ತನಿಖೆಯಲ್ಲಿ ಮೃತನನ್ನು ಪುಟ್ಟರಾಜು ಎಂದು ಪೊಲೀಸರು ಗುರುತಿಸಿದ್ದು, ಆತನ ಕೊನೆಯ ಚಲನವಲನಗಳನ್ನು ಪತ್ತೆಹಚ್ಚಿದ್ದರು. ಈ ವೇಳೆ ಕೊನೆಯಲ್ಲಿ ಆರೋಪಿ ಶಫಿ ಜೊತೆ ತೆರಳಿದ್ದು ಗೊತ್ತಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿ ಶಫಿ ಅರಸೀಕೆರೆಯ ಲಾಡ್ಜ್ನಲ್ಲಿ ತನ್ನ ಎರಡನೇ ಹೆಂಡತಿಯನ್ನು ಭೇಟಿಯಾಗಿ 60 ಸಾವಿರ ಹಣ ಕೊಟ್ಟು, ಹೊಸ ಟಿವಿ ಕೊಡಿಸಿದ್ದನ್ನು ಪತ್ತೆ ಹೆಚ್ಚಿದ್ದಾರೆ. ನಂತರ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ (ಏಜೆನ್ಸೀಸ್).