ಖಾಲಿ ಇರುವ ಶಾಸಕಾಂಗ ಪಕ್ಷದ ನಾಯಕನ ಹುದ್ದೆಯನ್ನು ಭರ್ತಿ ಮಾಡುವುದು ತಕ್ಷಣದ ಆದ್ಯತೆಯಾಗಿದ್ದು, ನಂತರ ಉಪ ಮುಖ್ಯಮಂತ್ರಿ ಸ್ಥಾನವನ್ನು ಅಂತಿಮಗೊಳಿಸಲಾಗುವುದು. ಶಾಸಕಾಂಗ ಸಭೆ ಔಪಚಾರಿಕವಾಗಿ ನಿರ್ಧಾರ ತೆಗೆದುಕೊಂಡರೆ, ಶನಿವಾರವೇ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಿಎಂ ಫಡ್ನವೀಸ್ ಅವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.