2019 ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಫೆ. 14 ರಂದು ಆರ್ಡಿಎಕ್ಸ್ ತುಂಬಿದ್ದ ವಾಹನವೊಂದು ಸೈನಿಕರು ಸಾಗುತ್ತಿದ್ದ ವ್ಯಾನ್ಗೆ ಡಿಕ್ಕಿ ಹೊಡೆದು, ಸುಮಾರು 40 ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದರು. ಈ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಕೈವಾಡವಿದೆ ಎಂದು ತಿಳಿದಿದ್ದ ಭಾರತ, ಭಯೋತ್ಪಾದಕ ನೆಲೆಗಳನ್ನು ಆಯ್ಕೆ ಮಾಡಿಕೊಂಡು ಏರ್ಸ್ಟ್ರೈಕ್ ನಡೆಸಲಾಗಿತ್ತು.