ಮೊಬೈಲ್​ ಡೇಟಾ, ಲಗೇಜ್​... ಸಂಸತ್ತಿನಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಎಎಪಿ ಸಂಸದ; ಪಿತೃತ್ವ ರಜೆಗೆ ಆಗ್ರಹ | Paternity Leave

ಸಂಸತ್ತಿನಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ
ಸಂಸತ್ತಿನಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್ತಿನಲ್ಲಿ ಮತ್ತೊಂದು ಉತ್ತಮ ವಿಚಾರ ಪ್ರಸ್ತಾಪಿಸಿದ ಎಎಪಿ ಸಂಸದ
  • ಪಿತೃತ್ವ ರಜೆಯನ್ನು ಕಾನೂನು ಹಕ್ಕಾಗಿ ಮಾಡಬೇಕು ಎಂದು ಆಗ್ರಹ
  • ರಾಘವ್ ಚಡ್ಡಾ ಮಾತಿಗೆ ಪತ್ನಿ ಪರಿಣಿತಿ ಚೋಪ್ರಾ ಸಾಥ್​
ನವದೆಹಲಿ: ಸದಾ ಸಂಸತ್ತಿನ ಅಧಿವೇಶನದಲ್ಲಿ ಒಂದಲ್ಲ, ಒಂದು ಬಹುಮುಖ್ಯ ಹಾಗೂ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸುವ ಎಎಪಿ ಪಕ್ಷದ ರಾಜ್ಯಸಭಾ ಸಂಸದ ರಾಘವ್​ ಚಡ್ಡಾ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಭಾರೀ ಚರ್ಚೆಗೆ ಗ್ರಾಸವಾಗುತ್ತಾರೆ. ಅದು ಪಾಸಿಟಿವ್​ ಆಗಿ ಎಂಬುದು ಇಲ್ಲಿ ಗಮನಾರ್ಹ. ಇದೀಗ ಮತ್ತೊಂದು ವಿಚಾರವನ್ನು ಮುನ್ನೆಲೆಗೆ ತಂದಿರುವ ಚಡ್ಡಾ, ತಾಯಂದಿರಿಗೆ ಮಾತ್ರವಲ್ಲ, ತಂದೆಗೂ ಪಿತೃತ್ವ ರಜೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ರಾಘವ್​ ಚಡ್ಡಾ, ಹೆರಿಗೆಯ ನಂತರ ಆರೈಕೆ ಮಾಡುವ ಜವಾಬ್ದಾರಿಗಳು ಕೇವಲ ತಾಯಂದಿರ ಮೇಲೆ ಮಾತ್ರ ಬೀಳಬಾರದು. ಮಗು ಜನಿಸಿದಾಗ, ಇಬ್ಬರೂ ಪೋಷಕರನ್ನು ಅಭಿನಂದಿಸಲಾಗುತ್ತದೆ. ಆದರೆ, ಅದೇ ಆರೈಕೆಯ ಜವಾಬ್ದಾರಿ ತಾಯಿಗೆ ಮೀಸಲಿಡಲಾಗಿದೆ ಎಂದರು.
ಒಬ್ಬ ತಂದೆ ಆದವನು ತನ್ನ ನವಜಾತ ಶಿಶುವನ್ನು ನೋಡಿಕೊಳ್ಳುವುದು ಮತ್ತು ತನ್ನ ಉದ್ಯೋಗವನ್ನು ಉಳಿಸಿಕೊಳ್ಳುವುದರ ನಡುವೆ ಆಯ್ಕೆ ಮಾಡುವಂತೆ ಇರಬಾರದು. ಅದೇ ರೀತಿ, ತಾಯಿ ಆದವರು ತನ್ನ ಸಂಗಾತಿಯ ಇರುವಿಕೆಯ ಜೊತೆಗೆ ಹೆರಿಗೆ ಮತ್ತು ಚೇತರಿಕೆಯನ್ನು ಕಾಣಬೇಕು ಎಂದು ಒತ್ತಿ ಹೇಳಿದರು.
ಆರೈಕೆ ತಂದೆ-ತಾಯಿ ಇಬ್ಬರಿಗೂ ಸೇರಿದ ಹಂಚಿಕೆಯ ಜವಾಬ್ದಾರಿ. ನಮ್ಮ ಕಾನೂನುಗಳು ಅದನ್ನು ಪ್ರತಿಬಿಂಬಿಸಬೇಕು ಎಂದರು. ಸದ್ಯ ಈ ವಿಷಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಹಲವರು ಚಡ್ಡಾ ಅವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ. ವಿಶೇಷವಾಗಿ, ರಾಘವ್​ ಪತ್ನಿ, ನಟಿ ಪರಿಣಿತಿ ಚೋಪ್ರಾ ಅವರು ತಮ್ಮ ಪತಿಯ ಮಾತನ್ನು ಮೆಚ್ಚಿಕೊಂಡಿದ್ದಾರೆ. ನನಗೆ ಗೊತ್ತಿದೆ, ನಿಮಗೂ ಅದು ಎಷ್ಟು ಮುಖ್ಯವೆಂದು ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net