3 ತಿಂಗಳಿಗಿಂತ ದೊಡ್ಡ ಶಿಶು ದತ್ತು ಪಡೆದ್ರೂ ತಾಯಿಗೆ 12 ವಾರ ಹೆರಿಗೆ ರಜೆ ಕೊಡ್ಬೇಕು ಎಂದ ಸುಪ್ರೀಂ ಕೋರ್ಟ್! Maternity Leave

3 ತಿಂಗಳಿಗಿಂತ ದೊಡ್ಡ ಶಿಶು ದತ್ತು ಪಡೆದ್ರೂ ತಾಯಿಗೆ 12 ವಾರ ಹೆರಿಗೆ ರಜೆ ಕೊಡ್ಬೇಕು ಎಂದ ಸುಪ್ರೀಂ ಕೋರ್ಟ್! Maternity Leave
3 ತಿಂಗಳಿಗಿಂತ ದೊಡ್ಡ ಶಿಶು ದತ್ತು ಪಡೆದ್ರೂ ತಾಯಿಗೆ 12 ವಾರ ಹೆರಿಗೆ ರಜೆ ಕೊಡ್ಬೇಕು ಎಂದ ಸುಪ್ರೀಂ ಕೋರ್ಟ್! Maternity Leave
Published on

ಪ್ರಮುಖ ಮುಖ್ಯಾಂಶಗಳು

  • ದತ್ತು ಪಡೆದ ಮಗುವಿಗೂ, ಹೆರಿಗೆಯ ನಂತರದ ಶಿಶುವಿಗೂ ಯಾವುದೇ ವ್ಯತ್ಯಾಸವಿಲ್ಲ
  • ಮೂರು ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಶಿಶುವನ್ನು ದತ್ತು ಪಡೆದುಕೊಂಡರೆ ಹೆರಿಗೆ ರಜೆ ಕೊಡ್ಬೇಕು
  • ದತ್ತು ಪಡೆದ ತಾಯಿಗೆ ರಜೆ ನೀಡಲು ಇರುವ ಕಾನೂನು ತೊಡಕಿನ ವರದಿ ನೀಡಲು ಡಿ.17 ಕಡೇ ದಿನ
ನವದೆಹಲಿ: ಮೂರು ತಿಂಗಳಿಗಿಂತ ದೊಡ್ಡ ವಯಸ್ಸಿನ ಮಗುವನ್ನು ದತ್ತು ಪಡೆದುಕೊಂಡ ತಾಯಿಗೆ ಹೆರಿಗೆ ರಜೆ (Maternity Leave) ನಿರಾಕರಿಸುವುದು ಸಂವಿಧಾನ ಬಾಹಿರ. ರಜೆ ನೀಡದೆ ಇರುವುದಕ್ಕೆ ಕಾರಣ ಏನು? ಕಾನೂನು ತೊಡಕಿದ್ದರೆ ವರದಿ ನೀಡಿ ಎಂದು ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ವಿವರಣೆ ಕೇಳಿದೆ.
ಮಗುವನ್ನು ದತ್ತು ಪಡೆದುಕೊಂಡ ತಾಯಿ ಅದರ ವಯಸ್ಸು ಲೆಕ್ಕಿಸೋದಿಲ್ಲ. ಹೀಗಾಗಿ ಆಕೆಗೆ 12 ವಾರಗಳ ಹೆರಿಗೆ ರಜೆ ನೀಡಬೇಕು. ಮಗು ಮತ್ತು ತಾಯಿ ಜೊತೆ ಬೆರೆಯಲು ಸಮಯ ಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಪಾರ್ದಿವಾಲ ಮತ್ತು ಮಹಾದೇವನ್​ ಅವರಿದ್ದ ಪೀಠವು ಸ್ಪಷ್ಟಪಡಿಸಿದೆ.
ಮೂರು ತಿಂಗಳಿಗಿಂತ ದೊಡ್ಡ ಮಕ್ಕಳನ್ನು ದತ್ತು ಪಡೆದುಕೊಂಡ( Adopted child ) ತಾಯಂದರಿಗೆ 12 ವಾರಗಳ ರಜೆ ನೀಡಲಾಗುತ್ತಿದೆ. ಇದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿತು. ದತ್ತು ಪಡೆದ ತಾಯಿಗೆ ರಜೆ ನೀಡದೆ ಇರಲು ಇರುವ ಕಾನೂನು ತೊಡಕಾದರೂ ಏನು ಎಂಬ ಬಗ್ಗೆ ವರದಿ ನೀಡುವಂತೆ ಡಿ.17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಸುಪ್ರೀಂ ಕೋರ್ಟ್​ ಹೇಳಿದ್ದೇನು?

