ಭಗವಾನ್ ಹನುಮಂತನ ಬಗ್ಗೆ ವಿವಾದಾತ್ಮಕ ಹೇಳಿಕೆ: ನಿರ್ದೇಶಕ ಎಸ್​.ಎಸ್​.ರಾಜಮೌಳಿ ವಿರುದ್ಧ FIR ದಾಖಲು!

S.S. Rajamouli!
S.S. Rajamouli!
Published on
ತೆಲಂಗಾಣ: ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ನಡೆದ ಅದ್ಧೂರಿ ವೇದಿಕೆಯಲ್ಲಿ ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ 'ವಾರಣಾಸಿ' ರಿವೀಲ್​ ಆಯಿತು. ಈ ವೇಳೆ ವೇದಿಕೆ ಮೇಲೆ ಹೇಳಿದ ಕೆಲ ಹೇಳಿಕೆಗಳು ನಿರ್ದೇಶಕ ರಾಜಮೌಳಿ ಅವರನ್ನು ವಿವಾದಕ್ಕೆ ಸಿಲುಕಿಸಿವೆ.
ದೇವರ ಬಗ್ಗೆ ನಾಸ್ತಿಕತೆ ಮತ್ತು ಭಗವಾನ್ ಹನುಮಂತನ ಬಗ್ಗೆ ಹೇಳಿದ ಹೇಳಿಕೆ ವಿವಾದತ್ಮಾಕ ತಿರುವು ಪಡೆದಿದ್ದು, ಇದೀಗ ರಾಜಮೌಳಿ ವಿರುದ್ಧ ಹೈದರಾಬಾದ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್(FIR)​ ದಾಖಲಾಗಿದೆ ಎಂದು ಬುಧವಾರ ವರದಿಯಾಗಿದೆ.

ನನಗೆ ದೇವರ ಮೇಲೆ ನಂಬಿಕೆ ಇಲ್ಲ

"ನನಗೆ ದೇವರುಗಳಲ್ಲಿ ಹೆಚ್ಚು ನಂಬಿಕೆ ಇಲ್ಲ. ಇದು ನನಗೆ ಭಾವನಾತ್ಮಕ ಕ್ಷಣ. ನಾನು ದೇವರನ್ನು ನಂಬುವುದಿಲ್ಲ. ನನ್ನ ತಂದೆ ಬಂದು ಹನುಮಂತ ನನಗಾಗಿ ಕೆಲಸಗಳನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.ನಾನು ಅವರ ಮೇಲೆ ಧ್ವನಿ ಎತ್ತಿದೆ, 'ಅವನು ನನ್ನನ್ನು ಹೀಗೆ ನಡೆಸುತ್ತಾನೆಯೇ?' ಎಂದು ಕೇಳಿದೆ. ನನ್ನ ಹೆಂಡತಿ ಹನುಮನ ದೊಡ್ಡ ಅಭಿಮಾನಿ... ನಾನು ಅವಳ ಮೇಲೂ ನನ್ನ ಕೋಪವನ್ನು ವ್ಯಕ್ತಪಡಿಸಿದೆ. 'ಅವನು ಕೆಲಸಗಳನ್ನು ಹೀಗೆ ಮಾಡುತ್ತಾನೆಯೇ?' ಎಂದು ವೇದಿಕೆ ಮೇಲೆ ರಾಜಮೌಳಿ ಹೇಳಿದ್ದರು.

ಹಿಂದುಪರ ಸಂಘಟನೆ ದೂರು

ರಾಷ್ಟ್ರೀಯ ವಾನರ ಸೇನೆಯ ಸದಸ್ಯರು ಹೈದರಾಬಾದ್‌ನ ಸರೂರ್‌ನಗರ ಪೊಲೀಸ್ ಠಾಣೆಯಲ್ಲಿ ರಾಜಮೌಳಿ ವಿರುದ್ಧ ಅಧಿಕೃತ ದೂರು ದಾಖಲಿದ್ದಾರೆ. ಅವರ ಹೇಳಿಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net