

Aadhaar Photo Update: ಆಧಾರ್ ಎಂಬ ಪದವು 'ಆಧಾರ' ಅಥವಾ 'ಬುನಾಧಿ' ಎಂಬ ಅರ್ಥವನ್ನು ನೀಡುತ್ತದೆ. ಪ್ರಸ್ತುತ ಭಾರತದಲ್ಲಿ ಸರ್ಕಾರಿ ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರಮುಖ ಆಧಾರವಾಗಿದೆ. ಖಾಸಗಿ ವಲಯದ ಹಲವು ಸೇವೆಗಳಿಗೂ ಇದನ್ನು ಗುರುತಿನ ಚೀಟಿಯಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ. ರೈಲು ಟಿಕೆಟ್ ಬುಕ್ ಮಾಡುವುದಿರಲಿ, ಹೊಸ ಸಿಮ್ ಕಾರ್ಡ್ ಪಡೆಯುವುದಿರಲಿ ಅಥವಾ ಮಗುವನ್ನು ಶಾಲೆಗೆ ಸೇರಿಸುವುದಿರಲಿ, ಮೊದಲು ಕೇಳಲಾಗುವ ದಾಖಲೆಗಳಲ್ಲಿ ಆಧಾರ್ ಪ್ರಮುಖವಾದದ್ದು.