ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನ ಎಲ್‌ಒಸಿ ಬಳಿ ಆಕಸ್ಮಿಕ ಸ್ಫೋಟ : ಇಬ್ಬರು ಸೈನಿಕರು ಬಲಿ: ತನಿಖೆಗೆ ಆದೇಶ | soldiers killed
ಸಾಂದರ್ಭಿಕ ಚಿತ್ರ
Published on:
Copied
Follow Us
ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಆಕಸ್ಮಿಕ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಬಲಿಯಾಗಿದ್ದಾರೆ(soldiers killed) ಎಂದು ಬುಧವಾರ(ಜೂ. 10) ವರದಿಯಾಗಿದೆ.
ಮಂಗಳವಾರ ಸಂಜೆ ಎಲ್‌ಒಸಿ ಬಳಿಯ ಉರಿಯ ಕಮಲ್‌ಕೋಟ್ ಪ್ರದೇಶದ ಶಿಬಿರದಲ್ಲಿ ಘಟನೆ ನಡೆದಿದೆ. ಗಾಯಗೊಂಡ ಇಬ್ಬರು ಸೈನಿಕರನ್ನು ತಕ್ಷಣ ಶ್ರೀನಗರದ ಬಾದಾಮಿಬಾಗ್ ಕಂಟೋನ್ಮೆಂಟ್‌ನಲ್ಲಿರುವ ಸೇನಾ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಮೃತ ಸೈನಿಕರನ್ನು ಮಹಾರಾಷ್ಟ್ರದ ಐರೋಲಿಯ ಚವಾಣ್ ವಿಕ್ರಮ್ ಬಾಲಕೃಷ್ಣ, ಶಹಪುರದ ಅರ್ಜುನ್ ಜಾಧವ್ ರಾಜೀಂದ್ರ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಸೇನೆ ತನಿಖೆಗೆ ಆದೇಶಿಸಿದೆ. ಸ್ಫೋಟಕ್ಕೆ ನಿಖರವಾಗಿ ಕಾರಣವೇನೆಂದು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ (ಏಜೆನ್ಸೀಸ್).