ಚೆಂದದ ಸೀರೆ ತೊಟ್ಟು, ಮಲ್ಲಿಗೆ ಹೂ ಮುಡಿದು ತಮ್ಮ ಬಹುಕಾಲದ ಸ್ನೇಹಿತ ವಿಜಯ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ ನಟಿ, ಮಾಧ್ಯಮಗಳು ಮತ್ತು ನಟನ ಅಭಿಮಾನಿಗಳ ಗಮನ ಸೆಳೆದರು. ಅತ್ತ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಸದ್ದು ಮಾಡಿದರೆ, ಇತ್ತ ಸ್ಟಾರ್ ನಟಿ ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರ ಹುಬ್ಬೇರಿಸಿದರು. ಇದೇ ಸಂದರ್ಭದಲ್ಲಿ ತ್ರಿಷಾ ಭಾವುಕರಾದ ದೃಶ್ಯವೊಂದು ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.