ಮದ್ಯಪಾನದಿಂದ ಹೆಂಡತಿ-ಮಗಳ ನಡುವಿನ ವ್ಯತ್ಯಾಸ ಗೊತ್ತಾಗುವುದಿಲ್ಲ; ಅತ್ಯಾಚಾರಕ್ಕೆ ಎಸ್​ಪಿ ನಾಯಕನ ವಿಶ್ಲೇಷಣೆ ಹೀಗಿದೆ! | S T Hasan

S T Hasan | ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್
S T Hasan | ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್
Published on
ಲಖನೌ: ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರಯ್ಯನ ಅತ್ಯಾಚಾರದ ಕುರಿತಾದ ವಿವಾದಾತ್ಮಕ ಹೇಳಿಕೆಗಳನ್ನು ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್ ಖಂಡಿಸಿದ್ದು, ಪುರುಷರಲ್ಲಿ ಅನಿಯಂತ್ರಿತ ಲೈಂಗಿಕ ಬಯಕೆಗಳು ಹೆಚ್ಚಾಗಲು ಆನ್‌ಲೈನ್​​ನಲ್ಲಿರುವ ಅಶ್ಲೀಲ ವಿಷಯಗಳು, ಮದ್ಯಪಾನವೇ ಕಾರಣ ಎಂದರು.
ಎಎನ್​ಐ ಜೊತೆ ಮಾತನಾಡಿದ ಎಸ್​ಪಿ ನಾಯಕ ಹಸನ್​, ಅತ್ಯಾಚಾರಕ್ಕೆ ಪ್ರಮುಖ ಕಾರಣ ಎಂದರೆ ಅದು ಇಂಟರ್ನೆಟ್, ಅಲ್ಲಿ ಸಿಗುವ ಅಶ್ಲೀಲತೆಯು ಯುವಕರಿಗೆ ಟೆಸ್ಟೋಸ್ಟೆರಾನ್ ವರ್ಧಕವನ್ನು ನೀಡುತ್ತದೆ, ಇದರಿಂದಾಗಿ ಅವರ ಲೈಂಗಿಕ ಆಸೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಇಂತಹ ಸಮಯದಲ್ಲಿ ಒಬ್ಬ ಮಹಿಳೆ ಅಥವಾ ಹುಡುಗಿ ಅವರ ಸುತ್ತ ಬಂದರೆ ಅತ್ಯಾಚಾರವಾಗುತ್ತದೆ ಎಂದು ಅತ್ಯಾಚಾರಗಳಿಗೆ ತಮ್ಮದೇ ಆದ ವಿಶ್ಲೇಷಣೆ ನೀಡಿದರು.

ಮದ್ಯಪಾನ ನೈತಿಕ ಗಡಿಗಳನ್ನು ನಾಶಪಡಿಸುತ್ತದೆ

ಮದ್ಯ ಸೇವನೆಯ ಬಳಿಕ ಪುರುಷನು ತನ್ನ ಹೆಂಡತಿ ಮತ್ತು ಮಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಮರೆತುಬಿಡುತ್ತಾನೆ. ಇದಕ್ಕೆ ನಾವು ಹಲವು ಉದಾಹರಣೆಗಳನ್ನು ಸಹ ನೋಡಿದ್ದೇವೆ, ಅತ್ಯಾಚಾರಿಗಳನ್ನು ಶಿಕ್ಷಿಸಲು ನಮಗೆ ಕಠಿಣ ಕಾನೂನುಗಳು ಬೇಕು. ಆರೋಪಿಗಳಿಗೆ ರಸ್ತೆಯಲ್ಲಿ ಗುಂಡು ಹಾರಿಸಬೇಕು ಎಂದು ಹೇಳಿದರು.

ಶಾಸಕ ಫೂಲ್ ಸಿಂಗ್​ ಹೇಳಿದ್ದೇನು..?

ಮಾಧ್ಯಮ ಸಂದರ್ಶನವೊಂದರಲ್ಲಿ ಫೂಲ್ ಸಿಂಗ್ ಬರಯ್ಯ ಅತ್ಯಾಚಾರ ಅಪರಾಧವನ್ನು ಜಾತಿ ಮತ್ತು ಧಾರ್ಮಿಕ ವ್ಯಾಖ್ಯಾನಗಳೊಂದಿಗೆ ಜೋಡಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳನ್ನು ಉಲ್ಲೇಖಿಸುತ್ತಾ ಕೆಲವು ಜಾತಿಗಳ ಮಹಿಳೆಯರ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯ ತೀರ್ಥಯಾತ್ರೆಗೆ ಸಮಾನವಾದ ಆಧ್ಯಾತ್ಮಿಕ ಅರ್ಹತೆಯನ್ನು ಹೊಂದಿದೆ ಎಂದು ಸನಾತನದ ಶಾಸ್ತ್ರಗಳು ಹೇಳುತ್ತವೆ ಎಂಬ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಅತ್ಯಾಚಾರಕ್ಕೆ ಹೆಚ್ಚು ಬಲಿಯಾಗುವವರು ಯಾರು? ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳು. ಒಬ್ಬ ಪುರುಷ, ಅವನ ಮಾನಸಿಕ ಸ್ಥಿತಿ ಏನೇ ಇರಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುಂದರ ಹುಡುಗಿಯನ್ನು ನೋಡಿದರೆ, ಅದು ಅವನ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತದೆ ಮತ್ತು ಅವನು ಮಹಿಳೆಯ ಮೇಲೆ ಅತ್ಯಾಚಾರ ಮಾಡುವಂತೆ ಮಾಡುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಮಹಿಳೆಯರು ಸುಂದರವಾಗಿಲ್ಲದಿದ್ದರೂ, ಧರ್ಮಗ್ರಂಥಗಳಲ್ಲಿ ಬರೆಯಲ್ಪಟ್ಟಿರುವುದರಿಂದ ಅವರು ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ಬರಯ್ಯ ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net