ಆರ್‌ಬಿ ಚೌಧರಿ ಅವರು ತಮ್ಮ ಸಂಸ್ಥೆಯಡಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾಗಿದ್ದರು. ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ನಡೆಸಿದ ವೃತ್ತಿ ಜೀವನದಲ್ಲಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕೆಎಸ್ ರವಿಕುಮಾರ್, ವಿಕ್ರಮನ್, ಎಸ್ ಎಳಿಲ್, ರಾಜಕುಮಾರನ್, ಶಶಿ ಮತ್ತು ರವಿ ಮಾರಿಯಾ ಸೇರಿದಂತೆ 34 ಕ್ಕೂ ಹೆಚ್ಚು ನಿರ್ದೇಶಕರನ್ನು ಪರಿಚಯಿಸುವ ಖ್ಯಾತಿ ಗಳಿಸಿದ್ದಾರೆ.