ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ರಾಜೀನಾಮೆ | Air India
ಕ್ಯಾಂಪ್ಬೆಲ್ ವಿಲ್ಸನ್
Published on:
Copied
Follow Us
ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ ಅವರು ಅವಧಿಗೂ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮಂಗಳವಾರ(ಏ. 07) ಬಲ್ಲ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
2022 ಜುಲೈನಲ್ಲಿ ಏರ್ ಇಂಡಿಯಾ ಸಿಇಒ ಆಗಿ ಕ್ಯಾಂಪ್ಬೆಲ್ ವಿಲ್ಸನ್ ನೇಮಕಗೊಂಡಿದ್ದರು. 2027ರವರೆಗೆ ಹುದ್ದೆಯಲ್ಲಿ ಮುಂದುವರೆಯಬೇಕಾಗಿತ್ತು. ಈ ಮೊದಲು ಟರ್ಕಿಶ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಆಯ್ಸಿ ಅವರಿಗೆ ಹುದ್ದೆ ವಹಿಸಿಕೊಳ್ತಾರೆ ಎನ್ನಲಾಗಿತ್ತು. ಆದರೆ ವಿವಾದ ಬಳಿಕ ಅವರು ಹಿಂದೆ ಸರಿದಿದ್ದರು.
ಇನ್ನೂ ಏರ್ ಇಂಡಿಯಾದ ಮಾಲೀಕ ಸಂಸ್ಥೆ ಟಾಟಾ ಗ್ರೂಪ್, ವಿಲ್ಸನ್ ರಾಜೀನಾಮೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹಿಂದಿನ ವರದಿಗಳು, ಟಾಟಾ ಗ್ರೂಪ್ ಈಗಾಗಲೇ ಸಂಭಾವ್ಯ ಉತ್ತರಾಧಿಕಾರಿಗಳನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಸೂಚಿಸಿದ್ದವು.
ಕಳೆದ ವರ್ಷ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಂಭವಿಸಿದ ಭೀಕರ ಅಪಘಾತದಲ್ಲಿ 241 ಮಂದಿ ಮೃತಪಟ್ಟ ಬಳಿಕ ವಿಲ್ಸನ್ ತೀವ್ರ ಟೀಕೆಗೆ ಗುರಿಯಾಗಿದ್ದರು (ಏಜೆನ್ಸೀಸ್).