ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್!...ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಟಿ ಕೋಯಲ್​ ಮಲ್ಲಿಕ್..Koel Mullick

 Koel Mallick resigns from Rajya Sabha
Koel Mallick resigns from Rajya Sabha
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೊಯಲ್​​ ಮಲ್ಲಿಕ್​ .
  • ಟಿಎಂಸಿ ಸಂಸದ ಮದನ್​ ಮಿತ್ರ ಹೊರನಡೆದ ಒಂದು ದಿನದಲ್ಲೇ ಈ ಬೆಳವಣಿಗೆ.
  • ರಾಜ್ಯಸಭೆ ಅಧ್ಯಕ್ಷರಾದ ಸಿಪಿ ರಾಧಾ ಕೃಷ್ಣನ್​ ಅವರಿಗೆ ರಾಜೀನಾಮೆ ಪತ್ರ ಬರೆದ ಕೋಯಲ್ ಮಲ್ಲಿಕ್.
 Koel Mallick resigns from Rajya Sabha: ಟಿ ಮತ್ತು ರಾಜಕಾರಿಣಿ ಕೊಯಲ್​​ ಮಲ್ಲಿಕ್​  ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಬಂಗಾಳದ ಮಾಜಿ  ಸಿಎಂ ಮಮತಾ ಬ್ಯಾನರ್ಜಿ ಟಿಎಂಸಿಯವರ ಸಂಸದೀಯ ಬಲಕ್ಕೆ ಮತ್ತೊಂದು ಹಿನ್ನಡೆಯಾಗಿದೆ. 
ಬಂಗಾಳದ ಸಿನಿಮಾ ರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರುವ ಕೋಯಲ್​ ಅವರು ಕಳೆದ ನಾಲ್ಕು ತಿಂಗಳ ಹಿಂದಷ್ಟೆ ರಾಜ್ಯಸಭೆ ಟಿಕೆಟ್​ ಪಡೆದಿದ್ದರು. ಸದ್ಯ ರಾಜ್ಯಸಭಾ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಟಿಎಂಸಿಯಿಂದ ಹೊರನಡೆದ ನಾಲ್ಕನೇ ಸಂಸದೆಯಾಗಿದ್ದಾರೆ. 

ಸಿಪಿ ರಾಧಾ ಕೃಷ್ಣನ್​ರಿಗೆ ಪತ್ರ

ರುಕ್ಮಿಣಿ ಮಲ್ಲಿಕ್​​​​​​ (ಕೋಯಲ್​ ಮಲ್ಲಿಕ್) ಅವರು ರಾಜ್ಯಸಭೆ ಅಧ್ಯಕ್ಷರಾದ ಸಿಪಿ ರಾಧಾ ಕೃಷ್ಣನ್​ ಅವರಿಗೆ ರಾಜೀನಾಮೆ  ಪತ್ರ ಬರೆದಿದ್ದು, ಅದರಲ್ಲಿ ಹೀಗೆ ಉಲ್ಲೇಖಿಸಲಾಗಿದೆ. 'ನಾನು ರಾಜ್ಯಸಭಾ ಸದಸ್ಯತ್ವಕ್ಕೆ ತಕ್ಷಣದಿಂದ  ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. 

