ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಮುಂಬೈನಿಂದ ಹೊರಟಿದ್ದ ಲಿಯರ್‌ಜೆಟ್ 45 ವಿಮಾನವು ರನ್‌ವೇ ತಲುಪುವ ಮೊದಲೇ ಪತನಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಅಪಘಾತದಲ್ಲಿ ಅಜಿತ್ ಪವಾರ್, ಅವರ ಅಂಗರಕ್ಷಕ, ಒಬ್ಬ ಸಹಾಯಕ ಮತ್ತು ಇಬ್ಬರು ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದರು.