ಮುಂದುವರಿದು ಮಾತನಾಡಿದ ಶಾಸ್ತ್ರಿ, ಭಾರತ ತಂಡವು ಮುಂದಿನ ದಿನಗಳಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯೇ ವೈಭವ್ ಸೂರ್ಯವಂಶಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯಿಸಲು ಅತ್ಯಂತ ಸೂಕ್ತ ವೇದಿಕೆಯಾಗಿದೆ. ನಾನು ಕೇವಲ ಭವಿಷ್ಯದ ದೃಷ್ಟಿಯಿಂದ ಹೇಳುತ್ತಿಲ್ಲ, ಈಗಲೇ ಆತನನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.