ಅಜಿತ್ ಪವಾರ್ ಅಂತ್ಯಕ್ರಿಯೆ; ಕಾಕ್‌ಪಿಟ್‌ನ ಕೊನೆಯ ಮಾತುಗಳು ಬಹಿರಂಗ: ಕೊನೆಯ ಕ್ಷಣದಲ್ಲಿ ಓಹ್ ಶಟ್ ಎಂದಿದ್ದೇಕೆ ಪೈಲಟ್..? Ajit Pawar Plane Crash

ಅಜಿತ್ ಪವಾರ್ ಅಂತ್ಯಕ್ರಿಯೆ; ಕಾಕ್‌ಪಿಟ್‌ನ ಕೊನೆಯ ಮಾತುಗಳು ಬಹಿರಂಗ: ಕೊನೆಯ ಕ್ಷಣದಲ್ಲಿ ಓಹ್ ಶಟ್ ಎಂದಿದ್ದೇಕೆ ಪೈಲಟ್..?
ಅಜಿತ್ ಪವಾರ್ ಅಂತ್ಯಕ್ರಿಯೆ; ಕಾಕ್‌ಪಿಟ್‌ನ ಕೊನೆಯ ಮಾತುಗಳು ಬಹಿರಂಗ: ಕೊನೆಯ ಕ್ಷಣದಲ್ಲಿ ಓಹ್ ಶಟ್ ಎಂದಿದ್ದೇಕೆ ಪೈಲಟ್..?
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದ ದೈತ್ಯ ಶಕ್ತಿ, ಎನ್‌ಸಿಪಿ ನಾಯಕ ಅಜಿತ್ ಪವಾರ್(Ajit Pawar Plane Crash) ಅವರ ಪಾರ್ಥಿವ ಶರೀರವು ಇಂದು ಅವರ ಜನ್ಮಭೂಮಿ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನವಾಯಿತು. ಒಂದು ಕಡೆ ರಾಜ್ಯವು ಕಂಬನಿ ಮಿಡಿಯುತ್ತಿದ್ದರೆ, ಇನ್ನೊಂದೆಡೆ ಅಪಘಾತದ ತನಿಖಾ ವರದಿಯಿಂದ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಂದಿವೆ.

ಕಾಕ್‌ಪಿಟ್‌ನ ಕೊನೆಯ ಕ್ಷಣಗಳು: ಓಹ್ ಶಟ್..!

ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಅನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಭೀಕರ ಸತ್ಯವೊಂದು ತಿಳಿದುಬಂದಿದೆ. ವಿಮಾನವು ರನ್‌ವೇಗೆ ಅಪ್ಪಳಿಸುವ ಕೇವಲ ಎರಡು ಸೆಕೆಂಡುಗಳ ಮೊದಲು ಪೈಲಟ್ ಅತ್ಯಂತ ಗಾಬರಿಯಿಂದ ಓಹ್ ಶಟ್ ಎಂದು ಕಿರುಚಿದ್ದಾರೆ. ಇದು ವಿಮಾನವು ನಿಯಂತ್ರಣ ತಪ್ಪಿರುವುದು ಅಥವಾ ರನ್‌ವೇ ತಪ್ಪಾಗಿ ಕಂಡಿರುವುದು ಪೈಲಟ್‌ಗೆ ತಡವಾಗಿ ಅರಿವಿಗೆ ಬಂದಿದ್ದನ್ನು ಸೂಚಿಸುತ್ತದೆ.

ತನಿಖಾ ಮೂಲಗಳು ಹೇಳುವುದೇನು..?

ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತಕ್ಕೆ ಪೈಲಟ್‌ನ ತಪ್ಪು ನಿರ್ಧಾರ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಲ್ಯಾಂಡಿಂಗ್ ವೈಫಲ್ಯ: ಬಾರಾಮತಿಯಲ್ಲಿ ಲ್ಯಾಂಡ್ ಮಾಡಲು ಇದು ಎರಡನೇ ಪ್ರಯತ್ನವಾಗಿತ್ತು. ಮೊದಲ ಪ್ರಯತ್ನದಲ್ಲಿ ರನ್‌ವೇ ಸರಿಯಾಗಿ ಕಾಣದ ಕಾರಣ ಗೋ-ಅರೌಂಡ್ ಮಾಡಲಾಗಿತ್ತು.
ದೃಶ್ಯ ಗೋಚರತೆಯ ಕೊರತೆ: ಹವಾಮಾನ ವೈಪರೀತ್ಯದ ಹೊರತಾಗಿಯೂ ಪೈಲಟ್ ವಿಮಾನವನ್ನು ಇಳಿಸಲು ನಿರ್ಧರಿಸಿದ್ದರು. ರನ್‌ವೇ ತಲುಪುವ ಮೊದಲೇ ವಿಮಾನವು ಎಡಭಾಗಕ್ಕೆ ವಾಲಿ ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ.
ಸಂವಹನ ಲೋಪ: ಲ್ಯಾಂಡಿಂಗ್ ಕ್ಲಿಯರೆನ್ಸ್ ಪಡೆದ ನಂತರ ಪೈಲಟ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಎಟಿಸಿ (ATC) ಅಧಿಕಾರಿಗಳು ತಿಳಿಸಿದ್ದಾರೆ.

ಬಾರಾಮತಿಯಲ್ಲಿ ಕಂಬನಿಯ ಸಾಗರ

ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿತಿನ್ ಗಡ್ಕರಿ, ಶರದ್ ಪವಾರ್ ಸೇರಿದಂತೆ ರಾಷ್ಟ್ರದ ಪ್ರಮುಖ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಜಿತ್ ಪವಾರ್ ಅವರ ಪುತ್ರರಾದ ಪಾರ್ಥ್ ಮತ್ತು ಜಯ್ ಪವಾರ್ ತಮ್ಮ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಲಕ್ಷಾಂತರ ಅಭಿಮಾನಿಗಳ ಅಜಿತ್ ದಾದಾ ಅಮರ್ ರಹೇ ಎಂಬ ಘೋಷಣೆಗಳು ಬಾರಾಮತಿಯ ಮುಗಿಲು ಮುಟ್ಟಿದ್ದವು.
ಈ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರೊಂದಿಗೆ ಪೈಲಟ್ ಸುಮಿತ್ ಕಪೂರ್, ಸಹ-ಪೈಲಟ್ ಸಂಭವಿ ಪಾಠಕ್ ಮತ್ತು ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದು ತಾಂತ್ರಿಕ ದೋಷವೋ ಅಥವಾ ಪೈಲಟ್‌ನ ಹತಾಶೆಯ ನಿರ್ಧಾರವೋ ಎಂಬುದು ಪೂರ್ಣ ಪ್ರಮಾಣದ ಡಿಜಿಸಿಎ ವರದಿ ಬಂದ ನಂತರವಷ್ಟೇ ಖಚಿತವಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net