ಮುಂದುವರೆದ ಎಐಎಡಿಎಂಕೆ ಶಾಸಕರ ರಾಜೀನಾಮೆ ಪರ್ವ: ಇಂದು ಮತ್ತೊಬ್ಬ ಶಾಸಕ ರಾಜೀನಾಮೆ: ಟಿವಿಕೆ ಸೇರುವ ಸಾಧ್ಯತೆ | AIADMK

ಎಐಎಡಿಎಂಕೆ  ಶಾಸಕ ಎಂ.ಆರ್.ವಿಜಯಭಾಸ್ಕರ್ ರಾಜೀನಾಮೆ ಸಲ್ಲಿಸಿರುವುದು.
ಎಐಎಡಿಎಂಕೆ ಶಾಸಕ ಎಂ.ಆರ್.ವಿಜಯಭಾಸ್ಕರ್ ರಾಜೀನಾಮೆ ಸಲ್ಲಿಸಿರುವುದು.
Published on
ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ವಿಜಯ್ ಪಕ್ಷ ಕಟ್ಟಿ ಅಧಿಕಾರಕ್ಕೇರುತ್ತಿದ್ದಂತೆ ಅಲ್ಲಿನ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಮತ್ತು ಪ್ರಮುಖ ದ್ರಾವಿಡ ಪಕ್ಷವಾದ ಎಐಎಡಿಎಂಕೆಯಲ್ಲಿ(AIADMK) ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದ್ದು, ಇಂದು(ಜೂ. 29) ಮತ್ತೊಬ್ಬ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ಜೆಸಿ ಪ್ರಭಾಕರ್ ಅವರನ್ನು ಭೇಟಿಯಾಗಿ ಕರೂರು ಎಐಎಡಿಎಂಕೆ ಶಾಸಕ ಮತ್ತು ಮಾಜಿ ಸಚಿವ ಎಂ.ಆರ್.ವಿಜಯಭಾಸ್ಕರ್ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ಚುನಾವಣಾ ಸೋಲಿನ ಎಐಎಡಿಎಂಕೆಯೊಳಗಿನ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ಈ ಬೆಳವಣಿಗೆ ಶಾಸಕರ ರಾಜೀನಾಮೆ ಪರ್ವ ನಡೆಯುತ್ತಿದೆ.
ಎಂ.ಆರ್. ವಿಜಯಭಾಸ್ಕರ್ ಅವರು ಜೆ. ಜಯಲಲಿತಾ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2021ರ ಚುನಾವಣೆಯಲ್ಲಿ ಕರೂರ್ ಕ್ಷೇತ್ರದಲ್ಲಿ ಡಿಎಂಕೆಯ ವಿ. ಸೆಂಥಿಲ್ ಬಾಲಾಜಿ ವಿರುದ್ಧ ಸೋತಿದ್ದರು. ಆದರೆ 2026ರ ಚುನಾವಣೆಯಲ್ಲಿ ಅಲ್ಲಿಂದಲೇ ಮರು ಆಯ್ಕೆಯಾಗಿದ್ದರು.
ಚುನಾವಣಾ ಆಯೋಗವು ಖಾಲಿಯಿರುವ ಶಾಸಕ ಸ್ಥಾನಗಳನ್ನು ಭರ್ತಿ ಮಾಡಲು ಉಪಚುನಾವಣೆಗಳಿಗೆ ವ್ಯವಸ್ಥೆ ಮಾಡುತ್ತಿರುವ ಸಮಯದಲ್ಲಿ, ಶಾಸಕರ ರಾಜೀನಾಮೆ ಸಂಖ್ಯೆ ಹೆಚ್ಚುತ್ತಲಿದೆ. 17ನೇ ತಮಿಳುನಾಡು ವಿಧಾನಸಭೆಗೆ ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ ಏಳಕ್ಕೆ ಏರಿದೆ. ಅವರಲ್ಲಿ ಆರು ಮಂದಿ ಎಐಎಡಿಎಂಕೆಗೆ ಸೇರಿದವರು. ಇನ್ನೂ ವಿಧಾನಸಭೆಯಲ್ಲಿ ಎಐಎಡಿಎಂಕೆಯ ಬಲ ಈಗ 47ರಿಂದ 41ಕ್ಕೆ ಕುಸಿದಿದೆ.
ಎಐಎಡಿಎಂಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರು ಮಂದಿಯಲ್ಲಿ ನಾಲ್ವರು ಈಗಾಗಲೇ ಆಡಳಿತರೂಢ ಟಿವಿಕೆ ಸೇರ್ಪಡೆಯಾಗಿದ್ದಾರೆ. ಇನ್ನೂ ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಸಿ.ವಿಜಯಭಾಸ್ಕರ್ ಮತ್ತು ಇಂದು ರಾಜೀನಾಮೆ ನೀಡಿದ ಎಂಆರ್ ವಿಜಯಭಾಸ್ಕರ್ ಜುಲೈ 1 ಅಥವಾ 2 ರಂದು ಸಿಎಂ ವಿಜಯ್ ಸಮ್ಮುಖದಲ್ಲಿ ಟಿವಿಕೆ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net