ಮುಂಬೈ: ಮಹಾರಾಷ್ಟ್ರ ರಾಜಕಾರಣದ ಧ್ರುವತಾರೆ, ಎನ್ಸಿಪಿ ಸಾರಥಿ ಅಜಿತ್ ಪವಾರ್ರ ಅಕಾಲಿಕ ನಿಧನದ ನಂತರ, ರಾಜ್ಯ ರಾಜಕೀಯವು ಒಂದು ಐತಿಹಾಸಿಕ ಮತ್ತು ಭಾವನಾತ್ಮಕ ತಿರುವಿಗೆ ಸಾಕ್ಷಿಯಾಗುತ್ತಿದೆ. ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟ ಮೂರೇ ದಿನಗಳಲ್ಲಿ, ಅವರ ಪತ್ನಿ ಸುನೇತ್ರಾ ಪವಾರ್(Sunetra Pawar) ಅವರು ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.