ರಾಮಾಯಣ ರಿಲೀಸ್ ಬಳಿಕ ಕೇರಳಂನ ಜಟಾಯು ಅರ್ಥ್ ಸೆಂಟರ್‌ಗೆ ಪ್ರಧಾನಿ ಭೇಟಿ?; ಈ ಸ್ಥಳದ ಮಹತ್ವವೇನು ಗೊತ್ತಾ?..Modi

ಜಟಾಯು ಅರ್ಥ್ ಸೆಂಟರ್‌
ಜಟಾಯು ಅರ್ಥ್ ಸೆಂಟರ್‌
Published on: 
  • ಕೇರಳಂನಲ್ಲಿರುವ ಜಟಾಯು ಅರ್ಥ್ ಸೆಂಟರ್‌ಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ.

  • 'ರಾಮಾಯಣ' ಚಿತ್ರದ ಬಳಿಕ ಜಟಾಯು ಬಗ್ಗೆ ಹೆಚ್ಚಿದ ಆಸಕ್ತಿ.

  • ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಪ್ರಧಾನಿ ಮೋದಿ ಕೇರಳಕ್ಕೆ ಭೇಟಿ ನೀಡುವ ಸುಳಿವು ಕೊಟ್ಟ ಸುರೇಶ್ ಗೋಪಿ.

ತಿರುವನಂತಪುರಂ: ನ.5ರಂದು ರಿಲೀಸ್ ಆಗಿದ್ದ ರಾಮಾಯಣ ಭಾಗ1ರ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಂನಲ್ಲಿರುವ ಜಟಾಯು ಅರ್ಥ್ ಸೆಂಟರ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮೊದಲು ಕೊಲ್ಲಂ ಜಿಲ್ಲೆಯ ಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.

Also Read
Ramayana Movie: ಜಟಾಯು ಪಾತ್ರಕ್ಕೆ ಅನೂಪ್ ಖೇರ್ ಧ್ವನಿ! ‘ದಿ ವಿಂಗ್ಸ್ ಆಫ್ ಧರ್ಮ’ ಪೋಸ್ಟರ್ ರಿಲೀಸ್​
ಜಟಾಯು ಅರ್ಥ್ ಸೆಂಟರ್‌

ಸುರೇಶ್​ ಗೋಪಿ ಅವರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಪ್ರಕಾರ, ಗಜೇಂದ್ರ ಸಿಂಗ್ ಶೇಖಾವತ್ ಅವರು ಜಟಾಯುಪಾರಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ,. ದೆಹಲಿ ಬಿಯೆನ್ನೆಲ್ ಕಲಾ ಉತ್ಸವದಲ್ಲಿ ಕೇರಳದ ಪ್ರಸಿದ್ಧ ಜಟಾಯು ಶಿಲ್ಪದ ಉಪಸ್ಥಿತಿ ಇರುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದರು

ಮುಂದುವರೆದು, ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರು ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿ, ಜಟಾಯು ಅರ್ಥ್​ ಸೆಂಟರ್​ನ ನಿರ್ಮಾತೃ ಶಿಲ್ಪಿ ರಾಜೀವ್​​​ ಅಂಚಲ್​ ಅವರನ್ನು​ ಭೇಟಿ ಮಾಡಿದ್ದರು. ದೆಹಲಿ ಬಿಯೆನ್ನೆಲ್​ನಲ್ಲಿ ಜಟಾಯು ಐಕಾನಿಕ್​ ಶಿಲ್ಪವನ್ನು ಪ್ರದರ್ಶಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಈ ಪ್ರಸ್ತಾವನೆ ಬಗ್ಗೆ ಮೋದಿ ಅವರಿಗೂ ತಿಳಿಸಲಾಗಿದೆ ಎಂದು ಸುರೇಶ್​ ಗೋಪಿ ಅವರು ಮಾತನಾಡಿದ್ದಾರೆ.

Also Read
ರಾಮನ ದರ್ಶನಕ್ಕೆ ಅಯೋಧ್ಯೆಗೆ ಹೊರಟಿತೆ ಜಟಾಯು ಪಕ್ಷಿ? ಇಲ್ಲಿದೆ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು
ಜಟಾಯು ಅರ್ಥ್ ಸೆಂಟರ್‌

ಏನಿದು ಜಟಾಯು ಶಿಲ್ಪ, ಇದರ ಮಹತ್ವವೇನು?