4 ತಿಂಗಳ ಹಿಂದಷ್ಟೇ ಸಂಸದೆಯಾಗಿದ್ದ ಕೋಯಲ್

ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್​ ರಾಜ್ಯಸಭೆಗೆ  ಕೋಯಲ್​ ಅಂದರೆ ರುಕ್ಮಿಣಿ ಮಲ್ಲಿಕ್​ ಅವರನ್ನು  ನಾಮನಿರ್ದೇಶನ ಮಾಡಲಾಗಿತ್ತು.  ಪ್ರಮಾಣ ವಚನ ಸ್ವೀಕರಿಸಿದ ನಂತರ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಹೊಸ ಪ್ರಯಾಣ ಆರಂಭ ಎಂದು ಮಮತಾ ಬ್ಯಾನರ್ಜಿಯವರಿಗೆ ಧನ್ಯವಾದ ಸಲ್ಲಿಸಿ ಪೋಸ್ಟರ್​ ಹಂಚಿಕೊಂಡಿದ್ದರು. ಜೊತೆಗೆ ಇವರು ರಂಜಿತ್​ ಮಲ್ಲಿಕ್​​ ಪುತ್ರಿ ಎಂಬ ಕಾರಣಕ್ಕೆ  ಗಮನ ಸೆಳೆದಿದ್ದರು.  
40ಕ್ಕೂ ಹೆಚ್ಚು ಸಿನಿಮಾದಲ್ಲಿ ಕೋಯಲ್​ ನಟಿಸಿದ್ದಾರೆ. ಆದರೆ, ಕಡಿಮೆ ಅವಧಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು, ದಿಢೀರನೆ ರಾಜೀನಾಮೆ ಕೊಟ್ಟಿದ್ದಾದರೂ ಯಾಕೆ ಎನ್ನುವ ಬಗ್ಗೆ  ಯಾವುದೇ ರೀತಿಯಲ್ಲಿ ಮಾಹಿತಿ ಕೊಟ್ಟಿಲ್ಲ.  ಈ ಮೊದಲು ಟಿಎಂಸಿ ರಾಜ್ಯಸಭಾ ಸಂಸದರ ಬಲವು 13 ಇತ್ತು. ಕೋಯಲ್​ ರಾಜೀನಾಮೆ ಹಾಗೂ ಇನ್ನೂ ಕೆಲವರಿಂದಾಗಿ ಈ ಸಂಖ್ಯೆ 9ಕ್ಕೆ ಇಳಿಕೆಯಾಗಿದೆ. 

ಟಿಎಂಸಿಯಿಂದ ಹೊರನಡೆದ ಮದನ್​ ಮಿತ್ರ 

ಇತ್ತೀಚೆಗೆ ಸುಖೇಂದು ಶೇಖರ್ ರಾಯ್, ಸುಸ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರ ರಾಜೀನಾಮೆಯ ನಂತರ ಕೊಯೆಲ್ ಅವರ ಈ ನಡೆ ಬಂದಿದೆ. ನಂತರ ಈ ಮೂವರು ಬಿಜೆಪಿ ಸೇರಿದರು. ಮದನ್​ ಮಿತ್ರ ಅವರು ರಾಜೀನಾಮೆ ಕೊಟ್ಟು ಮಮತಾ ಬ್ಯಾನರ್ಜಿಯವರನ್ನು ತೀವ್ರ ಟೀಕಿಸಿ ಹೊರನಡೆದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ ಭಾರಿ ಹಿನ್ನಡೆಯನ್ನು ಸಾಧಿಸಿದ ನಂತರ, ಪಕ್ಷದಲ್ಲಿ ಆಂತರಿಕ ಮುಗ್ಗಟ್ಟು ಜೋರಾಗಿದೆ. ಪಕ್ಷದಿಂದ ಶಾಸಕಿ ಋತಾಬ್ರತಾಬ್ಯಾನರ್ಜಿ ಅವರನ್ನು ಹೊರಹಾಕಿದ ದಿನದಿಂದ ಪಕ್ಷದ ಬಂಡಾಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಟಿಎಂಸಿಯಲ್ಲಿದ್ದ 80 ಶಾಸಕರಲ್ಲಿ 60 ಮಂದಿ ಋತಾಬ್ರತಾಬ್ಯಾನರ್ಜಿ ಬಣಕ್ಕೆ ಸೇರಿದ್ದಾರೆ. ಅಲ್ಲದೇ ಮಮತಾ ಬ್ಯಾನರ್ಜಿ ಅವರ ಸೋದರಳಿಯಾ ಅಭಿಷೇಕ್​ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net