ಕೆಲವು ಎಕ್ಸಿಟ್ ಪೋಲ್ ಸಮೀಕ್ಷೆಗಳು ತಮಿಳುನಾಡಿನಲ್ಲಿ ಮಗದೊಮ್ಮೆ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಒಂದು ಅಥವಾ ಎರಡು ಮಾತ್ರ ಎಐಎಡಿಎಂಕೆ ಗೆಲುವು ಸಾಧಿಸಬಹುದು ಎಂದಿವೆ. ಆದಾಗ್ಯೂ, ಪ್ರಮುಖ ಎಕ್ಸಿಟ್ ಪೋಲ್ ಕಂಪನಿ ಆಕ್ಸಿಸ್ ಮೈ ಇಂಡಿಯಾ, ತಮಿಳಿನ ಸ್ಟಾರ್ ನಟ ವಿಜಯ್ ಅವರ ಟಿವಿಕೆ ಪಕ್ಷವು ಈ ಬಾರಿ ತಮಿಳುನಾಡಿನಲ್ಲಿ 98ರಿಂದ 120 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ. ಡಿಎಂಕೆ ಮೈತ್ರಿಕೂಟ 92ರಿಂದ 110 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಎಐಎಡಿಎಂಕೆ + ಬಿಜೆಪಿ ಮೈತ್ರಿಕೂಟ 22ರಿಂದ 32 ಸ್ಥಾನಗಳನ್ನು ಪಡೆಯುಬಹುದು ಎಂದು ಹೇಳಿದೆ.