ಸುವೇಂದು ಪ್ರಮಾಣ ವಚನ ಬೆನ್ನಲ್ಲೇ ಅಭಿಷೇಕ್ ಬ್ಯಾನರ್ಜಿ ಕಿರಿಕ್​; ನಮಗೆ ಇವಿಎಂ ಮೇಲೆ ನಂಬಿಕೆಯಿಲ್ಲ, ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿ ಎಂದ ಟಿಎಮ್​ಸಿ ಸಂಸದ! Abhishek Banerjee on Bengal Election

30 ಲಕ್ಷ ಮತದಾರರಿಗೆ ಓಟ್​ ಮಾಡಲು ಅವಕಾಶವೇ ನೀಡಿಲ್ಲ : ಅಭಿಷೇಕ್​ ಬ್ಯಾನರ್ಜಿ
30 ಲಕ್ಷ ಮತದಾರರಿಗೆ ಓಟ್​ ಮಾಡಲು ಅವಕಾಶವೇ ನೀಡಿಲ್ಲ : ಅಭಿಷೇಕ್​ ಬ್ಯಾನರ್ಜಿ
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ
  • 30 ಲಕ್ಷ ಮತದಾರರಿಗೆ ಓಟ್​ ಮಾಡಲು ಅವಕಾಶವೇ ನೀಡಿಲ್ಲ : ಅಭಿಷೇಕ್​ ಬ್ಯಾನರ್ಜಿ
  • ನಮಗೆ ಇವಿಎಮ್​ ಮೇಲೆ ನಂಬಿಕೆಯಿಲ್ಲ; ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ: ಟಿಎಂಸಿ ಸಂಸದ
ಪಶ್ಚಿಮ ಬಂಗಾಳ: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿದ ಭಾರತೀಯ ಜನತಾ ಪಕ್ಷದ ಸುವೇಂದು ಅಧಿಕಾರಿ ಶನಿವಾರ (ಮೇ.9) ರಂದು ರಾಜ್ಯದ ಮುಖ್ಯಮಂತ್ರುಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆದರೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಟಿಎಮ್​ಸಿ ಸಂಸದ ಅಭಿಷೇಕ್​ ಬ್ಯಾನರ್ಜಿ (Abhishek Banerjee on Bengal Election) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

30 ಲಕ್ಷ ಜನರಿಗೆ ಮತದಾನ ಮಾಡಲು ಬಿಡಲೇ ಇಲ್ಲ!

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಕುರಿತು ತಮ್ಮ ಎಕ್ಸ್​ (ಟ್ವಿಟರ್​) ನಲ್ಲಿ ಬೆರೆದುಕೊಂಡಿರುವ ಅಭಿಷೇಕ್​ ಬ್ಯಾನರ್ಜಿ, ಈ ಭಾರಿಯ ಚುನಾವಣೆ ನಮಗೆ ಕಷ್ಟಕರವಾಗಿತ್ತು, ಸುಮಾರು 30 ಲಕ್ಷ ಜನರಿಗೆ ಮತದಾನ ಮಾಡಲು ಅವಕಾಶ ನೀಡದೆ ಚುನಾವಣೆಯನ್ನು ನಡೆಸಲಾಯಿತು.
ಈ ಚುನಾವಣೆ ಮುಗಿಯುವವರೆಗೆ ಅಧಿಕಾರಿವರ್ಗ ಸಂಪೂರ್ಣವಾಗಿ ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದು, ಚುನಾವಣಾ ಆಯೋಗ ನ್ಯಾಯಯುತ ಚುನಾವಣೆ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಚುನಾವಣಾ ನಂತರ ಹಿಂಸಾಚಾರಕ್ಕೆ ಕಳವಳ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಭಾರತೀಯ ಜನತಾ ಪಕ್ಷದವರು ಟಿಎಮ್​ಸಿ ಪಕ್ಷದ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳನ್ನು ಧ್ವಂಸಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಹಿಸಾಂಚಾರ ಹೆಚ್ಚಿದೆ ಎಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಚುನಾವಣಾ ನಂತರದ ಹಿಂಸಾಚಾರವು ಆ ಪಕ್ಷದ ಸೈದ್ಧಾಂತಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

ನಮಗೆ ಇವಿಎಮ್​(EVM) ಮೇಲೆ ನಂಬಿಕೆಯಿಲ್ಲ!

ನಮಗೆ ಈ ಭಾರಿಯ ಬಂಗಾಳ ಚುನಾವಣೆಯಲ್ಲಿ ಬಳಕೆಯಾಗಿರುವ ಇವಿಎಮ್ ​(EVM) ಹಾಗೂ ವಿವಿಪ್ಯಾಟ್​ (VVPAT) ಮೇಲೆ ಸಹ ನಂಬಲು ಕಷ್ಟವಾಗುತ್ತಿದೆ. ಆದ್ದರಿಂದ ಮತ ಎಣಿಕೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆಮಾಡಿದರೆ, ಸಾರ್ವಜನಿಕರಿಗೆ ಸತ್ಯಾತ್ಯತೆ ತಿಳಿಯುತ್ತದೆ ಎನ್ನುವುದು ಬ್ಯಾನರ್ಜಿ ಅವರ ಅಭಿಪ್ರಾಯವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net