ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಭಿಷೇಕ್ ಬ್ಯಾನರ್ಜಿ, ಅವರು ಏನು ಬೇಕಾದರೂ ಮಾಡಲಿ, ನನ್ನ ಮನೆಗೇ ನೋಟಿಸ್ ನೀಡಲಿ ಅಥವಾ ಅದನ್ನು ಧ್ವಂಸಗೊಳಿಸಲಿ. ನಾನು ಯಾವುದಕ್ಕೂ ತಲೆಬಾಗುವುದಿಲ್ಲ. ಏನೇ ಆದರೂ ಬಿಜೆಪಿಯ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಹರೀಶ್ ಮುಖರ್ಜಿ ರಸ್ತೆಯಲ್ಲಿರುವ ಅಭಿಷೇಕ್ರ ಶಾಂತಿನಿಕೇತನ ನಿವಾಸ ಸೇರಿದಂತೆ 17 ಕಟ್ಟಡಗಳಲ್ಲಿ ಅನಧಿಕೃತ ನಿರ್ಮಾಣ ನಡೆದಿದೆ ಎಂದು ಆರೋಪಿಸಿ, 7 ದಿನಗಳ ಒಳಗೆ ಅವುಗಳನ್ನು ತೆರವುಗೊಳಿಸುವಂತೆ ಕೋಲ್ಕತ್ತಾ ಪಾಲಿಕೆ ಈಗಾಗಲೇ ನೋಟಿಸ್ ನೀಡಿದೆ.