

ಪ್ರಮುಖ ಮುಖ್ಯಾಂಶಗಳು
ಆಗಸ್ಟ್ 20ರಂದು ಖರ್ಗೆ ಮತ್ತು ರಾಹುಲ್ ಬರೆದ ಪತ್ರದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾತಿ ಗಣತಿ ವಿಚಾರದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಕೇವಲ ‘ಕಣ್ಣೊರೆಸುವ ತಂತ್ರ’ ಎಂದು ಟೀಕಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕತ್ವ, ಪ್ರಧಾನಿ ಮೋದಿಗೆ ಬರೆಯುತ್ತಿರುವ ಮೂರನೇ ಪತ್ರ ಇದಾಗಿದ್ದು, ಈ ಹಿಂದಿನ ಪತ್ರಗಳಿಗೆ ಯಾವುದೇ ಉತ್ತರ ಬಂದಿಲ್ಲವೆಂದು ರಮೇಶ್ ಹೇಳಿದ್ದಾರೆ.