ಮೈ ಕಾಣುವಂತೆ ಬಟ್ಟೆ ಬೇಡ ಎಂದ ನಟ ಶಿವಾಜಿ; ನಮ್ಮ ದೇಹ ನಿಮ್ಮದಲ್ಲ: ನಟಿ ಅನಸೂಯ ಟಾಂಗ್ | Shivaji

ನಟಿ ಅನಸೂಯಾ, ಶಿವಾಜಿ, ಚಿನ್ಮಯಿ ಶ್ರೀಪಾದ
ನಟಿ ಅನಸೂಯಾ, ಶಿವಾಜಿ, ಚಿನ್ಮಯಿ ಶ್ರೀಪಾದ
Published on
Shivaji: ಸಿನಿಮಾ ರಂಗ ಅನ್ನುವುದು ಗ್ಲ್ಯಾಮರ್ ಲೋಕ. ನಟಿಯರ ಡ್ರೆಸ್​ ಬಗ್ಗೆ ಹಾಗಾಗ ವಿವಾದಗಳಾಗುತ್ತವೆ. ಮತ್ತು ಕೆಲವೊಮ್ಮೆ ಒಳ್ಳೆಯ ಮಾತುಗಳು ಕೇಳಿ ಬರುತ್ತವೆ. ಆದರೆ ಸೋಮವಾರ(ಡಿ. 22) ಹೈದರಾಬಾದ್​ನಲ್ಲಿ ದಂಡೋರ ಚಿತ್ರದ ಪ್ರೀ ರೀಲೀಸ್ ಇವೆಂಟ್​ನಲ್ಲಿ ತೆಲುಗಿನ ಹಿರಿಯ ನಟ ಶಿವಾಜಿ ಮಾಡಿದ ನಟಿಯರ ಬಟ್ಟೆಯ ಬಗೆಗಿನ ಕಮೆಂಟ್​ಗಳು ವಿವಾದದ ಕಿಡಿಯನ್ನು ಹೊತ್ತಿಸಿವೆ.
ದಂಡೋರ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಶಿವಾಜಿ ಮಾತನಾಡುತ್ತಾ, ಮೊದಲು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಶ್ರಾವಂತಿ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದ್ದು, ಅವರು ಸೀರೆ ತೊಟ್ಟಿದ್ದಾರೆ. ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದುವರೆದು ನಟಿಯರ ಬಟ್ಟೆ ಬಗ್ಗೆ ಮಾತನಾಡಿದ್ದು, ಮಹಿಳೆಯರ ಸೌಂದರ್ಯ ಸೀರೆಯಲ್ಲೇ ಇರೋದು. ದೇಹ ಕಾಣಿಸದಂತೆ ಪೂರ್ತಿ ಮುಚ್ಚುವ ಬಟ್ಟೆಗಳಲ್ಲಿದೆ. ಪೂರ್ತಿ ದೇಹ ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ ಎಂದು ಹೇಳಿದ್ದಾರೆ.
ಮುಂದುವರೆದು, ಇತ್ತೀಚೆಗೆ ತೆಲುಗಿನಲ್ಲಿ ಅತಿಹೆಚ್ಚು ಟ್ರೋಲ್ ಆದ ಶಬ್ದ(ಸಾಮಾನು ಪದ ಬಳಸಿ), ದೇಹದ ಭಾಗ ಕಾಣುವಂತೆ ಬಟ್ಟೆ ಧರಿಸಿದ್ರೆ ಅದರಲ್ಲಿ ಯಾವುದೇ ಮೌಲ್ಯವೇ ಇರೋದಿಲ್ಲ. ಜನರು ನೋಡಿ ನಗುತ್ತಾರೆ. ಗ್ಲಾಮರ್​ಗೆ ಗಡಿಗಳು ಇರಬೇಕು. ಚಿಕ್ಕ ಬಟ್ಟೆ ಧರಿಸಿ ದೇಹದ ಅಂಗಗಳನ್ನು ತೋರಿಸುವುದು ಸರಿಯಲ್ಲ. ಸಾವಿತ್ರಿ, ಸೌಂದರ್ಯ, ರಶ್ಮಿಕಾ ರೀತಿ ಆದರ್ಶವಾಗಿರಬೇಕೆಂದು ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆಗುತ್ತಿದೆ.

ನನ್ನ ದೇಹ ನಿಮ್ಮದಲ್ಲ ಎಂದ ನಟಿ ಅನಸೂಯ ಭಾರದ್ವಾಜ್

ನಟ ಶಿವಾಜಿ ನಟಿಯರ ಬಟ್ಟೆಗಳ ಬಗ್ಗೆ ಕಮೆಂಟ್ ಮಾಡುತ್ತಿದ್ದಂತೆ ತೆಲುಗಿನ ಖ್ಯಾತ ಆ್ಯಂಕರ್ ಮತ್ತು ನಟಿ ಅನಸೂಯ ಭಾರಧ್ವಾಜ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ, ಯಾರ ಹೆಸರನ್ನು ಉಲ್ಲೇಖಿಸದೇ, ‘ನನ್ನ ದೇಹ ನಿಮ್ಮದಲ್ಲ’ ಎಂದು ಹಾಕಿದ್ದು ಚರ್ಚೆ ಆಗುತ್ತಿದೆ. ಜೊತೆಗೆ ಲೈವ್ ಬಂದು ಈ ಬಗ್ಗೆ ಮಾತನಾಡಿದ್ದಾರೆ.

ಭಾರತೀಯ ಗಂಡಸರು ಧೋತಿ ತೋಡಿ ಎಂದ ಚಿನ್ಮಯಿ ಶ್ರೀಪಾದ

ನಟ ಶಿವಾಜಿ ಮಾಡಿದ ಕಮೆಂಟ್​ ಎಕ್ಸ್​ನಲ್ಲಿ ತೀಕ್ಷ್ಣ್ಯ ಕಮೆಂಟ್ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ, ಸಿನೆಮಾ ಪ್ರಚಾರ ಸಮಾರಂಭದಲ್ಲಿ ಶಿವಾಜಿಯವರು ಮಾತನಾಡಿದ ಮಾತುಗಳು ತುಂಬಾ ಕೆಟ್ಟವು. ‘ದಾರಿದ್ರಪು ಮುಂಡ' ‘ಸಾಮಾನ್ಲು’ ಎಂಬಂತಹ ಅವಾಚ್ಯ ಶಬ್ದಗಳನ್ನು ಬಳಸಿದ್ದು, ಯಾವುದೇ ರೀತಿಯಲ್ಲಿ ಸ್ವೀಕಾರಾರ್ಹವಲ್ಲ.
ಗಂಡಸರು ತಮಗೆ ಇಷ್ಟಪಡುವ ಬಟ್ಟೆಗಳನ್ನು ಧರಿಸಬಹುದು. ಆದರೆ ಮಹಿಳೆಯರ ಉಡುಪುಗಳ ಮೇಲೇಕೆ ನಿರ್ಬಂಧ. ಮದುವೆಯಾದ ಗಂಡಸರು ನಿಜವಾಗಿಯೂ ಭಾರತೀಯ ಸಂಸ್ಕೃತಿಯನ್ನು ಗೌರವಿಸಿದರೆ, ಧೋತಿಯನ್ನು ಧರಿಸಬೇಕು, ಹಣೆಯ ಮೇಲೆ ಕುಂಕುಮ ಇಡಬೇಕು. ಸ್ಯಾಂಡಲ್ ಚಪ್ಪಲಿಗಳನ್ನು ಧರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net