ಅರುಣ ಮತ್ತು ಶೈನಿಯ ಮಗ, ಸಂಪತಿಯ ಸಹೋದರ ಹಾಗೂ ಅಯೋಧ್ಯೆಯ ರಾಜ ದಶರಥನ ಆಪ್ತ ಸ್ನೇಹಿತ ಜಟಾಯು. ಸೀತಾ-ರಾಮ, ಲಕ್ಷ್ಮಣರು ವನವಾಸದಲ್ಲಿದ್ದಾಗ ಸಾದ್ವಿ ವೇಷದಲ್ಲಿ ಕಾಣಿಸಿಕೊಳ್ಳುವ ರಾವಣನು, ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದೊಯ್ಯುತ್ತಿರುತ್ತಾನೆ. ಇದನ್ನು ಕಂಡ ಹದ್ದಿನ ರೂಪದ ಪಕ್ಷಿ ಜಟಾಯು ಸೀತೆಯ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತಾನೆ. ರಾವಣನೊಂದಿಗೆ ವೀರಾವೇಷದಲ್ಲಿ ಹೋರಾಡುತ್ತಾನೆ.

ಇದೇ ವೇಳೆ ರಾವಣನು ಹರಿತವಾದ ಚಂದ್ರಹಾಸ ಖಡ್ಗದಿಂದ ಜಟಾಯು ರೆಕ್ಕೆಯನ್ನು ಕತ್ತರಿಸುತ್ತಾನೆ. ಇದರಿಂದ ತೀವ್ರ ಗಾಯಗೊಂಡ ಜಟಾಯು ನೆಲಕ್ಕುರುಳುತ್ತಾನೆ. ಸೀತೆಯನ್ನು ಹುಡುಕಿ ಬರುವ ರಾಮ-ಲಕ್ಷ್ಮಣರಿಗೆ ಜಟಾಯು ಎದುರಾಗುತ್ತಾನೆ. ಸೀತೆ ಎಲ್ಲಿ, ಏನಾಯಿತು ಎನ್ನುವ ಎಲ್ಲ ಮಾಹಿತಿ ಕೊಟ್ಟು ಕೊನೆಯುಸಿರೆಳೆಯುತ್ತಾನೆ. ರಾಮಾಯಣದಲ್ಲಿ ಜಟಾಯು ಬಹುಮುಖ್ಯ ಪಾತ್ರವಹಿಸುತ್ತದೆ.

ಜಟಾಯು ಬಿದ್ದ ಸ್ಥಳವನ್ನು ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲಂ ಎಂದು ನಂಬಲಾಗಿದೆ. ಹೀಗಾಗಿ ಇಲ್ಲಿ ವಿಶ್ವದ ಅತಿದೊಡ್ಡ ಜಟಾಯು ಪಕ್ಷಿ ಶಿಲ್ಪ ಕೆತ್ತಲಾಗಿದೆ. ಇದು ಸದ್ಯ ಪ್ರವಾಸಿ ತಾಣವಾಗಿದೆ. ಇದನ್ನು ಜಟಾಯುಪರ ಎಂದು ಕರೆಯಲಾಗುತ್ತಿದ್ದು, ಬೆಟ್ಟದ ಮೇಲೆ 1150 ಅಡಿ, 65 ಎಕರೆ ಪ್ರದೇಶದಲ್ಲಿ ಇದೆ.

ಸದ್ಯ ಪ್ರಧಾನಿ ಮೋದಿ ಭೇಟಿಯಿಂದಾಗಿ ಜಟಾಯು ಅರ್ಥ್ ಸೆಂಟರ್​ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಟ್ಟಿದೆ. ರಾವಣನೊಂದಿಗೆ ಪೌರಾಣಿಕ ಪಕ್ಷಿಯು ನಡೆಸಿದ ಹೋರಾಟವನ್ನು ಚಿತ್ರದಲ್ಲಿ ತೋರಿಸಿರುವುದು ಈ ತಾಣದತ್ತ ಇನ್ನಷ್ಟು ಗಮನ ಸೆಳೆದಿದೆ, (ಏಜೆನ್ಸೀಸ್).