್ರಸ್ತುತರಂಭಾಪುರಿ ಡಾ.ವಿರಸೋಮೇಶ್ವರಜಗದ್ಗುರುಗಳು,ಡಿ.ಕೆ.ಶಿವಕುಮಾರ್ಆದಷ್ಟು ಬೇಗ ಮುಖ್ಯಮಂತ್ರಿಗಳಾಗಲಿದ್ದಾರೆಎಂದು ಹರಸಿದ್ದರು.ಅವರ ಆಶೀರ್ವಾದಈಗ ನಿಜವಾಗಿದೆ.ಡಿ.ಕೆ.ಶಿವಕುಮಾರ್ಸ್ವತಃ ತಾವೇ ಹೇಳಿಕೊಳ್ಳುವಂತೆ‘ಪ್ರಯತ್ನಗಳು ವಿಫಲವಾಗಬಹುದುಆದರೆ ಪ್ರಾರ್ಥನೆಗಳು ಎಂದಿಗೂವಿಫಲವಾಗುವುದಿಲ್ಲ’ ಎಂಬ ಮಾತುಸತ್ಯವಾಗಿದೆ.ಈ ಮೂಲಕ ಡಿಕೆಶಿಯವರಮಾತಿನಲ್ಲೇ ಹೇಳುವುದಾದರೆ,ಅವರ ದುಡಿಮೆಗೆಕೊನೆಗೂ ಕೂಲಿ ಸಿಕ್ಕಿದೆ.

ತಾಳ್ಮೆ,ಪಕ್ಷನಿಷ್ಠೆಗೆಒಲಿದ ಪಟ್ಟ

ದೇಶದಲ್ಲಿಕಾಂಗ್ರೆಸ್ ಪಕ್ಷದ ಶಕ್ತಿಕುಂದಿರುವುದರ ನಡುವೆಯೇ ದಕ್ಷಿಣಭಾರತ ರಾಜ್ಯಗಳಾದ ಕರ್ನಾಟಕ,ಕೇರಳ,ತೆಲಂಗಾಣದಲ್ಲಿಪಕ್ಷ ಅಧಿಕಾರವನ್ನು ನಡೆಸುತ್ತಿದೆ.ಈ ಮೂರು ರಾಜ್ಯಗಳಪೈಕಿ ಕರ್ನಾಟಕದ ರಾಜಕಾರಣ ವಿಭಿನ್ನಎಂದೇ ಹೇಳಬಹುದು.ಅಕ್ಕಪಕ್ಕದರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳುಆಡಳಿತ ನಡೆಸುತ್ತಿದ್ದರೆ;ರಾಷ್ಟ್ರೀಯಪಕ್ಷಗಳೆರಡರ ನಡುವಿನ ನೇರಾ ಹಣಾಹಣಿಇಲ್ಲಿನ ರಾಜಕೀಯ ಚಿತ್ರಣ.ರಾಜ್ಯದ ಬಹುಪಾಲುಅವಧಿ ಅಧಿಕಾರ ನಡೆಸಿದ ಹೆಗ್ಗಳಿಕೆಕಾಂಗ್ರೆಸ್ ಪಕ್ಷಕ್ಕಿದೆ.ದೇಶದ ರಾಜಕಾರಣದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದರಾಜ್ಯ ಕಾಂಗೆಸ್ ಪಕ್ಷದ ಅಧ್ಯಕ್ಷಸ್ಥಾನವನ್ನು ಪಡೆದ ಡಿ.ಕೆ.ಶಿವಕುಮಾರ್,ದೇಶದೆಲ್ಲೆಡೆಪಕ್ಷ ಸೊರಗುತ್ತಿದ್ದ ದಿನಮಾನಗಳಲ್ಲಿಪಕ್ಷವನ್ನು ಕಟ್ಟಿ ಬೆಳೆಸಲುಶ್ರಮಿಸಿದವರು.ಪಕ್ಷವನ್ನುಅಧಿಕಾರಕ್ಕೆ ತಂದು ತಮ್ಮಸಾಮರ್ಥ್ಯವನ್ನು ತೋರಿಸಿದರೂ,ಹೈಕಮಾಂಡ್ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಸ್ಥಾನವನ್ನು ನೀಡಿದಾಗಲೂ ತಾಳ್ಮೆಯಿಂದಪಕ್ಷನಿಷ್ಠೆಯನ್ನು ಮೆರೆದನಿಷ್ಠಾವಂತ ಕಾರ್ಯಕರ್ತ.2020ರ ಜುಲೈ 6ರಂದುಸ್ವತಃ ಡಿಕೆಶಿ ತಾವು ಪಕ್ಷದಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದದಿನ ‘ನನ್ನನ್ನು ಎಲ್ಲರೂ ಕನಕಪುರದಬಂಡೆ ಎನ್ನುತ್ತಾರೆ.ಆದರೆ ನಾನುಪಕ್ಷವನ್ನು ವಿಧಾನಸೌಧದ ಮೂರನೇಮಹಡಿಗೆ ಕಳುಹಿಸಲು ಮೆಟ್ಟಿಲಿನಚಪ್ಪಡಿಯಾಗುತ್ತೇನೆೆ’ ಎಂದುಹೇಳಿದ್ದರು. ಈಮಾತನ್ನು ಅಕ್ಷರಶಃ ನಿಜವಾಗಿಸಿದರುಕೂಡ. ಕಾಂಗ್ರೆಸ್ಪಕ್ಷದ ಸಂಪ್ರದಾಯದಲ್ಲಿ ಕೆಪಿಸಿಸಿಅಧ್ಯಕ್ಷರಿಗೆ ಮುಖ್ಯಮಂತ್ರಿಸ್ಥಾನ ನೀಡಿದ ಹಲವು ಉದಾಹರಣೆಗಳಿವೆ.ಆದಾಗ್ಯೂ ಒಳಗಿನಮಾತುಕತೆ, ಒಪ್ಪಂದಏನೇ ಇದ್ದರೂ ಬಹಿರಂಗವಾಗಿ ಅತ್ಯಂತತಾಳ್ಮೆಯಿಂದ ಹೈಕಮಾಂಡ್ ನಿರ್ಣಯವನ್ನುಗೌರವಿಸಿಕೊಂಡು ಬಂದರು. ಈ ಹಿಂದೆ ಜನಾರ್ಧನಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿಪಕ್ಷ ಅಧಿಕಾರಕ್ಕೆ ಬಂದಾಗಲೂ ಅವರಬದಲು ಎಸ್.ಎಂ.ಕೃಷ್ಣಸಿಎಂ ಆಗಿದ್ದರು.ಡಾ.ಜಿ.ಪರಮೇಶ್ವರಕೆಪಿಸಿಸಿ ಅಧ್ಯಕ್ಷರಾಗಿದ್ದಾಗಪಕ್ಷ ಅಧಿಕಾರಕ್ಕೆ ಬಂತಾದರೂಸ್ವತಃ ಅವರು ಸೋಲನುಭವಿಸಿದ ಕಾರಣಸಿದ್ದರಾಮಯ್ಯ ಸಿಎಂ ಆಗಿದ್ದರು.ಆದರೆ ಡಿಕೆಶಿವಿಷಯದಲ್ಲಿ ತಾಳ್ಮೆ ಮತ್ತುಪಕ್ಷನಿಷ್ಠೆಗೆ ಹೈಕಮಾಂಡ್ ಅವಕಾಶನೀಡಿದೆ. ಆಮೂಲಕ ಪಕ್ಷದ ಸಂಪ್ರದಾಯ ಮರುಕಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net