ರಾಘವ್ ಛಡ್ಡಾ ಒಬ್ಬರೇ ಪಕ್ಷ ಬಿಟ್ಟಿದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿ ಸದಸ್ಯತ್ವ ಕಳೆದುಕೊಳ್ಳುತ್ತಿದ್ದರು, ಆದರೆ, ಈ ಸಂದರ್ಭದಲ್ಲಿ ಒಬ್ಬ ರಾಜಕೀಯ ಪಂಡಿತನಂತೆ ಯೋಚಿಸಿದ ಅವರು, ರಾಜ್ಯಸಭೆಯ 10 ಆಪ್ ಸಂಸದರಲ್ಲಿ 7 ಮಂದಿಯನ್ನು (ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ) ಒಗ್ಗೂಡಿಸಿ ಬಿಜೆಪಿಯೊಂದಿಗೆ ವಿಲೀನ ಘೋಷಿಸಿದರು. ಸಂವಿಧಾನದ ಪ್ರಕಾರ, ಮೂರನೇ ಎರಡರಷ್ಟು ಸದಸ್ಯರು ವಿಲೀನಗೊಂಡರೆ ಅನರ್ಹತೆಯಿಂದ ರಕ್ಷಣೆ ಸಿಗುತ್ತದೆ ಎಂಬ ಕಾನೂನನ್ನು ಇಲ್ಲಿ ಬಳಸಿಕೊಂಡಿದ್ದಾರೆ.