ಬದಲಾವಣೆಗೆ ತಯಾರಾಗಿರುವ ಮಸೂದೆಗಳು- ಸಬ್ಕಾ ಬಿಮಾ, ವಿಮಾ ಕಾನೂನುಗಳನ್ನು ತಿದ್ದುಪಡಿ ಮಾಡುವ ಸಬ್ಕಿ ರಕ್ಷಾ ಮಸೂದೆ, ವಿಕ್ಷಿತ್ ಭಾರತ್ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯನ್ನು ಜಿ ರಾಮ್ ಜಿ ಮಸೂದೆ ಎಂದೂ ಕರೆಯುತ್ತಾರೆ ಮತ್ತು ಸುಸ್ಥಿರ ಬಳಕೆ ಮತ್ತು ಪರಮಾಣು ಶಕ್ತಿಯ ಪ್ರಗತಿ (ಶಾಂತಿ) ಮಸೂದೆ ಸೇರಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಿ ರಾಮ್ ಜಿ ಯೋಜನೆಯೊಂದಿಗೆ ಬದಲಾಯಿಸುವ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸಿದ್ದು, ಬಿಜೆಪಿಗೆ ರಾಷ್ಟ್ರಪಿತನೊಂದಿಗೆ ಏನಾದರು ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದೆ. ಜಿ ರಾಮ್ ಜಿ ಮತ್ತು ಇತರ ಯೋಜನೆಗಳ ಹೆಸರು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ತನ್ನ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಎನ್ನುವುದು ಸರ್ಕಾರದ ವಾದ(ಏಜೆನ್ಸೀಸ್).