ಮಗುವನ್ನು ಹೇಗೆ ಹೊರತರಲಾಯಿತು ಎಂಬುದರ ಮೇಲೆ ಮಾತೃತ್ವ ರಕ್ಷಣೆಯ ಉದ್ದೇಶ ನಿಲ್ಲುವುದಿಲ್ಲ. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಮತ್ತು ಅದಕ್ಕಿಂತ ದೊಡ್ಡ ವಯಸ್ಸಿನ ಮಗುವನ್ನು ದತ್ತು ಪಡೆದ ತಾಯಿಯ ಮಾತೃತ್ವ ರಕ್ಷಣೆ ಬೇರೆ ಬೇರೆಯಲ್ಲ. ಇಬ್ಬರಿಗೂ ರಜೆ ನೀಡುವುದು ಸರಿಯಾದ ಕ್ರಮ. ಹೆತ್ತ ಮಗುವಿಗೆ ಮತ್ತು ದತ್ತು ಪಡೆದ ಮಗುವಿನ ತಾಯಿಗೆ ಯಾವುದೇ ವ್ಯತ್ಯಾಸವಿಲ್ಲ. ದತ್ತು ಪಡೆದ ಮಗುವು ಕುಟುಂಬದಲ್ಲೊಂದು ಎಂದು ರೂಪಿಸಿಕೊಳ್ಳುವುದಕ್ಕೆ ತಾಯಿಗೆ ಸಮಯ ಬೇಡುತ್ತದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಮಗು ಜೊತೆ ಹೊಂದಿಕೊಳ್ಳಲು ರಜೆ ಮುಖ್ಯ

2020ರ ಸಾಮಾಜಿಕ ಭದ್ರತಾ ಸಹಿತ ಸೆಕ್ಷನ್​ 60(4)ರಡಿ ಇರುವ ಕಾನೂನು ಅಸಂವಿಧಾನಿಕ. ಇಂತಹ ಕಾಯ್ದೆಗಳು ಆರ್ಟಿಕಲ್​ 14 ಸಮಾನತೆಯ ಹಕ್ಕಿನ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯ ಪಟ್ಟಿದೆ. ದತ್ತು ಸ್ವೀಕಾರವೂ ಸಂತಾನೋತ್ಪತ್ತಿ ಹಕ್ಕಿನ ಸಮಾನ ವ್ಯಾಯಾಮವಾಗಿದೆ. ದತ್ತು ಪಡೆದ ಮಗುವಿಗೆ ಮತ್ತು ಹೆರಿಗೆಯಾಗಿ ನೈಸರ್ಗಿಕವಾಗಿ ಹೊರಬಂದಂತಹ ಶಿಶುವಿಗೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಮಗು ದತ್ತು ಪಡೆದ ದಿನಾಂಕದಿಂದ 12 ವಾರದವರೆಗೆ ತಾಯಿ ಮಾತೃತ್ವ ಭತ್ಯೆಗೆ ಅರ್ಹಳು. ಅಲ್ಲದೆ ದತ್ತು ಪಡೆದ ತಂದೆಗೂ ಪಿತೃತ್ವ ರಜೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಇನ್ನು ವಯಸ್ಸಿನ ಆಧಾರಿತ ರಜೆ ನಿರ್ಬಂಧವು ಸಂವಿಧಾನ 14ನೇ ವಿಧಿಯ ಉಲ್ಲಂಘನೆ ಎದು ಹಂಸನಂದಿನಿ ನಂದೂರಿ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಈ ತೀರ್ಪನ್ನು ನೀಡಿದೆ (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net