ಕೇರಳದಲ್ಲಿ 350 KG ತೂಕದ ದೈತ್ಯ ಶಾರ್ಕ್ ಸೆರೆ: ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ! ಇದನ್ನು ತಿಂತಾರಾ? Achini shark

ಕೇರಳದಲ್ಲಿ 350 KG ತೂಕದ ದೈತ್ಯ ಅಚಿನಿ ಶಾರ್ಕ್ ( Achini shark ) ಸೆರೆ
ಕೇರಳದಲ್ಲಿ 350 KG ತೂಕದ ದೈತ್ಯ ಅಚಿನಿ ಶಾರ್ಕ್ ( Achini shark ) ಸೆರೆ
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದ ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮಿಸಿದ ಬೃಹತ್ ಅಚಿನಿ ಶಾರ್ಕ್
  • ಈ ವರ್ಷ ಸುಮಾರು ಹತ್ತು ಬೃಹತ್ ಶಾರ್ಕ್‌ಗಳು ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮನ
  • ಶಾರ್ಕ್​ ಮೀನುಗಳ ರೆಕ್ಕೆಗಳನ್ನು ಒಣಗಿಸಿ ಔಷಧಿ ತಯಾರಿಸಲು ಬಳಸಲಾಗುತ್ತದೆ
ಕೊಚ್ಚಿ: ಕೇರಳದ ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮಿಸಿದ ಬೃಹತ್ ಅಚಿನಿ ಶಾರ್ಕ್ ( Achini shark ), ಹರಾಜಿನಲ್ಲಿ 83 ಸಾವಿರ ರೂ. ಮಾರಾಟವಾಗಿದೆ. ಈ ಶಾರ್ಕ್​ ಸುಮಾರು 350 ಕೆಜಿ ತೂಕವಿದೆ. ಈ ವರ್ಷ ಸುಮಾರು ಹತ್ತು ಬೃಹತ್ ಶಾರ್ಕ್‌ಗಳು ವಿಳಿಂಜಂ ಮೀನುಗಾರಿಕಾ ಬಂದರಿಗೆ ಆಗಮಿಸಿವೆ ಎಂದು ವರದಿಯಾಗಿದೆ.
ಬಂದರಿಗೆ ಆಗಮಿಸಿದ ಶಾರ್ಕ್​ ಮೀನನ್ನು ಮೀನುಗಾರರು ದಡಕ್ಕೆ ತರಲು ತುಂಬಾ ಶ್ರಮಿಸಿದರು. ಕೊನೆಗೆ ಹೇಗೋ ಕಷ್ಟಪಟ್ಟು ಭಾರಿ ಗಾತ್ರದ ಮೀನನ್ನು ದಡಕ್ಕೆ ತರುವಲ್ಲಿ ಯಶಸ್ವಿ ಸಹ ಆದರು. ಈ ವೇಳೆ ದೈತ್ಯ ಮೀನನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು ಮತ್ತು ತಮ್ಮ ಮೊಬೈಲ್​ಗಳನ್ನು ಜೇಬಿಂದ ತೆಗೆದು, ಫೋಟೋಗಳನ್ನು ಸೆರೆಹಿಡಿದುಕೊಂಡರು.
ಅಂದಹಾಗೆ, ವಿದೇಶಿ ಮಾರುಕಟ್ಟೆಗಳಲ್ಲಿ ಶಾರ್ಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೇರಳದ ತಿರುವನಂತಪುರದಲ್ಲಿ ಅವುಗಳನ್ನು ಆಹಾರಕ್ಕಾಗಿ ಖರೀದಿ ಮಾಡದಿದ್ದರೂ, ಕೇರಳದ ಉತ್ತರ ಜಿಲ್ಲೆಗಳ ಜನರು ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆಂದು ವರದಿಯಾಗಿದೆ.
ಇನ್ನೂ ಶಾರ್ಕ್​ ಮೀನುಗಳ ರೆಕ್ಕೆಗಳನ್ನು ಒಣಗಿಸಿ ಔಷಧಿ ತಯಾರಿಸಲು ಬಳಸಲಾಗುತ್ತದೆ. ಮೀನುಗಾರರು ಅವುಗಳ ತುಪ್ಪವನ್ನು ಮೀನಿನ ಎಣ್ಣೆ ಮಾತ್ರೆಗಳನ್ನು ತಯಾರಿಸಲು ಮತ್ತು ಅವುಗಳ ಹಲ್ಲುಗಳನ್ನು ಅಲಂಕಾರಿಕ ಹಾರಗಳನ್ನು ತಯಾರಿಸಲು ಬಳಸುತ್ತಾರೆ ಎಂದು ಹೇಳುತ್ತಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net