ನೋಯ್ಡಾದಲ್ಲೇ ಕಳೆದ ಕೆಲವು ದಿನದ ಹಿಂದೆ ಸಾಫ್ಟ್ವೇರ್ ಎಂಜಿನಿಯರ್ ತ್ವಿಶಾ ಶರ್ಮಾ ಎಂಬುವವರು ನೇಣಿಗೆ ಕೊರಳೊಡ್ಡಿದ್ದರು. ವಕೀಲ ಪತಿಯಿಂದ ನಿರಂತರ ಮಾನಸಿಕ ಮತ್ತು ದೈಹಿಕರ ಕಿರುಕುಳಕ್ಕೆ ಒಳಗಾಗಿ, ಮದುವೆಯಾದ ಐದೇ ತಿಂಗಳಿಗೆ ಮೃತಪಟ್ಟಿದ್ದ ಬಗ್ಗೆ ದೂರು ದಾಖಲಾಗಿತ್ತು. ತ್ವಿಶಾ ಪೋಷಕರು ಸಿಎಂ ಮನೆಯ ಮುಂದೆ ಮರಣೋತ್ತರ ಪರೀಕ್ಷೆಯ ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು. ಆ ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿರುವುದು ರಾಜ್ಯದಲ್ಲಿ ಮಹಿಳೆಯರಿಗೆ ಕಾಡುತ್ತಿರುವ ಅಸುರಕ್ಷತೆ ಬಗ್ಗೆ ಎದ್ದು ಕಾಣುತ್ತಿದೆ, (ಏಜೆನ್ಸೀಸ್).