ಶುಂಠಿ-ಬೆಳ್ಳುಳ್ಳಿ ಪೇಸ್ಟ್​ನಲ್ಲೂ ಕಲಬೆರಿಕೆ: 4 ಸಾವಿರ ಕೆಜಿ ನಕಲಿ ಪೇಸ್ಟ್​ನ್ನು ಜಪ್ತಿ ಮಾಡಿದ ಹೈದರಾಬಾದ್​ ಪೊಲೀಸ್​! Ginger Garlic Paste

4 ಸಾವಿರ ಕೆಜಿ ನಕಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್​ ಜಪ್ತಿ
4 ಸಾವಿರ ಕೆಜಿ ನಕಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್​ ಜಪ್ತಿ
Published on

ಪ್ರಮುಖ ಮುಖ್ಯಾಂಶಗಳು

  • 4 ಸಾವಿರ ಕೆಜಿ ನಕಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್​ ಜಪ್ತಿ
  • ಹೈದರಾಬಾ್​ನ ಖೈರತಾಬಾದ್​ನಲ್ಲಿ ನಡೆದ ದಾಳಿಯಲ್ಲಿ ಪತ್ತೆ
  • ಸುಮಾರು 22 ಲಕ್ಷ ಮೌಲ್ಯದ ನಕಲಿ ಆಹಾರ ಪದಾರ್ಥವನ್ನು ವಶಕ್ಕೆ ಪಡೆದ ಪೊಲೀಸರು
ಹೈದರಾಬಾದ್​: ಭಾರತದಲ್ಲಿ ಆಹಾರ ತಯಾರಿಕೆಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ದೇಶದ ಮೂಲೆ-ಮೂಲೆಯಿಂದ ಕಲಬೆರಿಕೆಯುಕ್ತ ಆಹಾರ ತಯಾರಿಕೆಯ ಸುದ್ದಿಗಳು ಕಿವಿಗೆ ಬೀಳುತ್ತಲೆ ಇರುತ್ತದೆ.
ಇತ್ತೀಚೆಗೆ ಭಾರತೀಯರ ಮನೆಯಲ್ಲಿ ಬಹುತೇಕ ಅಡುಗೆಗಳಲ್ಲಿ ಬಳಸುವ ಶುಂಠಿ-ಬೆಳ್ಳುಳ್ಳಿ ಪೇಸ್ಟಿ (Ginger Garlic Paste) ನ ನಕಲಿ ಜಾಲವನ್ನು ಹೈದರಾಬಾನಲ್ಲಿ ಬೇಧಿಸಲಾಗಿದೆ.

ನಾಲ್ಕು ಸಾವಿರ ಕಿ.ಲೋ ನಕಲಿ ಪೇಸ್ಟ್ ಜಪ್ತಿ!

ಇತ್ತೀಚೆಗೆ ಹೈದರಾಬಾದಿನ ಖೈರತಾಬಾದ್ ವಲಯದಲ್ಲಿ ಆಹಾರ ಸುರಕ್ಷಾ ಅಧಿಕಾರಿಗಳು ಮತ್ತು ಹೈದರಾಬಾದ್​ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಸುಮಾರು 4,032 ಕೆಜಿ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್​ನ್ನು ಜಪ್ತಿ ಮಾಡಲಾಗಿದ್ದು, ಇದರ ಮೊತ್ತ ಸರಿ ಸುಮಾರು 22 ಲಕ್ಷ ಎಂದು ಅಂದಾಜಿಸಲಾಗಿದೆ.
ಹಾಗೆಯೇ ಈ ದಾಳಿಯಲ್ಲಿ ನಕಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್​ ತಯಾರಿಸಲು ಬೇಕಾಗುವ ಸುಮಾರು 6,210 ಕೆಜಿ ಕಚ್ಚಾ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೈದರಾಬಾದ್​ ಪೊಲೀಸರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕಠಿಣ ಕ್ರಮ ಕೈಗೊಳ್ಳುತ್ತೇವೆ

ಈ ಉತ್ಪಾದನಾ ಘಟಕವು ಹಸನ್​ ಅಲಿ ರೂಪಾನಿ ಎನ್ನುವವರಿಗೆ ಸೇರಿದ್ದಾಗಿದ್ದು, ಅವರ ಮೇಲೆ ಅಕ್ರಮ ಘಟಕ ಸ್ಥಾಪನೆ ಮತ್ತು ಕಲಬೆರಿಕೆಯುಕ್ತ ಆಹಾರ ಉತ್ಪನ್ನ ತಯಾರಿಕೆಯ ಅಧಿನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಕಲಬೆರಿಕೆಯುಕ್ತ ಆಹಾರ ಪದಾರ್ಥವನ್ನು ಜಪ್ತಿಮಾಡಿ, ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು, ಕಠಿಣ ಕ್ರಮವನ್ನು ತೆಗೆದಕೊಳ್ಳುವ ಭರವಸೆಯನ್ನು ಹೈದರಾಬಾದ್​ ಪೊಲೀಸರು ನೀಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net