ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದಳಪತಿ, ಇಂದು ತಾವು ಅಭಿನಯಿಸುವ ಒಂದೇ ಒಂದು ಚಿತ್ರಕ್ಕೆ ಬರೋಬ್ಬರಿ 250 ಕೋಟಿ ರೂ. ಮೊತ್ತದ ಸಂಭಾವನೆ ಪಡೆಯುವ ರೇಂಜಿಗಿದ್ದಾರೆ. ಹೀಗಿರುವಾಗಲೇ, ತಮ್ಮ ದಿಕ್ಕನ್ನು ರಾಜಕೀಯದತ್ತ ತಿರುಗಿಸಿರುವ ದಳಪತಿ, 'ಜನನಾಯಗನ್' ಬಳಿಕ ಇನ್ಯಾವುದೇ ಚಿತ್ರ ಮಾಡುವುದಿಲ್ಲ, ಪರಿಪೂರ್ಣವಾಗಿ ರಾಜಕಾರಣಿಯಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. ಇದಾದ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕಿಳಿದ ದಳಪತಿಗೆ, ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದೊಡ್ಡ ಹೊಡೆತ ನೀಡಿದೆ. ಇದೊಂದು ದುರ್ಘಟನೆಯಿಂದಲೇ ಶುರುವಾಗಿದ್ದು ವಿಜಯ್ಗೆ ಸಂಕಷ್ಟಗಳ ಸರಮಾಲೆ.