ಸಾಂತಾಕ್ಲಾಸ್ ಧರಿಸಿ ಪೊಲೀಸ್ ಠಾಣೆಗೆ ಬಂದ ಆಪ್ ನಾಯಕ ಸೌರಭ್ ಭಾರದ್ವಾಜ್: ದೂರು ನೀಡಿದ್ದು ಯಾರ ವಿರುದ್ಧ? | Saurabh Bharadwaj
ಆಪ್ ನಾಯಕ ಸೌರಭ್ ಭಾರದ್ವಾಜ್
Published on:
Copied
Follow Us
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಕ್ರಿಸ್‌ಮಸ್ ಆಚರಣೆ ಗುರಿಯಾಗಿಸಿ ಬಲಪಂಥಿಯ ಸಂಘಟನೆಗಳಿಂದ ದಾಂಧಲೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಅಂಥ ಸಂಘಟನೆಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳುವಂತೆ ಸಾಂತಾಕ್ಲಾಸ್ನಲ್ಲಿ ಪೊಲೀಸ್ ಠಾಣೆಗೆ ಆಗಮಿಸಿ ಆಪ್ ನಾಯಕ ಸೌರಭ್ ಭಾರದ್ವಾಜ್(Saurabh Bharadwaj) ದೂರು ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ಕ್ರಿಸ್‌ಮಸ್ ಆಚರಿಸುವವರು ಹಿಂಸಾಚಾರ ಮತ್ತು ಬೆದರಿಕೆಯಿಂದ ತಮ್ಮ ಆಚರಣೆಯನ್ನು ಮಾಡಲು ಭಯಗೊಂಡಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ದೂರಿಗಾಗಿ ಕಾಯುತ್ತಿದ್ದರು. ಹೀಗಾಗಿ ನಾವು ದೂರು ದಾಖಲಿಸಿದ್ದೇವೆ. ಈಗ ಕ್ರಮಕ್ಕಾಗಿ ಕಾಯೋಣ ಎಂದು ಬರೆದಿದ್ದಾರೆ.
ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಕ್ರಿಶ್ಚಿಯನ್ನರನ್ನು ಮತ್ತು ಚರ್ಚ್ ಅನ್ನು ಗುರಿಯಾಗಿಸಿ ದಾಳಿ ನಡೆದಿವೆ ಎನ್ನಲಾಗಿದೆ. ಮಧ್ಯಪ್ರದೇಶ, ಕೇರಳ, ಛತ್ತೀಸ್‌ಗಢ, ಅಸ್ಸಾಂ, ಉತ್ತರ ಪ್ರದೇಶ, ದೆಹಲಿ ಮತ್ತು ಒಡಿಶಾದಲ್ಲಿ ಘಟನೆಯ ವರದಿಗಳಾಗಿವೆ (ಏಜೆನ್ಸೀಸ್).