ಏರ್ ಇಂಡಿಯಾ 300 ಅಡಿ ಕುಸಿತ: ಪೈಲೆಟ್‌ಗಳ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಪತ್ತೆ; ಲೈಸನ್ಸ್ ರದ್ದು! Air India Pilot Drug Test
ಏರ್ ಇಂಡಿಯಾ ವಿಮಾನ 300 ಅಡಿ ಕುಸಿದ ಘಟನೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಏರ್ ಇಂಡಿಯಾ ವಿಮಾನ 300 ಅಡಿ ಕುಸಿದ ಘಟನೆ
ಥೈಲ್ಯಾಂಡ್ ರಾಜಧಾನಿ ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ
ಪೈಲೆಟ್‌ಗಳ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢ
ಪೈಲೆಟ್‌ಗಳ ಪರವಾನಗಿ ರದ್ದುಗೊಳಿಸಿ ಆದೇಶ
ನವದೆಹಲಿ: ಆಗಸ್ಟ್ 4 ರಂದು ಥೈಲ್ಯಾಂಡ್ ರಾಜಧಾನಿ ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ ಕಂಡಿದ್ದ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಈ ವಿಮಾನದ ಪೈಲೆಟ್ಗಳನ್ನು ವೈದ್ಯಕೀಯ ಚಿಕಿತ್ಸೆ (Air India Pilot Drug Test) ಗೆ ಒಳಪಡಿಸಲಾಗಿದ್ದು ಇಬ್ಬರು ಪೈಲೆಟ್ಗಳಲ್ಲಿ ಒಬ್ಬ ಮಾದಕ ವಸ್ತು (ಗಾಂಜಾ) ಸೇವಿಸಿದ್ದಾಗಿ ತಿಳಿದು ಬಂದಿದೆ.
ವಿಮಾನ ಆಗಸದಲ್ಲಿದ್ದಾಗ ದಿಢೀರ್ ಟರ್ಬುಲೆನ್ಸ್ ಉಂಟಾಗಿ ವಿಮಾನದಲ್ಲಿದ್ದ ಒಟ್ಟು 142 ಪ್ರಯಾಣಿಕರು ಹಾಗೂ 8 ಕ್ರೂ ಸಿಬ್ಬಂದಿಗಳಲ್ಲಿ 134 ಪ್ರಯಾಣಿಕರು ಹಾಗೂ 4 ಕ್ರೂ ಸದಸ್ಯರು ತೀವ್ರ ಗಾಯಗೊಂಡಿದ್ದರು.
ಈ ಅವಗಢದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಿಮಾನದ ಇಬ್ಬರು ಪೈಲೆಟ್ಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಒಬ್ಬ ಪೈಲೆಟ್ ಗಾಂಜಾ ಸೇವಿಸಿದ ಬಗ್ಗೆ ವರದಿ ದೊರೆತಿದೆ. ಹಾಗೂ ಈ ಇಬ್ಬರು ಪೈಲೆಟ್‌ಗಳ ಪರವಾನಗಿಯನ್ನು ಡಿಜಿಸಿಎ ರದ್ದುಗೊಳಿಸಿ ಆದೇಶಿಸಿದೆ.
ವಿಮಾನ ಒಂದೇ ಸಮನೇ 300 ಅಡಿ ಕುಸಿತ ಕಂಡಿದ್ದು, ಆಟೋ ಪೈಲೆಟ್ ಮೊಡ್ ಕೂಡ ಕಾರ್ಯನಿರ್ವಹಿಸೆ ಇರುವುದು ಕೆಲಕಾಲ ಗಾಭರಿಗೆ ಕಾರಣವಾಗಿದೆ. ಪೈಲೆಟ್‌ಗಳ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಈ ಘಟನೆ ನಡೆದ ಪರಿಣಾಮ ಹಲವು ಪ್ರಯಾಣಿಕರು ತಮ್ಮ ಆಸನದಿಂದ ಕೆಳಕ್ಕೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಆದರೆ, ಈ ಅವಗಢ ದೊಡ್ಡ ದುರಂತವಾಗಿ ಬದಲಾವಣೆ ಕಾಣುವಲ್ಲಿ ವಿಫಲವಾಗಿದ್ದು, ನೆಮ್ಮದಿಯ ಸಂಗತಿಯಾಗಿದ್ದು, ಇನ್ಮುಂದೆ ಪೈಲೆಟ್‌ಗಳ ಆಯ್ಕೆ ಹಾಗೂ ಅವರ ವೈದ್ಯಕೀಯ ಪರೀಕ್ಷೆ ಕಡ್ಡಾಯದತ್ತ ಗಮನಹರಿಸುವುದು ಸೂಕ್ತ ಎನ್ನುವುದು ಜನ ಸಾಮಾನ್ಯರ ಅಭಿಪ್ರಾಯವಾಗಿದೆ, (ಏಜನ್ಸೀಸ್).