ಪಕ್ಷದ ವಿಸ್ತರಣೆಗಾಗಿ0 ಪಶ್ಚಿಮ ಉತ್ತರ ಪ್ರದೇಶ ಮತ್ತು ಅವಧ್ ಭಾಗದ ಜಿಲ್ಲೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ವಿಶೇಷವಾಗಿ ಬಹ್ರೈಚ್, ಬಲರಾಮ್‌ಪುರ್, ಬಸ್ತಿ ಹಾಗೂ ಅದರ ಆಸುಪಾಸಿನ ಜಿಲ್ಲೆಗಳನ್ನು ಪ್ರಮುಖ ವಲಯಗಳಾಗಿ ಗುರುತಿಸಲಾಗಿದೆ. ಭಾನುವಾರ ಬಹ್ರೈಚ್‌ನಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಭೆಯ ಮೂಲಕ ಓವೈಸಿ ಅವರು ಅಧಿಕೃತವಾಗಿ ಚುನಾವಣಾ ಕಹಳೆ ಊದಲಿದ್ದಾರೆ. ಇದೇ ವೇದಿಕೆಯಲ್ಲಿ ಪಕ್ಷದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಶೌಕತ್ ಅಲಿ ಅವರನ್ನು ಬಹ್ರೈಚ್‌ನ ಮಟೇರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.