ಪ್ರಸಕ್ತ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಅತ್ಯಧಿಕ ರನ್ ಬೇಟೆಯಾಡಿರುವ ವೈಭವ್ ಸೂರ್ಯವಂಶಿ, ಈ ಆವೃತ್ತಿಯಲ್ಲಿ ಆಡಿರುವ ಕೇವಲ 12 ಪಂದ್ಯಗಳಲ್ಲಿ ಬರೋಬ್ಬರಿ 43 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ. ಈ ಹಿಂದೆ 2024ರ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 16 ಪಂದ್ಯಗಳನ್ನು ಆಡಿದ್ದ ಅಭಿಷೇಕ್ ಶರ್ಮಾ 42 ಸಿಕ್ಸರ್ ಸಿಡಿಸಿದ್ದು ಇದುವರೆಗಿನ ಭಾರತೀಯ ಆಟಗಾರನ ಅತ್ಯುತ್ತಮ ದಾಖಲೆಯಾಗಿತ್ತು. ಆದರೆ, ವೈಭವ್ ಕೇವಲ 12 ಪಂದ್ಯಗಳಲ್ಲೇ ಆ ದಾಖಲೆಯನ್ನು ಅಳಿಸಿ ಹಾಕಿ ಹೊಸ ರಾಜಕುಮಾರನಾಗಿ ಹೊರಹೊಮ್ಮಿದ್ದಾರೆ.